Karwar: ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವಕನೋರ್ವ ಯುವತಿಯ ಜೊತೆ ಅನುಚಿತ ವರ್ತನೆ ತೋರಿದ್ದು, ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.

Karwar: ಕಾರವಾರದಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಪಕ್ಕದಲ್ಲಿ ಕುಳಿತಿದ್ದ ಯುವಕ ಲೈಂಗಿಕ ಕಿರುಕುಳ (sexual harassment) ನೀಡಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಬಸ್ಸಿನಲ್ಲಿ ಯುವತಿಗೆ Sexual Harassment
ಯುವತಿಯು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಿದ್ದೆಗೆ ಜಾರಿದ್ದು, ಈ ವೇಳೆ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಯುವಕನೋರ್ವ ಆಕೆಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಇನ್ನು ಯುವತಿಗೆ ಏನೋ ಸ್ಪರ್ಶಿಸಿದಂತಾಗಿ ನಿದ್ದೆಯಿಂದ ಎಚ್ಚರಗೊಂಡ ಬಳಿಕ ಯುವಕ ಯುವತಿಯ ಎದೆಯ ಮೇಲೆ ಕೈ ಇಟ್ಟಿರುವುದನ್ನು ಗಮನಿಸಿದ್ದಾಳೆ.
ಕೂಡಲೇ ಆಕೆ ಎದರದೇ ತಕ್ಷಣವೇ ಮೊಬೈಲ್ ಹೊರತೆಗೆದು ಆರೋಪಿಯ ಕೃತ್ಯವನ್ನು ವಿಡಿಯೋ ಮಾಡಿದ್ದಾಳೆ. ಬಳಿಕ ಯುವತಿ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ತರಾಟೆಗೆ ತೆಗೆದುಕೊಂಡು ಆತನಿಗೆ ಹೊಡೆದಿದ್ದಾಳೆ.
ಇದನ್ನೂ ಓದಿ : Ganavi Suraj Suicide Case ಗೆ ಬಿಗ್ ಟ್ವಿಸ್ಟ್ .. 9 ಮಂದಿ ಮೇಲೆ FIR..!

ಸೋಶಿಯಲ್ ಮೀಡಿಯಾದಲ್ಲಿ Video Viral.!
ಇನ್ನು ಯುವತಿಯು ಈ ಬಗ್ಗೆ ಭಯಪಡದೇ ಸೋಶಿಯಲ್ ಮೀಡಿಯಾದಲ್ಲಿ (Social Media) ಈ ಬಗ್ಗೆ ವಿಡಿಯೋ ಮಾಡಿ ಅಂಕೋಲಾ ಪೊಲೀಸರಿಗೆ ಟ್ಯಾಗ್ ಮಾಡಿ ಬಸ್ನಲ್ಲಿ ಆತನ ಬಣ್ಣ ಬಯಲು ಮಾಡಿದ್ದಾಳೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಕಾಮುಕನ ಕೃತ್ಯವನ್ನು ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್ (Viral) ಆಗಿರುವ ವಿಡಿಯೋದಲ್ಲಿ ‘ನಮ್ಮ ರಕ್ಷಣೆಗೆ ನಾವೇ ಮುಂದಾಗಬೇಕು, ಇಂತಹ ಕಾಮುಕರಿಗೆ ತಕ್ಕ ಶಾಸ್ತಿಯಾಗಬೇಕು’ ಎಂದು ಸಂದೇಶ ನೀಡಿದ್ದಾರೆ. ಅಲ್ಲದೆ, ಪೊಲೀಸ್ ಹಿರಿಯ ಅಧಿಕಾರಿಗಳನ್ನು ಟ್ಯಾಗ್ ಮಾಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಅಂಕೋಲಾ ಠಾಣೆಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಲ್ದೇ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಬಸ್ಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
MUST WATCH: TUMAKURU | ಹೊಸ ವರ್ಷಾಚರಣೆಗೂ ಮುನ್ನ ಅಪಘಾ ಗಂಭೀರ ಗಾಯಗಳಾಗಿ ಬೈಕ್ ಸವಾರ ಸಾ*




