Ganavi Suraj Suicide Case ರಾಜ್ಯಾದ್ಯಂತ ಚರ್ಚೆಯಾಗಿದ್ದ ನವವಿವಾಹಿತರ ಗಾನವಿ–ಸೂರಜ್ ಆತ್ಮಹತ್ಯೆ ಪ್ರಕರಣ ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ.

Ganavi Suraj Suicide Case ಗೆ ಬಿಗ್ ಟ್ವಿಸ್ಟ್ .ಸೂರಜ್ ಆತ್ಮಹತ್ಯೆಗೆ ಗಾನವಿ ಕುಟುಂಬಸ್ಥರೇ ಕಾರಣ ಎಂಬ ಆರೋಪದಡಿ, ಗಾನವಿ ಕುಟುಂಬದ 9 ಮಂದಿ ವಿರುದ್ಧ FIR ದಾಖಲಾಗಿದೆ.
ಅತ್ತಿಗೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲು
ಸೂರಜ್ ಸಹೋದರ ಸಂಜಯ್ ಅವರ ಪತ್ನಿ, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದರ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೂರಿನಲ್ಲಿ, ಗಾನವಿ ಕುಟುಂಬಸ್ಥರ ಸುಳ್ಳು ಆರೋಪಗಳು, ಮಾನಸಿಕ ಕಿರುಕುಳ ಮತ್ತು ಜೀವ ಬೆದರಿಕೆಗಳೇ ಸೂರಜ್ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ.

ಹನಿಮೂನ್ ವೇಳೆ ಬಹಿರಂಗವಾದ ಹಳೆಯ ಪ್ರೇಮ ವಿಚಾರ
ದೂರು ವಿವರಗಳ ಪ್ರಕಾರ, ಹನಿಮೂನ್ಗೆಂದು ಶ್ರೀಲಂಕಾಕ್ಕೆ ತೆರಳಿದ್ದ ವೇಳೆ ಗಾನವಿ ತನ್ನ ಹಳೆಯ ಪ್ರೇಮ ಸಂಬಂಧದ ವಿಚಾರವನ್ನು ಸೂರಜ್ಗೆ ತಿಳಿಸಿದ್ದಾಳೆ.
ಹರ್ಷ ಎಂಬಾತನನ್ನು ಪ್ರೀತಿಸುತ್ತಿದ್ದು, ಅವನನ್ನೇ ಮದುವೆಯಾಗಲು ಇಚ್ಛೆ ವ್ಯಕ್ತಪಡಿಸಿದ್ದಾಳೆ ಎನ್ನಲಾಗಿದೆ. ಈ ವಿಚಾರದಿಂದ ಸೂರಜ್ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾನೆ.
ಈ ವಿಷಯವನ್ನು ಮುಚ್ಚಿಟ್ಟು, ಸೂರಜ್ ಹಾಗೂ ಅವರ ತಾಯಿ ಜಯಂತಿ ವಿರುದ್ಧ ವರದಕ್ಷಿಣೆ ಕಿರುಕುಳ, ಮಾನಹಾನಿಕಾರ ಆರೋಪಗಳು ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇದರಿಂದ ಮನನೊಂದ ಸೂರಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಘಟನೆ ಬಳಿಕ ಸೂರಜ್ ತಾಯಿ ಜಯಂತಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
9 ಮಂದಿಯ ವಿರುದ್ಧ FIR
ಪೊಲೀಸರು ಗಾನವಿ ಕುಟುಂಬಸ್ಥರಾದ ರಾಧಾ, ಬಾಬುಗೌಡ, ಕಾರ್ತಿಕ್, ಮಹದೇವ, ಗಗನ್, ಶಶಿಕುಮಾರ್, ರುಕ್ಮಿಣಿ, ಅಭಿಲಾಷ್, ಅಭಿಷೇಕ್
ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ
2024ರ ಅಕ್ಟೋಬರ್ 29ರಂದು ಗಾನವಿ ಮತ್ತು ಸೂರಜ್ ವಿವಾಹ ನಡೆದಿದ್ದು, ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ ಅದ್ದೂರಿ ಮದುವೆ ಆಯೋಜಿಸಲಾಗಿತ್ತು. ನಂತರ ಹನಿಮೂನ್ಗೆ ಶ್ರೀಲಂಕಾಕ್ಕೆ ತೆರಳಿದ್ದ ದಂಪತಿ ಅರ್ಧದಲ್ಲೇ ಹಿಂದಿರುಗಿದ್ದರು. ಅದಾದ ಬಳಿಕ 26 ವರ್ಷದ ಗಾನವಿ ಆತ್ಮಹತ್ಯೆ ಯತ್ನ ನಡೆಸಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು.
ಗಾನವಿ ಸಾವಿಗೆ ಸೂರಜ್ ಕುಟುಂಬಸ್ಥರೇ ಕಾರಣ ಎಂದು ಆರೋಪಗಳು ಕೇಳಿಬಂದಿದ್ದ ಸಂದರ್ಭದಲ್ಲೇ, ಸೂರಜ್ ಆತ್ಮಹತ್ಯೆ ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ.
ಈ ಪ್ರಕರಣದಲ್ಲಿ ಎಲ್ಲ ಆಯಾಮಗಳನ್ನು ಪರಿಶೀಲಿಸಲಾಗುತ್ತಿದ್ದು, ಪೊಲೀಸರು ಮುಂದಿನ ತನಿಖೆಯನ್ನು ತೀವ್ರಗೊಳಿಸಿದ್ದಾರೆ.




