BBK S12 : ಬಿಗ್ ಬಾಸ್ ಕನ್ನಡ ಮನೆಯಲ್ಲಿ ಕಾವ್ಯಾ ಶೈವ ಮತ್ತು ಗಿಲ್ಲಿ ನಟ ಜೋಡಿ ಬಹಳ ಗಮನ ಸೆಳೆದಿದೆ.

BBK S12 : ಈ ವೀಕೆಂಡ್ನ ನಾಮಿನೇಶನ್ ಎಡವಟ್ಟಿಗೆ ಗಿಲ್ಲಿ ಪಡೆದ ಪ್ರತಿಕ್ರಿಯೆ ಕೂಡ ವಿಶೇಷವಾಗಿ ಚರ್ಚೆಗೆ ಬಂದಿತ್ತು.
ಇದಲ್ಲದೆ, ಗಿಲ್ಲಿ ಮೇಲೆ ರಕ್ಷಿತಾಗೆ (Rakshitha Shetty) ಪಾಸೆಸಿವ್ನೆಸ್ ಇರುವುದನ್ನು ಸುದೀಪ್ (Kichcha Sudeep) ಪರೋಕ್ಷವಾಗಿ ಗಮನಿಸಿದ್ದಾರೆ. ಗಿಲ್ಲಿ ಈ ಹಿಂದೆ ಸಹ ಇದನ್ನು ಹಲವಾರು ಬಾರಿ ತೋರಿಸಿದ್ದಾರೆ.
ಬ್ರಾಸ್ಲೈಟ್ ಗಿಫ್ಟ್ ಮತ್ತು ಚರ್ಚೆ
ಫ್ಯಾಮಿಲಿ ವೀಕ್ ಸಂದರ್ಭದಲ್ಲಿ ಕಾವ್ಯಾ ಅವರ ತಂದೆ-ತಾಯಿ ಗಿಲ್ಲಿ ಅವರಿಗೆ ಬೆಳ್ಳಿ ಬ್ರಾಸ್ಲೈಟ್ ಹಾಕಿದ್ದರು. ಇದು ಗಿಲ್ಲಿಯ ಮತ್ತು ಕಾವ್ಯಾ ನಡುವಿನ ಬಾಂಧವ್ಯವನ್ನು ಮತ್ತಷ್ಟು ತೋರಿಸುತ್ತದೆ.
ಇದನ್ನು ಓದಿ : ಭೀಕರ ಕಾರು Accident – ಶಿಕ್ಷಕ ದಾರುಣ ಸಾವು

ಸೂಪರ್ ಸಂಡೇ ವಿತ್ ಸುದೀಪ್ ಎಪಿಸೋಡ್ನಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
ಗಿಲ್ಲಿ ತಮ್ಮ ತತ್ವವನ್ನು ಹೀಗೆ ವಿವರಿಸಿದರು:
“ಬ್ರಾಸ್ಲೈಟ್ ತಂದು ಕೊಡೋದು ನಮ್ಮ ಸಂಪ್ರದಾಯ. ಹೀಗೆ ಮಾಡಿದರೆ ನಿಶ್ಚಿತಾರ್ಥ ಆಗುತ್ತಿತ್ತು.”
ಕಾವ್ಯಾ ಉತ್ತರಿಸಿದರು:
“ನಮ್ಮನೆ ಕಡೆ ರಿಂಗ್ ಕೊಡೋದು ನಿಶ್ಚಿತಾರ್ಥ.”
ಈ ಸಂದರ್ಭದಲ್ಲಿ ರಕ್ಷಿತಾ ಹೇಳಿದರು:
“ಅವರು ಗಿಲ್ಲಿ, ಗಿಲ್ಲಿ ಹೇಳ್ತಾರೆ. ಆಮೇಲೆ ಗಿಲ್ಲಿ ಪಕ್ಕ ಹೋಗಿ ಕೂರ್ತಾರೆ.”
ಸುದೀಪ್ ಅವರು ಗಿಲ್ಲಿಗೆ ಸಲಹೆ ನೀಡಿದರು:
“ಕಾವ್ಯಾ ಎಂಜಾಯ್ ಮಾಡುತ್ತಾರೋ ಇಲ್ಲವೋ ನಿಮಗಂತೂ ಸ್ವಲ್ಪ ಉರಿಯತ್ತೆ. ಕಾವ್ಯ ಅವರನ್ನು ಕಳಿಸಿದರೆ, ನೀವು ಅವರ ಪಕ್ಕ ಕೂರಬಹುದು.”

ಗಿಲ್ಲಿಗೆ ಕಾವ್ಯಾ ಜೊತೆಗೆ ಬಹಳ ಆಪ್ತ ಗೆಳೆತನ ಇದೆ. ಅವರು ಸದಾ ಕಾವ್ಯಾ ಪರ ನಿಲ್ಲುತ್ತಾರೆ.
ಕೆಲವೊಂದು ಟಾಸ್ಕ್ಗಳಲ್ಲಿ, ಕಾವ್ಯಾ ಸೋತಿದ್ದರೂ ಸಹ ಗಿಲ್ಲಿ ಸ್ಪಷ್ಟವಾಗಿ ಕಾವ್ಯಾ ಗೆದ್ದಿದ್ದಾರೆ ಎಂದು ವಾದಿಸಿದ್ದರು. ನಾಮಿನೇಶನ್ ಸಂದರ್ಭದಲ್ಲಿ ಕೂಡ ಗಿಲ್ಲಿಯ ಪಕ್ಷಪಾತ ಬಹಿರಂಗವಾಗಿ ಕಂಡುಬಂದಿತು.

ಅದರ ಬಗ್ಗೆ ಸುದೀಪ್ ಅವರು ಸಮರ್ಥನೆ ಕೇಳಿದಾಗ, ಗಿಲ್ಲಿಗೆ ಮಾತೇ ಹೊರಳಲಿಲ್ಲ. ಕಾವ್ಯಾರನ್ನು ನಾಮಿನೇಟ್ ಮಾಡಲು ಯಾವುದೇ ಕಾರಣ ನೀಡಲಾಗಿರಲಿಲ್ಲ.
ಇದನ್ನು ನೋಡಿ : ಮರಕ್ಕೆ ಕಾರು ಡಿಕ್ಕಿಯಾಗಿ ಆಕ್ಸಿಡೆಂಟ್ – ಕಾರಿನಲ್ಲಿದ್ದ ಶಿಕ್ಷಕ ದಾರುಣ ಸಾ*




