
CHAMARAJANAGARA MURDER : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸಂದ್ಯಾಯ ನಪಾಳ್ಯ ಗ್ರಾಮದಲ್ಲಿ ಮಗನೇ ತನ್ನ ತಂದೆಯನ್ನು ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ನೆನ್ನೆ ರಾತ್ರಿ ನಡೆದಿದೆ.
ಸಂದ್ಯಾಯನಪಾಳ್ಯ ಗ್ರಾಮ ನಿವಾಸಿ ಪಾಕಿಯನಾಥನ್ (55) ಎಂಬುವವರು ಕೊಲೆಯಾ ದವರು. ಅವರ ಪುತ್ರ ಜಾನ್ಸನ್ ಕೊಲೆ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾನ್ಸನ್ ತನ್ನ ಪತ್ನಿಯೊಂದಿಗೆ ತಂದೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಗಂಭೀರ ಅಪನಂಬಿಕೆಗೆ ಒಳಗಾಗಿದ್ದ. ಈ ಸಂಬಂಧವಾಗಿ ತಂದೆ ಮತ್ತು ಮಗನ ನಡುವೆ ನೆನ್ನೆ ರಾತ್ರಿ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಜಾನ್ಸನ್ ಕಲ್ಲಿನಿಂದ ಪಾಕಿಯನಾಥನ್ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಪರಿಣಾಮವಾಗಿ ಪಾಕಿಯನಾಥನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಇನ್ನು ಈ ಕುರಿತು ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜಾನ್ಸನ್ ನನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




