Kitchen Recipe : ಬೆಳಗಿನ ಹೊತ್ತಿನಲ್ಲಿ ಅಡುಗೆ ಮಾಡಲು ಮನಸ್ಸಿಲ್ಲದ ಸಮಯಗಳು ಎಲ್ಲರಿಗೂ ಬರುತ್ತವೆ. ಅಂತಹ ಸಂದರ್ಭಗಳಲ್ಲಿ ಬೇಗ ತಯಾರಾಗುವ, ರುಚಿಕರ ಮತ್ತು ಬಾಯಿಗೆ ಹಿತವಾಗುವ ಬ್ರೇಕ್ಫಾಸ್ಟ್ ಬೇಕೆಂದರೆ ಈ ಚೀಸೀ ಗಾರ್ಲಿಕ್ ಬ್ರೆಡ್ ಅತ್ಯುತ್ತಮ ಆಯ್ಕೆ.

Kitchen Recipe : ಕಡಿಮೆ ಸಾಮಗ್ರಿಗಳಲ್ಲಿ, ಕಡಿಮೆ ಸಮಯದಲ್ಲಿ ತಯಾರಾಗುವ ಈ ರೆಸಿಪಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ಇಷ್ಟವಾಗುತ್ತದೆ.
ಬೇಕಾಗುವ ಸಾಮಗ್ರಿಗಳು (Ingredients)
- ಬೆಳ್ಳುಳ್ಳಿ
- ಬೆಣ್ಣೆ
- ಈರುಳ್ಳಿ
- ಕೊತ್ತಂಬರಿ ಸೊಪ್ಪು
- ಆರಿಗ್ಯಾನೋ
- ಚಿಲ್ಲಿ ಫ್ಲೇಕ್ಸ್
- ಎಣ್ಣೆ
- ಚೀಸ್
- ಬ್ರೆಡ್ ಅಥವಾ ಬನ್
ಇದನ್ನು ಓದಿ : ಬಿಗ್ ಬಾಸ್ ಮನೆಗೆ ಬಂತು ಗಿಲ್ಲಿ ಕುಟುಂಬ
ಚೀಸೀ ಗಾರ್ಲಿಕ್ ಬ್ರೆಡ್ ಮಾಡುವ ವಿಧಾನ
ಮೊದಲು ಒಂದು ಕಡಾಯಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಅದಕ್ಕೆ ಬೆಳ್ಳುಳ್ಳಿಯನ್ನು ಸೇರಿಸಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಕರಿಯಿರಿ. ನಂತರ ಅದನ್ನು ಸ್ವಲ್ಪ ಸ್ಮ್ಯಾಶ್ ಮಾಡಿ, ಬೆಣ್ಣೆ ಸೇರಿಸಿ ಕರಗಿಸಿಕೊಳ್ಳಿ.
ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಆರಿಗ್ಯಾನೋ ಮತ್ತು ಚಿಲ್ಲಿ ಫ್ಲೇಕ್ಸ್ ಹಾಕಿ ಚೆನ್ನಾಗಿ ಕಲಸಿ.
ಈ ಮಿಶ್ರಣವನ್ನು ಬ್ರೆಡ್ ಅಥವಾ ಬನ್ ಮೇಲೆ ಸಮವಾಗಿ ಹಚ್ಚಿ. ಮೇಲಿಂದ ಚೆನ್ನಾಗಿ ತುರಿದ ಚೀಸ್ ಹಾಕಿ.
ಇದೀಗ ಒಂದು ಕಡಾಯಿಯಲ್ಲಿ ಬನ್ ಇಟ್ಟು, ಮುಚ್ಚಳ ಹಾಕಿ ಮಧ್ಯಮ ಉರಿಯಲ್ಲಿ ಸ್ವಲ್ಪ ಹೊತ್ತು ಫ್ರೈ ಮಾಡಿ. ಚೀಸ್ ಚೆನ್ನಾಗಿ ಕರಗಿದ ನಂತರ ತೆಗೆದು, ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿದರೆ ರುಚಿಯಾದ ಚೀಸೀ ಗಾರ್ಲಿಕ್ ಬ್ರೆಡ್ ಸಿದ್ಧ.
ಈ ರೆಸಿಪಿ ವಿಶೇಷ?
- ಕಡಿಮೆ ಸಮಯದಲ್ಲಿ ತಯಾರಾಗುತ್ತದೆ
- ಮಕ್ಕಳಿಗೆ ಇಷ್ಟವಾಗುವ ರುಚಿ
- ಬ್ರೇಕ್ಫಾಸ್ಟ್ ಅಥವಾ ಈವಿನಿಂಗ್ ಸ್ನ್ಯಾಕ್ಗೆ ಸೂಕ್ತ
- ಕಡಿಮೆ ಸಾಮಗ್ರಿಗಳ ಬಳಕೆ
ಇದನ್ನು ನೋಡಿ : ಬಸ್ ಅಪಘಾತ: ಮದುವೆಗೂ ಮುನ್ನ ಮಸಣ ಸೇರಿದ ಯುವತಿ; ಕಂದಮ್ಮ ಅಗ್ನಿಗೆ ಆಹುತಿ




