
ACTRESS BHAVANA RAMANNA : ಕನ್ನಡ ಚಿತ್ರರಂಗದ ನಟಿ ಹಾಗೂ ಭರತನಾಟ್ಯ ಕಲಾವಿದೆ ಭಾವನಾ ರಾಮಣ್ಣ ತಮ್ಮ 40ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾರೆ. ಐವಿಎಫ್ (IVF) ವಿಧಾನದ ಮೂಲಕ ಅವಳಿ ಗರ್ಭವನ್ನು ಧರಿಸಿದ್ದ ಅವರು, ದುರಾದೃಷ್ಟವಶಾತ್ ಒಂದು ಮಗುವನ್ನು ಕಳೆದುಕೊಂಡರು.
2025ರ ಆಗಸ್ಟ್ 20ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಭಾವನಾ, ತನ್ನ ಮಗಳಿಗೆ ‘ರುಕ್ಮಿಣಿ’ಎಂಬ ಹೆಸರನ್ನಿಟ್ಟಿದ್ದಾರೆ. ಈ ಕುರಿತು ಭಾವನಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
“ದೊಡ್ಡ ಮನೆ, ಪುಟ್ಟ ಕುಟುಂಬ. ನಾನು ಮತ್ತು ನನ್ನ ತಂದೆ, ಬೆಳಗ್ಗಿನ ಕಾಫಿಯೊಂದಿಗೆ ಹಕ್ಕಿಗಳ ನಾದ ಕೇಳುತ್ತಾ ಕೂತಿದ್ದರೆ, ಈಗ ಆ ಮನೆಯಲ್ಲಿ ಹೊಸದೊಂದು ಪುಟ್ಟ ಹಕ್ಕಿಯ ಚುಯ್ ಚುಯ್ ಸದ್ದು. ಈ ವಿನೂತನ ವಿಸ್ಮಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ” ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
ಇನ್ನೂ ಮಗಳ ಫೋಟೋವನ್ನು ಬಹಿರಂಗಪಡಿಸದಿರುವ ಭಾವನಾ, ಸದ್ಯ ಪುಟ್ಟ ರುಕ್ಮಿಣಿ ಜೊತೆ ತಾಯಿ ತನವನ್ನು ಅನುಭವಿಸುತ್ತಿದ್ದಾರೆ.




