
KANTARA CHAPTER – 1 TRAILER : ಬಹುನಿರೀಕ್ಷಿತ ಕನ್ನಡ ಚಿತ್ರ ‘ಕಾಂತಾರ ಚಾಪ್ಟರ್ 1’ನ ಟೀಸರ್ ಇಂದು ಮಧ್ಯಾಹ್ನ 12:45ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿ ಭಿರ್ಮೆ ಎಂಬ ಬಲಿಷ್ಠ ಬುಡ ಕಟ್ಟು ನಾಯಕನ ಪಾತ್ರದಲ್ಲಿ ಮತ್ತೊಮ್ಮೆ ತಮ್ಮ ಡಿವೈನ್ ಲುಕ್ ಮೂಲಕ ಪ್ರೇಕ್ಷಕರ ಮನಸೆಳೆ ದಿದ್ದಾರೆ. ಕಾಡಿನ ಮಧ್ಯೆ ಕಥೆ ಆರಂಭವಾಗುತ್ತಿದ್ದು, ಅಡಿವಾಸಿ ಜನರ ಸಂಸ್ಕೃತಿ, ನಂಬಿಕೆ, ಸಂಪ್ರದಾಯಗಳ ಕುರಿತ ವಿಶಿಷ್ಟ ಚಿತ್ರಣ ಟ್ರೈಲರ್ನಲ್ಲಿ ಕಾಣಿಸಿದೆ.
ಇನ್ನುಈ ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸುತ್ತಿದ್ದಾರೆ. ಜೊತೆಗೆ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದವರೇ ಆದ ಗುಲ್ಶನ್ ದೇವಯ್ಯ ಈ ಬಾರಿಯ ಕಥೆಯಲ್ಲಿ ‘ರಾಜನ’ ಪಾತ್ರದಲ್ಲಿ ಕಾಣಿಸಿಕೊಳ್ಳು ತ್ತಿದ್ದಾರೆ. ಈ ಹಿಂದೆ ಬಿಡುಗಡೆಯಾದ ಕಾಂತಾರ ಚಾಪ್ಟರ್ 1 ಗ್ಲಿಂಪ್ಸ್, ಪೋಸ್ಟರ್ಗಳು ಮತ್ತು ವಿಡಿಯೋಗಳ ಮೂಲ ಕ ಸಿನಿಮಾ ನಿರೀಕ್ಷೆ ಹೆಚ್ಚಾಗಿದ್ದರೆ, ಈಗ ಟ್ರೈಲರ್ ರಿಲೀಸ್ ಈ ನಿರೀಕ್ಷೆಗೆ ಇನ್ನಷ್ಟು ಬಲ ತುಂಬಿದೆ.
ಇನ್ನು ಈ ಚಿತ್ರ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ. ಪ್ರೇಕ್ಷಕರಲ್ಲಿ ಈಗಾಗಲೇ ಒಂದು ದೈವಿಕ ಸಂಚಲನ ಮೂಡಿಸಿರುವ ‘ಕಾಂತಾರ ಚಾಪ್ಟರ್ 1’ ಇನ್ನಷ್ಟು ದಾಖಲೆ ಬರೆಯುವ ನಿರೀಕ್ಷೆಯಲ್ಲಿದೆ.




