
CRICKETER ABHISHEK SHARMA : ಏಷ್ಯಾಕಪ್ 2025ರ ಸೂಪರ್–4 ಹಂತದ ಬಹು ನಿರೀಕ್ಷಿತ ಭಾರತ–ಪಾಕಿಸ್ತಾನ ಪಂದ್ಯದಲ್ಲಿ, ಟೀಮ್ ಇಂಡಿಯಾದ ಎಡಗೈ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಉತ್ತಮ ಪ್ರದರ್ಶನ ನೀಡಿದ್ದು, ಸಿಕ್ಸರ್ ಮೂಲಕ ವಿಶಿಷ್ಟ ವಿಶ್ವ ದಾಖಲೆ ಸರಿಗಟ್ಟಿದ್ದಾರೆ. ಇನಿಂಗ್ಸ್ನ ಮೊದಲ ಎಸೆತ ವನ್ನೇ ಸಿಕ್ಸರ್ ಮೂಲಕ ಆರಂಭಿಸಿದ ಅವರು, ಕೇವಲ 20 ಇನಿಂಗ್ಸ್ಗಳಲ್ಲಿ 50 ಸಿಕ್ಸರ್ಗಳನ್ನು ಬಾರಿಸಿ ವೆಸ್ಟ್ ಇಂಡೀಸ್ನ ಎವಿನ್ ಲೆವಿಸ್ ಅವರ ದಾಖಲೆಯನ್ನು ಸರಿಗಟ್ಟಿದರು.
ಅಭಿಷೇಕ್ ಶರ್ಮ 74 ರನ್ಗಳ ಆಕರ್ಷಕ ಇನ್ನಿಂಗ್ಸ್ನಲ್ಲಿ 5 ಸಿಕ್ಸರ್ ಹಾಗೂ 6 ಬೌಂಡರಿ ದಾಖಲಿಸಿ ಪಾಕಿಸ್ತಾ ನ ಬೌಲರ್ಗಳನ್ನು ತೀವ್ರ ಒತ್ತಡಕ್ಕೆ ತಂದುಹಾಕಿದರು. ಭಾರತದ ಗೆಲುವಿಗೆ ಭದ್ರಬುನಾದಿಯನ್ನಿಟ್ಟ ಈ ಇನ್ನಿಂಗ್ಸ್ನೊಂದಿಗೆ ಅವರು ಟಿ20 ಕ್ರಿಕೆಟ್ನಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ.
ಪಾಕಿಸ್ತಾನ ನೀಡಿದ 172 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ, ಅಭಿಷೇಕ್ ಮತ್ತು ಶುಭಮನ್ ಗಿಲ್ ಜೋಡಿಯ 105 ರನ್ಗಳ ಅಬ್ಬರದ ಜೊತೆಯಾಟದ ಆಧಾರದ ಮೇಲೆ ಸುಲಭ ಜಯವನ್ನು ಸಾಧಿಸಿತು. ಗಿಲ್ 47 ರನ್ ಗಳಿಸಿ ಅರ್ಧಶತಕದ ಹತ್ತಿರವೇ ಔಟಾ ದ್ರು. ನಾಯಕ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ನಿರಾಸೆ ನೀಡಿದರು. ಮೂರು ಎಸೆತ ಎದುರಿಸಿ ಶೂನ್ಯಕ್ಕೆ ಔಟಾದರು.
ತಿಲಕ್ ವರ್ಮಾ (ಅಜೇಯ 30) ಮತ್ತು ಹಾರ್ದಿಕ್ ಪಾಂಡ್ಯ (ಅಜೇಯ 7) ನಡುವೆ ಉತ್ತಮ ಜೊತೆಯಾಟ ಕಂಡು ಬಂದಿದ್ದು, ಭಾರತ 4 ವಿಕೆಟ್ ನಷ್ಟಕ್ಕೆ ಗುರಿಯಾಗುವ ಮೂಲಕ ಗುರಿ ತಲುಪಿತು. ಸಂಜು ಸ್ಯಾಮ್ಸನ್ (13) ಅವರು ರವೂಫ್ ಬೌಲಿಂಗ್ ಗೆ ಔಟಾದರು.




