Kitchen Recipe : ಮನೆಯಲ್ಲಿ ಹೋಟೆಲ್ ಸ್ಟೈಲ್ ರುಚಿಯ ಕೈಮಾ ಉಪ್ಪಿಟ್ಟು (Keema Uppittu) ತಯಾರಿಸಲು ಈ ಸರಳ ವಿಧಾನವನ್ನು ಅನುಸರಿಸಿ. ಬೆಳಗಿನ ಉಪಹಾರಕ್ಕೂ, ಲಂಚ್ಗೂ ಇದು ಅತ್ಯುತ್ತಮ ಆಯ್ಕೆ.

Kitchen Recipe : ಬೇಕಾಗುವ ಪದಾರ್ಥಗಳು
- ಮಟನ್ ಕೈಮಾ – 200 ಗ್ರಾಂ
- ರವೆ – 1 ಬಟ್ಟಲು
- ಎಣ್ಣೆ – 3 ಚಮಚ
- ಈರುಳ್ಳಿ – ಅರ್ಧ ಬಟ್ಟಲು (ಸಣ್ಣಗೆ ಹಚ್ಚಿದ್ದು)
- ಹಸಿಮೆಣಸಿನಕಾಯಿ – 2 (ಸಣ್ಣಗೆ ಕತ್ತರಿಸಿದ್ದು)
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಬಟಾಣಿ – ಅರ್ಧ ಬಟ್ಟಲು
- ಕರಿಬೇವು – ಸ್ವಲ್ಪ
- ಅಚ್ಚ ಖಾರದ ಪುಡಿ – 1 ಚಮಚ
- ದನಿಯಾ ಪುಡಿ – ಅರ್ಧ ಚಮಚ
- ಚಕ್ಕೆ–ಲವಂಗ ಪುಡಿ – ¼ ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಟೊಮೆಟೋ – 1 (ಸಣ್ಣಗೆ ಕತ್ತರಿಸಿದ್ದು)
- ಬಿಸಿ ನೀರು – 3 ಬಟ್ಟಲು
- ಕೊತ್ತಂಬರಿ ಸೊಪ್ಪು – ಸ್ವಲ್ಪ
ಕೈಮಾ ಉಪ್ಪಿಟ್ಟು ಮಾಡುವ ವಿಧಾನ
ಹಂತ 1: ರವೆ ಹುರಿಯುವುದು
ಮೊದಲಿಗೆ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ. ಕಾದ ಬಳಿಕ ರವೆಯನ್ನು ಕೆಂಪಗೆ ಹುರಿದು ಬೇರೆ ಪಾತ್ರೆಯಲ್ಲಿ ಪಕ್ಕಕ್ಕೆ ಇಟ್ಟುಕೊಳ್ಳಿ.
ಹಂತ 2: ಮಸಾಲೆ ತಯಾರಿ
ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ. ಈರುಳ್ಳಿ ಹಾಕಿ ಚಿನ್ನದ ಬಣ್ಣಕ್ಕೆ ಹುರಿಯಿರಿ. ನಂತರ ಹಸಿಮೆಣಸಿನಕಾಯಿ, ಕರಿಬೇವು ಸೇರಿಸಿ.
ಹಂತ 3: ಕೈಮಾ ಬೇಯಿಸುವುದು
ಇದೀಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಬಟಾಣಿ ಮತ್ತು ಟೊಮೆಟೋ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಮಟನ್ ಕೈಮಾ ಹಾಗೂ ಅರಿಶಿಣದ ಪುಡಿ ಹಾಕಿ 5 ನಿಮಿಷ ಬೇಯಲು ಬಿಡಿ.
ಹಂತ 4: ಮಸಾಲೆ ಸೇರಿಸುವುದು
ಅಚ್ಚ ಖಾರದ ಪುಡಿ, ದನಿಯಾ ಪುಡಿ ಹಾಗೂ ಚಕ್ಕೆ-ಲವಂಗ ಪುಡಿ ಸೇರಿಸಿ ಮಿಶ್ರಣ ಮಾಡಿ. ಸಣ್ಣ ಉರಿಯಲ್ಲಿ 3 ನಿಮಿಷ ಬೇಯಿಸಿ.
ಹಂತ 5: ಉಪ್ಪಿಟ್ಟು ತಯಾರಿ
ಈಗ ಬಿಸಿ ನೀರು ಹಾಕಿ 10 ನಿಮಿಷ ಚೆನ್ನಾಗಿ ಕುದಿಯಲು ಬಿಡಿ. ನಂತರ ಗಂಟುಗಳಾಗದಂತೆ ಸ್ವಲ್ಪ ಸ್ವಲ್ಪವಾಗಿ ಹುರಿದ ರವೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಣ್ಣ ಉರಿಯಲ್ಲಿ ಇನ್ನೂ 3 ನಿಮಿಷ ಬೇಯಿಸಿ.
ಸರ್ವ್ ಮಾಡುವ ವಿಧಾನ
ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿ ಬಿಸಿ ರುಚಿಕರ ಕೈಮಾ ಉಪ್ಪಿಟ್ಟು ಸವಿಯಿರಿ.




