Kitchen Tips : ಮನೆಯಲ್ಲೇ ಸುಲಭವಾಗಿ, ಕಡಿಮೆ ಪದಾರ್ಥಗಳಿಂದ ತಯಾರಿಸಬಹುದಾದ ರುಚಿಕರ ಟೊಮೆಟೋ ಚಿಲ್ಲಿ ಕರ್ರಿ ನಿಮ್ಮ ಊಟಕ್ಕೆ ಖಾರ–ಹುಳಿ ಸವಿಯನ್ನು ನೀಡುತ್ತದೆ. ಬಿಸಿ ಅನ್ನ, ರಾಗಿ ಮುದ್ದೆ ಅಥವಾ ಚಪಾತಿಗೆ ಇದು ಸೂಪರ್ ಕಾಂಬಿನೇಷನ್.

Kitchen Tips : ಬೇಕಾಗುವ ಪದಾರ್ಥಗಳು (Ingredients)
- ಎಣ್ಣೆ – ಸ್ವಲ್ಪ
- ಸಾಸಿವೆ – ಸ್ವಲ್ಪ
- ಹಸಿಮೆಣಸಿನ ಕಾಯಿ – 4–5
- ಕರಿಬೇವು – ಸ್ವಲ್ಪ
- ಶುಂಠಿ–ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ
- ಅರಿಶಿಣ – ಚಿಟಿಕೆಯಷ್ಟು
- ಅಚ್ಚ ಖಾರದ ಪುಡಿ – ½ ಚಮಚ
- ದನಿಯಾ ಪುಡಿ – ½ ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಕಡಲೆಕಾಯಿ ಬೀಜ–ಎಳ್ಳು ಪುಡಿ – 1 ಚಮಚ
- ಕೊಬ್ಬರಿ ಪುಡಿ – ಸ್ವಲ್ಪ
- ಟೊಮೆಟೋ – 4–5 (ಸಣ್ಣಗೆ ಹೆಚ್ಚಿದ)
- ಹುಣಸೆ ಹಣ್ಣಿನ ರಸ – 1 ಚಮಚ
- ಜೀರಿಗೆ ಪುಡಿ – ½ ಚಮಚ
- ಕೊತ್ತಂಬರಿ ಸೊಪ್ಪು – ಸ್ವಲ್ಪ
ಇದನ್ನು ಓದಿ : ಪಾರ್ಟಿ ಮಾಡುತ್ತಿದ್ದವರ ಬಳಿ ಹಣ ಕೇಳಿದ ಪೊಲೀಸರು- ಹೆದರಿ ಬಾಲ್ಕನಿಯಿಂದ ಜಿಗಿದು ಯುವತಿ ಗಂಭೀರ
ಮಾಡುವ ವಿಧಾನ (Method of Preparation)
ಮೊದಲು, ಒಲೆಯ ಮೇಲೆ ಬಾಣಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಕಾದಿಸಿಕೊಳ್ಳಿ.
ಎಣ್ಣೆ ಬಿಸಿ ಆದ ಬಳಿಕ ಸಾಸಿವೆ, ಹಸಿಮೆಣಸಿನ ಕಾಯಿ ಮತ್ತು ಕರಿಬೇವು ಸೇರಿಸಿ ಚೆನ್ನಾಗಿ ಹುರಿಯಿರಿ.
ಮುಂದೆ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಕಲಸಿ.
ಈಗ ಅರಿಶಿಣ, ಅಚ್ಚ ಖಾರದ ಪುಡಿ, ದನಿಯಾ ಪುಡಿ ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ.
ಅದರ ಬಳಿಕ ಕಡಲೆಕಾಯಿ ಬೀಜ–ಎಳ್ಳು ಪುಡಿ, ಕೊಬ್ಬರಿ ಪುಡಿ ಮತ್ತು ಸಣ್ಣಗೆ ಹೆಚ್ಚಿದ ಟೊಮೆಟೋ ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಸಬೇಕು.
ಟೊಮೆಟೋ ಚೆನ್ನಾಗಿ ಮೃದುವಾದ ಮೇಲೆ ಹುಣಸೆ ಹಣ್ಣಿನ ರಸ, ಜೀರಿಗೆ ಪುಡಿ ಸೇರಿಸಿ ಮತ್ತೊಮ್ಮೆ ಕುದಿಸಿ.
ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿದರೆ, ರುಚಿಕರ ಟೊಮೆಟೋ ಚಿಲ್ಲಿ ಕರ್ರಿ ಸವಿಯಲು ಸಿದ್ಧ!
ಈ ಕರ್ರಿ ಬಿಸಿ ಅನ್ನ, ಅಕ್ಕಿ ರೊಟ್ಟಿ, ರಾಗಿ ಮುದ್ದೆ ಅಥವಾ ಚಪಾತಿ ಜೊತೆ ಬಹಳ ಚೆನ್ನಾಗಿರುತ್ತದೆ.
ಇದನ್ನು ನೋಡಿ : ಪತ್ನಿಯ ಯಡವಟ್ಟು, ಜಡೇಜಾಗೆ ಸಂಕಷ್ಟ..? ಫ್ಯಾನ್ಸ್ ಆಕ್ರೋಶ




