PAVAGADA: ಪಾವಗಡದ ರೊಪ್ಪ ಗ್ರಾಮದ ಹಿರಿಯ ಪತ್ರಕರ್ತ, ಸಂಜೆ ವಾಣಿ ದೊಡ್ಡ ಬೊಮ್ಮಯ್ಯ ಹೃದಯಘಾತದಿಂದ ಬೆಂಗಳೂರಿನಲ್ಲಿ ಇಂದು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ.

PAVAGADA : ಪಾವಗಡ ತಾಲೂಕಿನ ಹಿರಿಯ ಪತ್ರಕರ್ತ̧ ಸಂಜೆವಾಣಿ ದಿನಪತ್ರಿಕೆಯ ಮುಖ್ಯ ವರದಿಗಾರರಾದ ದೊಡ್ಡ ಬೊಮ್ಮಯ್ಯ ಅವರು ಹೃದಯಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ ವಯಸ್ಸು ಸುಮಾರು 60 ವರ್ಷ.
ದಶಕಗಳ ಕಾಲ ಪತ್ರಿಕೋದ್ಯಮ ಸೇವೆ
ರೊಪ್ಪ ಗ್ರಾಮದ ದೊಡ್ಡಯ್ಯ ಮತ್ತು ಚಿಕ್ಕಮ್ಮ ದಂಪತಿಗಳ ಹಿರಿಯ ಪುತ್ರರಾದ ದೊಡ್ಡ ಬೊಮ್ಮಯ್ಯ ಅವರು ದಶಕಗಳ ಕಾಲ ಸಂಜೆವಾಣಿ ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.
ಕನ್ನಡ ಪತ್ರಿಕೋದ್ಯಮದಲ್ಲಿ ಅಪಾರ ಅನುಭವ ಹೊಂದಿದ್ದ ಅವರು ಶಿಸ್ತಿನ ವರದಿ, ನಿಷ್ಠಾವಂತ ಪತ್ರಿಕೋದ್ಯಮ ಹಾಗೂ ಸ್ನೇಹಜೀವಿ ಸ್ವಭಾವದಿಂದ ಪತ್ರಕರ್ತ ವಲಯದಲ್ಲಿ ಅಪಾರ ಗೌರವ ಪಡೆದಿದ್ದರು.
ಬೆಳಗಾವಿ ಅಧಿವೇಶನ ಮುಗಿಸಿ ಬೆಂಗಳೂರಿಗೆ ಬಂದಾಗ ಹೃದಯಘಾತ
ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಎರಡು ವಾರಗಳ ಕಾಲ ವರದಿ ಕಾರ್ಯ ನಿರ್ವಹಿಸಿ, ಶುಕ್ರವಾರ ರಾತ್ರಿ ಬೆಳಗಾವಿಯಿಂದ ಹೊರಟು ಬೆಂಗಳೂರಿನ ಮೆಜೆಸ್ಟಿಕ್ಗೆ ತಲುಪಿದ್ದರು. ಅಲ್ಲಿಂದ ಬಿಎಂಟಿಸಿ ಬಸ್ಸಿನಲ್ಲಿ ಮನೆ ಕಡೆಗೆ ತೆರಳುವ ಸಂದರ್ಭದಲ್ಲಿ ಹೃದಯಘಾತ ಸಂಭವಿಸಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎನ್ನಲಾಗಿದೆ.
MUST WATCH : PAVAGADA | ಪಾವಗಡದಲ್ಲಿ ಭೀಕರ ರಸ್ತೆ ಅಪಘಾ*- ಕಾರು ಚಾಲಕ ಸ್ಥಳದಲ್ಲೇ ಸಾ*
ತೋಟದ ಮನೆಯಲ್ಲಿ ಸಂಜೆ ಅಂತ್ಯಕ್ರಿಯೆ
ಸದ್ಯ ಮೃತದೇಹವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಇಂದು ಸಂಜೆ ಪಾವಗಡ ತಾಲೂಕಿನ ರೊಪ್ಪ ಗ್ರಾಮದ ಅವರ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪತ್ರಕರ್ತರ ಸಂಘದಿಂದ ತೀವ್ರ ಸಂತಾಪ
ದೊಡ್ಡ ಬೊಮ್ಮಯ್ಯ ಅವರ ನಿಧನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಘೋರಸ್ ಮಾವು ಹನುಮಂತರಾಯಪ್ಪ, ಹಿರಿಯ ಪತ್ರಕರ್ತರಾದ ಪ್ರಸನ್ನಮೂರ್ತಿ, ಇಮ್ರಾನ್ ಉಲ್ಲಾ, ಲೋಕೆಶ್, ಮೈಕಲ್, ಓ. ರಾಮಾಂಜಿ, ತಿಮ್ಮರಾಜು, ಸಂಚಲಪ್ಪ, ಚಂದ್ರಪ್ಪ ಸೇರಿದಂತೆ ಅನೇಕ ಪತ್ರಕರ್ತರು, ಸ್ನೇಹಿತರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Pavagada Accident News : ಕಾರು ಚಾಲಕ ಸ್ಥಳದಲ್ಲೇ ಸಾವು, 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ..!!




