BBK S 12 : ಬಿಗ್ ಬಾಸ್ ಕನ್ನಡ 12 (Bigg Boss Kannada 12) ನಲ್ಲಿ ವೀಕೆಂಡ್ ಎಪಿಸೋಡ್ ಎಂದರೆ ಕಿಚ್ಚ ಸುದೀಪ್ (Kiccha Sudeep) ಅವರ ಪಂಚಾಯ್ತಿಗೆ ವೀಕ್ಷಕರು ಕಾತರದಿಂದ ಕಾಯುತ್ತಾರೆ. ಈ ವಾರ ಚೈತ್ರಾ ಕುಂದಾಪುರ (Chaithra Kundapura) ಅವರ ಉಸ್ತುವಾರಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸುದೀಪ್ ಅವರು ವೇದಿಕೆಯಲ್ಲೇ ಸ್ಪಷ್ಟನೆ ನೀಡಲಿದ್ದಾರೆ.

BBK S 12 : ಸುದೀಪ್ ಎದುರೇ ಅಶ್ವಿನಿ ಸ್ಫೋಟ
ಸುದೀಪ್ ಅವರು “ಮನೆಯೊಳಗಿನ ರಿಯಾಕ್ಷನ್ ಹೇಗಿದೆ?” ಎಂದು ಪ್ರಶ್ನಿಸಿದಾಗ, ಚೈತ್ರಾ – ಸೂರಜ್ ಹಾಗೂ ಅಶ್ವಿನಿ, ರಾಶಿಕಾ ಶೆಟ್ಟಿಯನ್ನು ಕ್ಯಾಪ್ಟನ್ ಎಂದು ಒಪ್ಪಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಜತ್, “ಅಶ್ವಿನಿ ಸಣ್ಣ ವಿಷಯವನ್ನೇ ದೊಡ್ಡದಾಗಿ ಮಾಡುತ್ತಾರೆ” ಎಂದಿದ್ದಾರೆ.
ಈ ಮಾತು ಅಶ್ವಿನಿಯನ್ನು ಕೋಪಗೊಳಿಸಿದೆ. ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ರಜತ್ ಮತ್ತು ಚೈತ್ರಾ ಇಬ್ಬರೂ ನನ್ನ ತಂಟೆಗೆ ಬರಬಾರದು. ಹೇ ಸುಬ್ಬಿ, ಆ ಮುದುಕಿಯನ್ನ ಹೊಡೀತಿನಿ!” ಎಂದು ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ, “ಸೀಸನ್ 12ರಲ್ಲಿ ಇವರಷ್ಟು ಕಳಪೆ ಸ್ಪರ್ಧಿಗಳು ಯಾರೂ ಇಲ್ಲ” ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಈ ವಾರ ಯಾರು ಔಟ್? ಇಲ್ಲವೇ ಟ್ವಿಸ್ಟ್?
ಈ ವಾರ ಬಿಗ್ ಟ್ವಿಸ್ಟ್ ಎಂದರೆ – ವೋಟಿಂಗ್ ಲೈನ್ಸ್ ಓಪನ್ ಆಗಿಲ್ಲ. ಹೀಗಾಗಿ ಈ ವಾರ ಎಲಿಮಿನೇಶನ್ ನಡೆಯುವುದಿಲ್ಲ ಎನ್ನಲಾಗಿದೆ. ಆದರೂ ಸೋಷಿಯಲ್ ಮೀಡಿಯಾದಲ್ಲಿ, ಚೈತ್ರಾ ಕುಂದಾಪುರ ಮತ್ತು ರಜತ್ ವೈಲ್ಡ್ ಕಾರ್ಡ್ ಸ್ಪರ್ಧಿಗಳಲ್ಲ, ಅತಿಥಿಗಳು ಮಾತ್ರ; ಇವರೇ ಮನೆಯಿಂದ ಹೊರ ಹೋಗುತ್ತಾರೆ ಎಂಬ ಚರ್ಚೆಗಳು ಜೋರಾಗಿವೆ.
ನಾಮಿನೇಷನ್ ವಿವರ
ಈ ವಾರ ನಾಮಿನೇಟ್ ಆದವರು:
- ರಜತ್
- ಗಿಲ್ಲಿ ನಟ
- ಧ್ರುವಂತ್
- ರಕ್ಷಿತಾ ಶೆಟ್ಟಿ
- ಸ್ಪಂದನಾ ಸೋಮಣ್ಣ
- ಅಶ್ವಿನಿ ಗೌಡ
- ರಾಶಿಕಾ ಶೆಟ್ಟಿ
ಕ್ಯಾಪ್ಟನ್ ಆಗಿ ಮೊದಲಿಗೆ ಅಭಿಷೇಕ್ ಶ್ರೀಕಾಂತ್ – ಸ್ಪಂದನಾ ಸೋಮಣ್ಣ ಆಯ್ಕೆಯಾಗಿದ್ದರು. ಆದರೆ ಬಿಗ್ ಬಾಸ್ ಟ್ವಿಸ್ಟ್ನಿಂದ ಅಭಿಷೇಕ್ ಔಟ್ ಆಗಿ, ಸ್ಪಂದನಾ ಸ್ಥಾನಕ್ಕೆ ಚೈತ್ರಾ ಕುಂದಾಪುರ ಬಂದಿದ್ದಾರೆ.
ಮುಂದೇನು?
ಈ ವಾರ ಎಲಿಮಿನೇಶನ್ ಇಲ್ಲ, ಮುಂದಿನ ವಾರ ಡಬಲ್ ಎಲಿಮಿನೇಶನ್ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಜತ್–ಚೈತ್ರಾ ಗಲಾಟೆಗೆ ಸುದೀಪ್ ಪಂಚಾಯ್ತಿ ಏನು ತೀರ್ಪು ಕೊಡಲಿದ್ದಾರೆ ಎಂಬುದೇ ಈಗ ವೀಕ್ಷಕರ ಕುತೂಹಲ.




