ಕೊಳ್ಳೇಗಾಲ ಮೂಲದ ರೇಚಣ್ಣ Murder!

ಬೆಂಗಳೂರು ನಗರದ KP ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯ ಮುಂದೆಯೇ ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತನನ್ನು ರೇಚಣ್ಣ ಎಂದು ಗುರುತಿಸಲಾಗಿದ್ದು, ಆತ ಮೂಲತಃ ಕೊಳ್ಳೇಗಾಲದವನು ಎನ್ನಲಾಗಿದೆ. ಇನ್ನು ರೇಚಣ್ಣ ಬೆಂಗಳೂರಿನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದನು.
ಅಪರಿಚಿತರ ಕೃತ್ಯವೇ?
ನೆನ್ನೆ ತಡರಾತ್ರಿ ರೇಚಣ್ಣ ಬಾರ್ನಲ್ಲಿ ಮದ್ಯ ಸೇವಿಸಿ ಮನೆಗೆ ಬಂದಿದ್ದ. ಬಳಿಕ ಮನೆಯಿಂದ ಹೊರಗಡೆ ಬಂದ ವೇಳೆ ಅಪರಿಚಿತ ವ್ಯಕ್ತಿಗಳು ರೇಚಣ್ಣನ ಬೆನ್ನಿಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ ಎನ್ನಲಾಗಿದೆ. ಈ ಘಟನೆ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ನಡೆದಿರುವುದಾಗಿ ತಿಳಿದುಬಂದಿದೆ.
ಇದನ್ನು ಓದಿ : ಹೊಸ ವರ್ಷದ ದಿನ Namma Metro ಗೆ ಬಂಪರ್ ಕಲೆಕ್ಷನ್ !

ಸಾವನ್ನಪ್ಪಿರುವುದು ಪತ್ತೆ
ಗಂಭೀರವಾಗಿ ಗಾಯಗೊಂಡು ರೇಚಣ್ಣ ಮನೆಯ ಮುಂದೆಯೇ ಬಿದ್ದಿದ್ದ. ಕುಡಿದು ಮಲಗಿದ್ದಾನೆ ಎಂದು ಆತನ ಕಡೆ ಯಾರೂ ತಿರುಗಿ ನೋಡಿರಲಿಲ್ಲ. ಬಳಿಕ ಸ್ಥಳಿಯರು ಗಮನಿಸಿದಾಗ ರೇಚಣ್ಣ ಸಾವನ್ನಪ್ಪಿರುವುದು ಪತ್ತೆಯಾಗಿದೆ.
Murder ಮಾಡಿದವರು ಯಾರು?
ಈ ಕುರಿತು KP ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಿದವರು ಯಾರು ಮತ್ತು ಯಾವ ಕಾರಣಕ್ಕೆ Murder ಮಾಡಲಾಗಿದೆ ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖೆ ಬಳಿಕ ಘಟನೆಯ ಸಂಪೂರ್ಣ ವಿವರಗಳು ಬಹಿರಂಗವಾಗಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ನೋಡಿ : ಪೊಲೀಸ್ ಪೇದೆಯ ಪತ್ನಿಗೆ ಮೌನೇಶ್ ಶೀಕಲ್ ಕಿರುಕುಳ, ಬ್ಲಾಕ್ ಮೇಲ್ : ಆತ್ಮಹತ್ಯೆಗೆ ಶರಣಾದ ಪೇದೆಯ ಪತ್ನಿ ರಕ್ಷಿತಾ

