
KALBURGI RAIN EFFECT : ಕಲಬುರಗಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಯಡ್ರಾಮಿ ಪಟ್ಟಣದ ಹಳೆ ಬಜಾರ್ ಪ್ರದೇಶದಲ್ಲಿ ಮನೆ ಗೋಡೆ ಕುಸಿತದ ದುರಂತದಲ್ಲಿ 17 ವರ್ಷದ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ.
ಮೃತ ಬಾಲಕಿಯನ್ನು ಸಾನಿಯಾ ಸೈಪನಸಾಬ್ ತಾಂಬೋಳಿ ಎಂದು ಗುರುತಿಸಲಾಗಿದೆ. ಹಳೆಯದಾದ ಕಲ್ಲಿನ ಮನೆಯ ಒಂದು ಭಾಗದ ಗೋಡೆ ಕುಸಿದ ಪರಿಣಾಮ ಈ ಅವಘಡ ಸಂಭವಿಸಿದೆ. ನಿರಂತರ ಮಳೆ ಹಿನ್ನೆಲೆ ಗೋಡೆ ತೇವಗೊಂಡು ಬಾಲಕಿ ಮಲಗಿದ್ದ ವೇಳೆ ಕುಸಿದಿದೆ. ಪರಿಣಾಮ ಕಲ್ಲಿನಡಿ ಸಿಲುಕಿ ಬಾಲಕಿ ಸಾನಿಯಾ ಸೈಪನಸಾಬ್ ತಾಂಬೋಳಿ ಮೃತಪಟ್ಟಿದ್ದಾಳೆ
ಈ ದುರ್ಘಟನೆಯಲ್ಲಿ ಇನ್ನೂ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಮಹಿಬೂಬ್, ನಿಶಾದ್, ಆಯಿಷಾ ಮತ್ತು ರಮಜಾನ್ ಎಂಬ ಮಕ್ಕಳು ಗಾಯಗೊಂಡಿದ್ದಾರೆ. ಸದ್ಯ ಇವರ ಸ್ಥಿತಿ ಗಂಭಿರವಾಗಿದ್ದು, ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಘಟನಾ ಸ್ಥಳಕ್ಕೆ ಸ್ಥಳೀಯ ಆಡಳಿತ, ಅಗ್ನಿಶಾಮಕ ದಳ ಮತ್ತು ಪೊಲೀಸರು ಭೇಟಿ ನೀಡಿ ಪರಿ ಶೀಲಿಸಿದ್ದಾರೆ.




