Mexico ದಲ್ಲಿ ರೈಲು ದುರಂತ – 13 ಮಂದಿ ದಾರುಣ ಸಾವು.

ದಕ್ಷಿಣ ಮೆಕ್ಸಿಕೋದ ಓಕ್ಸಾಕಾ ಪ್ರದೇಶದಲ್ಲಿ ಇಂಟರ್ ಓಷಿಯಾನಿಕ್ ರೈಲು ಹಳಿ ತಪ್ಪಿ, 13 ಮಂದಿ ಸಾವನ್ನಪ್ಪಿದ್ದು, 98 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
13 ಮಂದಿ ದಾರುಣ ಸಾವು
ಒಂಬತ್ತು ಸಿಬ್ಬಂದಿ ಹಾಗೂ 241 ಪ್ರಯಾಣಿಕರನ್ನು ಸೇರಿ ಒಟ್ಟು 250 ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಸಲೀನಾ ಕ್ರೂಜ್ ಬಂದರುದಿಂದ ಕೋಟ್ಜಾಕೋಲ್ಕೋಸ್ಗೆ ಹೊರಡುತ್ತಿತ್ತು. ಈ ವೇಳೆ ನಿಜಾಂಡಾ ಪಟ್ಟಣದ ಬಳಿ ರೈಲು ಹಳಿ ತಪ್ಪಿದೆ. ಪರಿಣಾಮ ಪರಿಣಾಮ 13 ಜನರು ಸಾವನ್ನಪ್ಪಿದ್ದು, 98 ಜನರು ಗಾಯಗೊಂಡಿದ್ದಾರೆ. ಈಗಾಗಲೇ 36 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ 193 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : U-19 ವಿಶ್ವಕಪ್ಗೆ ಟೀಮ್ ಇಂಡಿಯಾ ಪ್ರಕಟ – ವೈಭವ್ ಸೂರ್ಯವಂಶಿಗೆ ನಾಯಕತ್ವ

ತನಿಖೆ ಆರಂಭ
Mexico ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ಎಕ್ಸ್ನಲ್ಲಿ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ಅಗತ್ಯ ಸಹಾಯ ಮಾಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಮೆಕ್ಸಿಕೋದ ಅಟಾರ್ನಿ ಜನರಲ್ ಕಚೇರಿ ಈಗಾಗಲೇ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ ಎಂದು ಹೇಳಿದ್ದಾರೆ.
2023ರಲ್ಲಿ ಉದ್ಘಾಟಿತ
ಆಘಾತಕ್ಕೀಡಾದ ಇಂಟರ್ ಓಷಿಯಾನಿಕ್ ರೈಲು 2023ರಲ್ಲಿ ಉದ್ಘಾಟಿತವಾಗಿದ್ದು, ಮೆಕ್ಸಿಕೋದ ಪೆಸಿಫಿಕ್ ಬಂದರು ಸಲೀನಾ ಕ್ರೂಜ್ ಅನ್ನು ಗಲ್ಫ್ ಕರಾವಳಿಯ ಕೋಟ್ಜಾಕೋಲ್ಕೋಸ್ಗೆ ಸಂಪರ್ಕಿಸುವ ವಿಶಾಲ ಇಂಟರ್ ಓಷಿಯಾನಿಕ್ ಕಾರಿಡಾರ್ ಯೋಜನೆಯ ಭಾಗವಾಗಿದೆ.

ಇದನ್ನು ನೋಡಿ : ZERO TRAFFIC ನಲ್ಲಿ ಶಿಶು ರವಾನೆ – ಆಂಬುಲೆನ್ಸ್ ಗೆ ನೆರವಾದ ಪೊಲೀಸರು




