ಹೊಟ್ಟೆ ನೋವು ತಾಳಲಾರದೆ Nursing Student ಆತ್ಮಹತ್ಯೆ.

ಹೊಟ್ಟೆ ನೋವು ತಾಳಲಾರದೆ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸ ಹಂಪಾಪುರ ಗ್ರಾಮದಲ್ಲಿ ನಡೆದಿದೆ.
ಇದನ್ನು ಓದಿ : ಓಡೋಡಿ ಬಂದು ಪ್ರಿಯಕರನ ಮದುವೆ ನಿಲ್ಲಿಸಿದ ಪ್ರೇಯಸಿ
Nursing Student ಆತ್ಮಹತ್ಯೆ
ನೇಣಿಗೆ ಶರಣಾದ ಯುವತಿಯನ್ನು ಪ್ರಿಯಾಂಕ ಎಂದು ಗುರುತಿಸಲಾಗಿದೆ. ಪ್ರಿಯಾಂಕ ಅಂತಿಮ ವರ್ಷದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ತೀವ್ರ ಹೊಟ್ಟೆ ನೋವಿನಿಂದ ಪ್ರಿಯಾಂಕ ಬಳಲುತ್ತಿದ್ದು, ಇದೇ ಕಾರಣಕ್ಕೆ ಬೇಸೆತ್ತು ಆತ್ಮಹತ್ಯೆ ಮಾಡಿಕೊಂಡಿ ದ್ಧಾಳೆ ಎನ್ನಲಾಗಿದೆ.
ಪ್ರಕರಣ ದಾಖಲು
ಇನ್ನು ಈ ಘಟನೆಗೆ ಸಂಬಂಧಿಸಿ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಕುಟುಂಬ ಸದಸ್ಯರ ಸಹಕಾರವನ್ನು ಪಡೆಯುತ್ತಿದ್ದಾರೆ.
ಇದನ್ನು ನೋಡಿ : ಸಣ್ಣ ಅಂಗಡಿಯಲ್ಲಿ ಟೀ ಸವಿದು ಇಲ್ಲಿನ ಅತಿಥಿ ಸತ್ಕಾರಕ್ಕೆ ಫಿದಾ ಆದ ವಿದೇಶಿಗ




