Jr NTR : ಜೂ ಎನ್ಟಿಆರ್ ಖ್ಯಾತ ಪ್ಯಾನ್ ಇಂಡಿಯಾ ನಟ. ತಾವಾಯ್ತು ತಮ್ಮ ಸಿನಿಮಾ ಆಯ್ತು ಎಂದು ಸದಾ ವಿವಾದಗಳಿಂದ ದೂರವೇ ಇರುವ ನಟ ಜೂ ಎನ್ಟಿಆರ್. ಇದೀಗ ಜೂ ಎನ್ಟಿಆರ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Jr NTR : ಪ್ಯಾನ್ ಇಂಡಿಯಾ ಸ್ಟಾರ್ ನಟ Jr NTR ಇದೀಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸಾಮಾನ್ಯವಾಗಿ ವಿವಾದಗಳಿಂದ ದೂರ ಉಳಿವ ಜೂ ಎನ್ಟಿಆರ್ ಅವರು ಇದೀಗ ಕೋರ್ಟ್ ಮೆಟ್ಟಿಲೇರಿರುವುದು ಅಭಿಮಾನಿಗಳ ಆಶ್ಚರ್ಯಕ್ಕೆ ಕಾರಣವಾಗಿದೆ.
ಕೆಲವು ಬಾಲಿವುಡ್ ಸ್ಟಾರ್ ನಟ, ನಟಿಯರು ಇತ್ತೀಚೆಗೆ ತಮ್ಮ ವ್ಯಕ್ತಿತ್ವದ ಹಕ್ಕುಗಳ ರಕ್ಷಣೆಗೆ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ಇದೀಗ ನಟ ಜೂ ಎನ್ಟಿಆರ್ ಸಹ ಇದೇ ವಿಷಯಕ್ಕೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಜೂನಿಯರ್ ಎನ್ಟಿಆರ್ ತಮ್ಮ ಹೆಸರು, ಚಿತ್ರ, ಹೋಲಿಕೆ ಮತ್ತು ಗುರುತಿನ ಗುಣಲಕ್ಷಣಗಳು ಅನಧಿಕೃತವಾಗಿ ಬಳಸಲ್ಪಡುವುದಕ್ಕೆ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರು.
ವಕೀಲ ಜೆ ಸಾಯಿ ದೀಪಕ್ ಅವರು ನ್ಯಾಯಾಲಯಕ್ಕೆ ವಾದಿಸಿ, ಹಲವಾರು ಇ-ಕಾಮರ್ಸ್ ಮತ್ತು ಸಾಮಾಜಿಕ ಮಾಧ್ಯಮ ಸೈಟ್ಗಳು ಅವರ ಚಿತ್ರ, ವಿಡಿಯೋಗಳನ್ನು ಒಪ್ಪಿಗೆಯಿಲ್ಲದೆ ವ್ಯಾಪಾರ ಉದ್ದೇಶಕ್ಕೆ ಬಳಸುತ್ತಿವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ವಿಶ್ವದ ಎರಡನೇ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜ ಅನಾವರಣಗೊಳಿಸಿದ CM
ಜೂ ಎನ್ಟಿಆರ್ ಪರ ವಕೀಲರ ವಾದವನ್ನು ಆಲಿಸಿದ ನಂತರ, ನ್ಯಾಯಾಲಯ ಐಟಿಯು ನಿಯಮಗಳು, 2021 ಅಡಿಯಲ್ಲಿ ಮೊಕದ್ದಮೆಯನ್ನು ಪರಿಗಣಿಸಿ,
ಸಾಮಾಜಿಕ ಜಾಲತಾಣ ಮತ್ತು ಕೆಲವು ವೆಬ್ಸೈಟ್ಗಳಿಗೆ ಸೂಚನೆ ನೀಡಿದ್ದು, ಕಂಪನಿಗಳಿಗೆ ಪ್ರತಿಕ್ರಿಯೆಗೆ 3 ದಿನಗಳ ಅವಧಿ ನೀಡಿದೆ.
ನ್ಯಾಯಾಲಯವು ಡಿಸೆಂಬರ್ 22 ರಂದು ಪ್ರಕರಣವನ್ನು ಮತ್ತೆ ವಿಚಾರಣೆ ನಡೆಸಲಿದೆ ಮತ್ತು ವಿವರವಾದ ಆದೇಶ ಹೊರಡಿಸುವ ನಿರೀಕ್ಷೆಯಿದೆ.
ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ, ನಾಗಾರ್ಜುನ, ಅನಿಲ್ ಕಪೂರ್, ಅಭಿಷೇಕ್ ಬಚ್ಚನ್, ಚಿರಂಜೀವಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ತಮ್ಮ ವ್ಯಕ್ತಿತ್ವ ಹಕ್ಕುಗಳ ದುರುಪಯೋಗದ ವಿರುದ್ಧ ಮೊಕದ್ದಮೆ ಸಲ್ಲಿಸಿದ್ದಾರೆ.
ಜೂ ಎನ್ಟಿಆರ್ ಪ್ರಸ್ತುತ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ನಾಯಕಿ ರುಕ್ಮಿಣಿ ವಸಂತ್.
ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಮುರುಗನ್ ದೇವರ ಕಥೆಯ ಸಿನಿಮಾ ಮತ್ತು ‘ದೇವರ 2’ ಸಿನಿಮಾಗಳಲ್ಲಿ ನಟಿಸಲಿದ್ದಾರೆ.
ಮುಂದಿನಂತು, ಜೂ ಎನ್ಟಿಆರ್ ಬಾಲಿವುಡ್ ಮತ್ತು ತಮಿಳು ನಿರ್ದೇಶಕ ವೆಟ್ರಿಮಾರನ್ ಜೊತೆ ಹೊಸ ಸಿನಿಮಾಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ.
ಇದನ್ನು ನೋಡಿ : ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ: ಕಂಡಕ್ಟರ್ ಸಾವು, 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ




