ತಂದೆಯೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕಾಲುವೆಗೆ ತಳ್ಳಿದ ಘಟನೆ Ballari ಯಲ್ಲಿ ನಡೆದಿದೆ.

ತಂದೆಯೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕಾಲುವೆಗೆ ತಳ್ಳಿದ ಘಟನೆ Ballari ಗಡಿಭಾಗದ ಆಂಧ್ರಪ್ರದೇಶದ ಬೊಮ್ಮನ ಹಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನೇಮಕಲ್ ಗ್ರಾಮದಲ್ಲಿ ನಡೆದಿದ್ದು, ನಾಪತ್ತೆಯಾದ ಇಬ್ಬರು ಬಾಲಕಿಯರಲ್ಲಿ ಓರ್ವ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬ ಬಾಲಕಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನು ಓದಿ : ಕಾಂತಾರ ಚಾಪ್ಟರ್ 1 ಗಳಿಕೆ ಹಿಂದಿಕ್ಕಿದ ಧುರಂಧರ್
ಹೆಣ್ಣು ಮಕ್ಕಳನ್ನು ಕಾಲುವೆಗೆ ತಳ್ಳಿದ ತಂದೆ
ಬೊಮ್ಮನ ಹಾಳ್ ಬಳಿಯ ನೇಮಕಲ್ ಗ್ರಾಮದ ನಿವಾಸಿ ಕಲ್ಲಪ್ಪ ತನ್ನ 5 ಮತ್ತು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಭಾನುವಾರ “ಊರಿಗೆ ಹೋಗೋಣ” ಎಂದು ಕರೆದುಕೊಂಡು ಹೋಗಿ, ನಂತರ ಕಾಲುವೆಗೆ ತಳ್ಳಿರುವುದು ತಿಳಿದುಬಂದಿದೆ. ನಂತರ ತನ್ನಿಬ್ಬರು ಮಕ್ಕಳನ್ನು ಕಾಲುವೆಗೆ ತಳ್ಳಿದ ಕಲ್ಲಪ್ಪ ಬಳಿಕ ಒಬ್ಬನೇ ಊರಿಗೆ ಮರಳಿದ್ದು ಮಕ್ಕಳ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಕಿರಿಯ ಪುತ್ರಿಯ ಮೃತದೇಹ ಪತ್ತೆ
ನಂತರ ಅನುಮಾಗೊಂಡ ಕುಟುಂಬದವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಂಗಳವಾರ ಸಿರಿಗೇರಿ ಕ್ರಾಸ್ ಬಳಿಯ ತುಂಗಭದ್ರಾ ಬಲದಂಡೆ ಕಾಲುವೆಯಲ್ಲಿ (ಎಲ್ ಎಲ್ ಸಿ) ಕಿರಿಯ ಪುತ್ರಿ ಚಂದ್ರಮ್ಮ (9) ಮೃತದೇಹ ಪತ್ತೆಯಾಗಿದ್ದು, ಹಿರಿಯ ಪುತ್ರಿ ಅನಸೂಯ (11) ಹುಡುಕಲು ಸೀಮಾಂದ್ರದ ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನು ನೋಡಿ : ಸಚಿವ ಜಮೀರ್ ಆಪ್ತನ ಮನೆ, ರೆಸಾರ್ಟ್ ಮೇಲೆ ಲೋಕಾ ದಾಳಿ, ಏನೆಲ್ಲ ಪತ್ತೆ?




