Love Sex Dhoka : ಪ್ರೀತಿ-ಪ್ರೇಮ-ಮದುವೆ ಹೆಸರಿನಲ್ಲಿ ಯುವತಿಯಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Love Sex Dhoka : ಹರಿಯಾಣ ಮೂಲದ ಶುಭಾಂಶು ಶುಕ್ಲಾ ಬಂಧಿತ ಆರೋಪಿ. ಕಳೆದ ನಾಲ್ಕು–ಐದು ವರ್ಷಗಳಿಂದ ಬೆಂಗಳೂರು ಟಿ. ದಾಸರಹಳ್ಳಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು.
ಆರೋಪಿಯು ಮೊದಲು ಬಾಲಕಿಯೊಂದಿಗೇ ಸ್ನೇಹ ಬೆಳೆಸಿ, ಆ ಮೂಲಕ ಕುಟುಂಬದವರ ಪರಿಚಯ ಮಾಡಿಕೊಂಡಿದ್ದ. ಮನೆಮಗನಂತೆ ನಟಿಸಿ ವಿಶ್ವಾಸ ಗಳಿಸಿದ್ದ ಶುಭಾಂಶು, ಬಳಿಕ ಬಾಲಕಿಯ ಸಹೋದರಿಯನ್ನು ಪ್ರೇಮ ಬಲೆಯಲ್ಲಿ ಬೀಳಿಸಿದ್ದಾನೆ. ನಂತರ ಖಾಸಗಿ ಫ್ಲಾಟ್ನಲ್ಲಿ ಯುವತಿಯನ್ನು ಇಟ್ಟುಕೊಂಡು ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದನು.
ಇದನ್ನು ಓದಿ : Dina Bhavishya|ದಿನ ಭವಿಷ್ಯ 28 ಡಿಸೆಂಬರ್ 2025
ಮದುವೆ ನೆಪದಲ್ಲಿ ಲಕ್ಷಾಂತರ ಹಣ ವಸೂಲಿ..
ಮದುವೆಯಾಗುವುದಾಗಿ ಭರವಸೆ ನೀಡಿ ಯುವತಿಯಿಂದ ಹಂತಹಂತವಾಗಿ ಸುಮಾರು ₹37 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾನೆ. ಈ ನಡುವೆ ಆರೋಪಿಗೆ ಈಗಾಗಲೇ ಬೇರೆ ಮದುವೆಯಾಗಿರುವ ವಿಚಾರ ಯುವತಿಗೆ ಗೊತ್ತಾಗಿದೆ.
ಈ ಬಗ್ಗೆ ಪ್ರಶ್ನಿಸಿದ ಯುವತಿಗೆ, ವಿಚ್ಛೇದನ ಪಡೆಯುತ್ತೇನೆ ಎಂದು ಹೇಳಿ ಮತ್ತೆ ಹಣ ಪಡೆದುಕೊಂಡಿದ್ದಾನೆ. ಜೊತೆಗೆ ಯುವತಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದನು ಎಂಬ ಆರೋಪ ಕೇಳಿಬಂದಿದೆ.
ಪೊಲೀಸ್ ಕ್ರಮ
ಯುವತಿಯ ದೂರಿನ ಮೇರೆಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕೆಂದು ಪೀಡಿತೆ ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನು ನೋಡಿ : NEW YEAR CELEBRATION PLAN ಮಾಡ್ತಿದ್ರಾ? ಇಲ್ಲಿದೆ ಒಂದು ಬಂಪರ್ ಸುದ್ದಿ | ROYAL HEVAN TUMAKURU




