BBK S12 : ಬಿಗ್ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಈ ಮಹತ್ವದ ಹಂತದಲ್ಲಿ ಮನೆಯ ಸದಸ್ಯರಿಗೆ ಕೊನೆಯ ಕ್ಯಾಪ್ಟನ್ ಆಯ್ಕೆ ಮಾಡುವ ಅವಕಾಶವನ್ನು ಬಿಗ್ಬಾಸ್ ನೀಡಿದ್ದಾರೆ.

BBK S12 : ವಿಶೇಷವೆಂದರೆ, ಕೊನೆಯ ಕ್ಯಾಪ್ಟನ್ ಆಗುವ ಸ್ಪರ್ಧಿ ನೇರವಾಗಿ ಫಿನಾಲೆಗೆ ಪ್ರವೇಶ ಪಡೆಯಲಿದ್ದಾರೆ.
ಕೊನೆಯ ಕ್ಯಾಪ್ಟನ್ಸಿಗೆ ಅಶ್ವಿನಿ ಗೌಡ vs ಧನುಷ್
ಕ್ಯಾಪ್ಟನ್ಸಿ ರೇಸ್ನಲ್ಲಿ ಅಶ್ವಿನಿ ಗೌಡ ಮತ್ತು ಧನುಷ್ ನಡುವೆ ತೀವ್ರ ಪೈಪೋಟಿ ನಡೆಯಿತು. ಈ ಸ್ಪರ್ಧೆಗಾಗಿ ಬಿಗ್ಬಾಸ್ ಒಂದು ಸವಾಲಿನ ಟಾಸ್ಕ್ ನೀಡಿದ್ದರು. ಟಾಸ್ಕ್ನ ನಿಯಮಗಳ ಪ್ರಕಾರ, ಪಜಲ್ ತುಂಡುಗಳನ್ನು ತಿರುಗಿಸದೇ ಅಥವಾ ಸ್ಥಳಾಂತರಿಸದೇ, ಚಾಕು ಇರುವ ಪಜಲ್ ತುಂಡನ್ನು ಮೇಜಿನ ಮೇಲ್ಭಾಗದಿಂದ ಕೆಳಭಾಗಕ್ಕೆ ತಂದು ಹೊರತೆಗೆಯಬೇಕು.
ಇದನ್ನು ಓದಿ : Dina Bhavishya|ದಿನ ಭವಿಷ್ಯ 2 ಜನವರಿ 2026

ಟಾಸ್ಕ್ ಫಲಿತಾಂಶ ಮತ್ತು ವಿವಾದ
ಮೊದಲು ಹಗ್ಗ ಕತ್ತರಿಸಿದ ಸ್ಪರ್ಧಿಯನ್ನು ವಿನ್ನರ್ ಎಂದು ಘೋಷಿಸಲಾಗಿತ್ತು. ಈ ಟಾಸ್ಕ್ನಲ್ಲಿ ಧನುಷ್ ಗೆಲುವು ಸಾಧಿಸಿದರು. ಆದರೆ, ಆಟದ ವೇಳೆ ಚಾಕು ಇರುವ ಪಜಲ್ ತುಂಡನ್ನು ನಿಯಮಾನುಸಾರ ಹೊರತೆಗೆದಿರಲಿಲ್ಲವೇ? ಎಂಬ ಪ್ರಶ್ನೆಯನ್ನು ಸ್ವತಃ ಬಿಗ್ಬಾಸ್ ಮುಂದಿಟ್ಟಿದ್ದಾರೆ.

ಧನುಷ್ ಮಾಡಿದ್ರಾ ನಿಯಮ ಉಲ್ಲಂಘನೆ?
ಚಾಕು ಇರುವ ಪಜಲ್ ತುಂಡನ್ನು ಹೊರತೆಗೆಯುವ ಸಂದರ್ಭದಲ್ಲಿ ಧನುಷ್ ಯಡವಟ್ಟು ಮಾಡಿಕೊಂಡಿರುವಂತೆ ಕಾಣಿಸಿಕೊಂಡಿದೆ. ಇದರಿಂದಾಗಿ, ಧನುಷ್ ಮೋಸ ಮಾಡಿ ಗೆದ್ದರಾ? ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಈ ಕಾರಣದಿಂದ ಕೊನೆಯ ಕ್ಯಾಪ್ಟನ್ ಸ್ಥಾನ ಧನುಷ್ ಕೈತಪ್ಪುವ ಸಾಧ್ಯತೆಯೂ ಇದೆ.

ಫಿನಾಲೆಗೆ ಮೊದಲ ಎಂಟ್ರಿ ಯಾರಿಗೆ?
ಹಾಗಾದ್ರೆ, ಧನುಷ್ನೇ ಕೊನೆಯ ಕ್ಯಾಪ್ಟನ್ ಆಗಿ ಫಿನಾಲೆಗೆ ಮೊದಲ ಎಂಟ್ರಿ ಕೊಡ್ತಾರಾ? ಕ್ಯಾಪ್ಟನ್ಸಿ ಸ್ಥಾನ ಅವರ ಕೈತಪ್ಪುತ್ತಾ? ಈ ಕುತೂಹಲಕಾರಿ ಬೆಳವಣಿಗೆಯ ಉತ್ತರವನ್ನು ಮುಂದಿನ ಎಪಿಸೋಡ್ಗಳಲ್ಲಿ ನೋಡಬೇಕಿದೆ.
ದನ್ನು ನೋಡಿ : ಬರ್ತಡೇಗೆ ವಿಶ್ ಮಾಡಿದ್ದಕ್ಕೆ ಹಳೆ ಲವರ್ನನ್ನೇ ಕೊಂದ ಬಾವಿ ಪತಿ




