Tumakuru : ದೇವರಾಯಪಟ್ಟಣ ಕೆರೆಯಲ್ಲಿ ಇಂದು ಅಪರಿಚಿತ ಮಹಿಳೆಯ ಶವ ಪತ್ತೆ ಯಾಗಿದೆ.

Tumakuru ನಗರದ ದೇವರಾಯಪಟ್ಟಣ ಕೆರೆಯಲ್ಲಿ ಇಂದು ಸಂಜೆ 5:30 ಸುಮಾರಿಗೆ ಅಪರಿಚಿತ ಮಹಿಳೆಯ ಶವ ನೀರಿನಲ್ಲಿ ತೇಲುತ್ತಿರುವ ರೀತಿಯಲ್ಲಿ ಪತ್ತೆಯಾಗಿದೆ. ಸುತ್ತಮುತ್ತಲ ಜನರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಶವ ಹೊರ ತೆಗೆದ ಅಗ್ನಿಶಾಮಕ ಸಿಬ್ಬಂದಿ
ಇಂದು ಸಂಜೆ 5:30ರ ಸುಮಾರಿಗೆ ತುಮಕೂರಿನ ದೇವರಾಯಪಟ್ಟಣ ಕೆರೆಯಲ್ಲಿ ಮಹಿಳೆಯ ಶವ ತೇಲುತ್ತಿರುವುದನ್ನು ನೋಡಿದಂತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ರು. ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಮಹಿಳೆಯ ಶವವನ್ನು ನೀರಿನಿಂದ ಹೊರ ತೆಗೆದಿದ್ದಾರೆ.
ಇದನ್ನು ಓದಿ : 2 ಸರ್ಕಾರಿ ಬಸ್, ಜೀಪ್ ಮಧ್ಯೆ ಸರಣಿ ಅಪಘಾತ – 3 ಮಂದಿ ಸಾವು
ಸ್ವತಃ ಅವರೇ ನೀರಿಗೆ ಜಿಗಿದಿರಬಹುದು
ಇನ್ನು ಕೆರೆಯ ದಡದಲ್ಲಿ ಪರ್ಸ್ ಹಾಗೂ ಸ್ವೆಟರ್ ಪತ್ತೆಯಾಗಿದೆ. ಇನ್ನು ಮಹಿಳೆ ತನ್ನ ಪರ್ಸ ಹಾಗೂ ಸ್ವೆಟರ್ ಎಲ್ಲವನ್ನು ಕಳಚಿಟ್ಟು ಸ್ವತಃ ಅವರೇ ನೀರಿಗೆ ಜಿಗಿದಿರಬಹುದು ಎಂದು ಶಂಕಿಸಲಾಗಿದೆ. ಮಹಿಳೆಯ ಪರ್ಸ್ ನಲ್ಲಿ ಆಧಾರ್ ಕಾರ್ಡ್ ಹಾಗೂ ಬೆಂಗಳೂರಿನಿಂದ ತುಮಕೂರಿಗೆ ರೈಲಿನಲ್ಲಿ ಬಂದಿದ್ದ ಟಿಕೆಟ್ ದೊರೆತಿದ್ದು, ಮಹಿಳೆಯು ದೇವನಹಳ್ಳಿಯ ಮೂಲದವರಾಗಿರಬಹುದು ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲು
ಸದ್ಯಕ್ಕೆ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗದೆ. ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆ ನಂತರ ಅಷ್ಟೇ ಮಹಿಳೆ ಯಾರು? ಯಾವ ಕಾರಣಕ್ಕಾಗಿ ನೀರಿಗೆ ಬಿದ್ದಿದ್ದಾರೆ ಎನ್ನುವುದು ತಿಳಿಯಬೇಕಿದೆ.
ಇದನ್ನು ನೋಡಿ : ರೈತರಿಗೆ SHAKTIMAN ಕಂಪನಿಯಿಂದ ಭರ್ಜರಿ GOOD NEWS – ರೈತರ ಕೆಲಸ ಮಾಡಲು ಬಂದಿದೆ ಹೊಸ ಯಂತ್ರ




