ಯುವತಿ ಅಪಹರಣಕ್ಕೆ ಯತ್ನಿಸಿದ ಆರೋಪದ ಮೇಲೆ ಯೂಟ್ಯೂಬರ್ ಒಬ್ಬನನ್ನು Magadi ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ.

Magadi ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ತಟವಾಳು ಗೊಲ್ಲರಹಟ್ಟಿ ಗ್ರಾಮದಲ್ಲಿ ಅಪ್ರಾಪ್ತ ಯುವತಿಯನ್ನ ಅಪಹರಣ ಮಾಡಲು ಯತ್ನಿಸಿದ ಆರೋಪದಡಿ ಯೂಟ್ಯೂಬರ್ ಒಬ್ಬನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಯುವತಿ ಅಪಹರಣಕ್ಕೆ ಯತ್ನ
ಹೊಸ ವರ್ಷದ ಸಂಭ್ರಮಾಚರಣೆ ಅಂಗವಾಗಿ ಮಾಗಡಿ ಪಟ್ಟಣದ ಶ್ರೀ ಮೊಬೈಲ್ ಅಂಗಡಿ ಮಾಲೀಕ ವೆಂಕಟೇಶ್ ಎಂಬುವರು ತಮ್ಮ ತೋಟದಲ್ಲಿ ಯೂಟ್ಯೂಬರ್ಗಳು ಹಾಗೂ Instagram Reels Makers ಳಿಗೆ ಔತಣಕೂಟ ಆಯೋಜಿಸಿದ್ರು. ಇವರಿಗೆ ಭರ್ಜರಿ ಬಾಡೂಟದೊಂದಿಗೆ ಮದ್ಯದ ವ್ಯವಸ್ಥೆಯೂ ಕೂಡ ಮಾಡಿದ್ದರು.
ಆದರೆ ಅತಿಯಾಗಿ ಮದ್ಯಪಾನ ಮಾಡಿದ ಬಳಿಕ ಶಿರಾ ಮೂಲದ ಯುಟ್ಯೂಬರ್ ರವಿ ಎಂಬಾತ ತಡರಾತ್ರಿ ತೋಟದಿಂದ ಹೊರಬಂದು ಗೊಲ್ಲರಹಟ್ಟಿ ಗ್ರಾಮಕ್ಕೆ ಬಂದಿದ್ದಾನೆ. ಕುಡಿದ ಅಮಲಿನಲ್ಲಿ ಆತ ಅಪ್ರಾಪ್ತ ಯುವತಿಯನ್ನ ಸಲುಗೆಯಿಂದ ಮಾತನಾಡಿಸಿ ಪುಸಲಾಯಿಸಿದ್ದಾನೆ. ಬಳಿಕ ಆಕೆಯ ಬಾಯಿ ಮುಚ್ಚಿ ತನ್ನ ಕಾರಿನೊಳಗೆ ಎಳೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಇದನ್ನು ಓದಿ : ರೆಡ್ಡಿ ಮನೆ ಮುಂದೆ ಬ್ಯಾನರ್ ಗಲಾಟೆ – ಕಾಂಗ್ರೆಸ್ ಕಾರ್ಯಕರ್ತ ಬಲಿ !

ಸಿನಿಮೀಯ ರೀತಿಯಲ್ಲಿ ಆರೋಪಿಯ ಸೆರೆ
ಆರೋಪಿ ಮದ್ಯದ ಅಮಲಿನಲ್ಲಿ ದಾರಿ ತಪ್ಪಿ ಯಾವ ಕಡೆ ಹೋಗೋದು ತಿಳಿಯದೇ ಗ್ರಾಮದ ಸುತ್ತಮುತ್ತ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗೆ ಕಾರಿನಿಂದ ಇಳಿದಿದ್ದಾನೆ.
ಆಗ ಯುವತಿ ತನ್ನ ಮನೆಯವರಿಗೆ ಪೋನ್ ಮಾಡಿ ಮಾಹಿತಿ ನೀಡಿದ್ದಾಳೆ. ಎಚ್ಚೆತ್ತ ಗ್ರಾಮಸ್ಥರು ತಮ್ಮ ವಾಹನಗಳಲ್ಲಿ ಹುಡುಕಾಡಿ, ಹುಲಿಯೂರುದುರ್ಗ-ಮಾಗಡಿ ಮುಖ್ಯರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಕಾರನ್ನ ಹಿಂಬಾಲಿಸಿ ಕಾರನ್ನ ಅಡ್ಡಗಟ್ಟಿ ಆತನನ್ನು ಹಿಡಿದಿದ್ದಾನೆ.
ಪೋಕ್ಸೋ ಪ್ರಕರಣ ದಾಖಲು
ಇನ್ನು ಆರೋಪಿ ರವಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಯ ಜೊತೆ ತಡರಾತ್ರಿ ಮದ್ಯಪಾನದಲ್ಲಿ ತೊಡಗಿದ್ದ ಮಂಡ್ಯ ಮೂಲದ ಸಕ್ಕರೆ ನಾಡು ಕೆಂಪ ನಿಗೂ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ.
ಸದ್ಯ ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಮತ್ತು ಅಪಹರಣ ಪ್ರಕರಣ ದಾಖಲಿಸಿ ಕೊಂಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನು ನೋಡಿ : JAILನಲ್ಲಿ ಖೈದಿಗಳಿಗೆ ಸಿಗ್ತಿದೆ ಹೈಫೈ ಲೈಫ್ – ಜೈಲಿನಲ್ಲಿ ಸಿಗುತ್ತೆ ಎಣ್ಣೆ, ಸಿಗರೇಟ್




