Cricket : ಸೌತ್ ಆಫ್ರಿಕಾ ಅಂಡರ್ 19 ವಿರುದ್ಧದ ಸರಣಿಗೆ ಭಾರತ ಅಂಡರ್ 19 ತಂಡ ಪ್ರಕಟವಾಗಿದೆ. ನಾಯಕ ಆಯುಷ್ ಮ್ಹಾತ್ರೆ ಇಂಜುರಿಗೆ ತುತ್ತಾಗಿದ್ದು, ಸರಣಿಯಿಂದ ಹೊರಬಿದ್ದಿದ್ದಾರೆ.

Cricket : ಸೌತ್ ಆಫ್ರಿಕಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಸರಣಿಗೆ ಭಾರತ U-19 ತಂಡಕ್ಕೆ 14 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ನಾಯಕತ್ವ ನೀಡಲಾಗಿದೆ.
ಇಂಜುರಿಯಿಂದ ಆಯುಷ್ ಮ್ಹಾತ್ರೆ ಔಟ್; ಭಾರತ U-19 ತಂಡಕ್ಕೆ ಹೊಸ ನಾಯಕ
ಜನವರಿ 3ರಿಂದ ಆರಂಭವಾಗಲಿರುವ ಈ 3 ಪಂದ್ಯಗಳ ಸರಣಿ, ಮುಂಬರುವ U-19 ವಿಶ್ವಕಪ್ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಿಸಿಕೊಳ್ಳಲು ಮುಖ್ಯವಾಗಿದೆ.

ಇದರ ನಡುವೆಯೇ, ಮುಂಬರುವ ಪ್ರತಿಷ್ಠಿತ ಅಂಡರ್-19 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟಿಸಲಾಗಿದೆ.15 ಆಟಗಾರರ ಬಲಿಷ್ಠ ತಂಡಕ್ಕೆ ಆಯುಷ್ ಮ್ಹಾತ್ರೆ ನಾಯಕನಾಗಿದ್ದಾರೆ.
ವೈಭವ್ ಸೂರ್ಯವಂಶಿ, ಕನಿಷ್ಕ್ ಚೌಹಾಣ್, ವಿಹಾನ್ ಮಲ್ಹೋತ್ರ, ಅಭಿಜ್ಞಾನ್ ಕುಂದು ಸೇರಿದಂತೆ ಹಲವರು ತಂಡದಲ್ಲಿದ್ದಾರೆ. ಭಾರತ ಜನವರಿ 15ರಂದು USA ವಿರುದ್ಧದ ಪಂದ್ಯದಿಂದ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ : ವಿಶ್ವ ದಾಖಲೆಯ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ
ಕಮ್ಬ್ಯಾಕ್ಗೆ ಶ್ರೇಯಸ್ ಅಯ್ಯರ್ ಕಸರತ್ತು
ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಕಮ್ಬ್ಯಾಕ್ಗೆ ತಯಾರಿ ನಡೆಸಿದ್ದಾರೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಫಿಟ್ನೆಸ್ ಟೆಸ್ಟ್ಗೆ ಒಳಗಾಗಿರುವ ಶ್ರೇಯಸ್, ನೆಟ್ಸ್ನಲ್ಲಿ ಕೆಲ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಮರು ಪ್ರವೇಶ ಮಾಡುವ ಸಾಧ್ಯತೆ ಇದೆ.

ಬ್ರೆಟ್ ಲೀಗೆ ಹಾಲ್ ಆಫ್ ಫೇಮ್ ಗೌರವ
ಆಸ್ಟ್ರೇಲಿಯಾ ತಂಡದ ದಿಗ್ಗಜ ವೇಗಿ ಬ್ರೆಟ್ ಲೀಗೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್ ಗೌರವ ಘೋಷಿಸಿದೆ. ಆಸೀಸ್ ಪರ 76 ಟೆಸ್ಟ್ ಪಂದ್ಯಗಳಲ್ಲಿ 310 ವಿಕೆಟ್ ಹಾಗೂ 221 ಏಕದಿನ ಪಂದ್ಯಗಳಲ್ಲಿ 221 ವಿಕೆಟ್ ಕಬಳಿಸಿರುವ ಬ್ರೆಟ್ ಲೀ ಪ್ರಮುಖ ಪಾತ್ರ ವಹಿಸಿದ್ದರು.
ಐಎಲ್ಟಿ20ನಲ್ಲಿ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್
ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ ಕಿರನ್ ಪೊಲಾರ್ಡ್ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ದುಬೈ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್ನಲ್ಲಿ 30 ರನ್ಗಳಿಸಿ ಮಿಂಚಿದ ಪೊಲಾರ್ಡ್, ಟಿ20 ಕ್ರಿಕೆಟ್ನಲ್ಲಿ ನಾಯಕನಾಗಿ 300 ಸಿಕ್ಸರ್ ಸಿಡಿಸಿದ ಸಾಧನೆಗೂ ಪಾತ್ರರಾಗಿದ್ದಾರೆ.
MUST WATCH : ತಿಪಟೂರು ಜನರಿಗೆ ತಪ್ಪದ ಸಂಕಷ್ಟ – ಚಿರತೆ ಸೆರೆ ಸಿಕ್ಕರು ಜನರಿಗೆ ಚಿಂತೆ




