Hassan : ಹೊಸಳ್ಳಿ ಗ್ರಾಮದ 26 ವರ್ಷದ ಯುವಕ ರಕ್ಷಿತ್, ನ್ಯೂ ಇಯರ್ 2026 ಪಾರ್ಟಿಗಾಗಿ ಗೋವಾಗೆ ತೆರಳಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ದುಃಖಕರ ಘಟನೆ ಸಂಬಂಧಿಕರ ಕಣ್ಣೀರು ಹರಿಯುವಂತೆ ಮಾಡಿದೆ.

Hassan : ಅಲ್ಲೂರು ತಾಲ್ಲೂಕಿನ ಹೊಸಳ್ಳಿ ಗ್ರಾಮದ ರಕ್ಷಿತ್, ತಮ್ಮ ಸಹೋದರರಾದ ಚಿದಂಬರಂ ಮತ್ತು ಪ್ರವೀಣ್ ಜೊತೆ ಡಿಸೆಂಬರ್ 31ರಂದು ಗೋವಾದಿ ನ್ಯೂ ಇಯರ್ ಪಾರ್ಟಿ ಮಾಡಿ ಹಬ್ಬವನ್ನು ಆಚರಿಸಿದ್ದರು.
ಜನವರಿ 1ರಂದು ತಿನಿಸು ಮುಗಿಸಿದ ನಂತರ ಅವರು ನಗರವನ್ನು ತಿರುಗಾಡುತ್ತಿದ್ದಾಗ, ರಕ್ಷಿತ್ ಗೆ ದಿಢೀರ್ ಹೃದಯಾಘಾತವಾಗಿದೆ. ಸ್ಥಳೀಯರು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ, ವೈದ್ಯರು ಹೃದಯಾಘಾತದಿಂದ ಅವನು ಮೃತಪಟ್ಟಿರುವುದಾಗಿ ಘೋಷಿಸಿದರು.
ಇದನ್ನು ಓದಿ : PG, Apartment ಗಳಲ್ಲಿ ಈ ಸೌಲಭ್ಯಗಳು ಇಲ್ಲ ಅಂದ್ರೆ ವಾರದಲ್ಲಿ ಬೀಗ ಫಿಕ್ಸ್

ರಕ್ಷಿತ್ ಮೃತದೇಹವನ್ನು ಗೋವಾದಿಂದ ಸ್ವಗ್ರಾಮಕ್ಕೆ ತಂದಾಗ, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ಊರಲ್ಲಿ ಗಂಭೀರ ದುಃಖವನ್ನು ಉಂಟುಮಾಡಿದೆ. ಕುಟುಂಬ ಹಾಗೂ ಗ್ರಾಮಸ್ಥರು ಈ ದುಃಖಕರ ಘಟನೆಯ ಕುರಿತು ಹೇಳಿಕೆ ನೀಡಿದ್ದಾರೆ.
ಇದನ್ನು ನೋಡಿ : ‘ಧುರಂಧರ್’ ಧಮಾಕ; ಕರ್ನಾಟಕದಲ್ಲಿ ಈ ಸಿನಿಮಾ ಗಳಿಸಿದ ಹಣವೆಷ್ಟು ಗೊತ್ತಾ?




