Ranebennur : ಅಕ್ರಮ ಸಂಬಂಧವೊಂದು ಮಹಿಳೆಯ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

Ranebennur : ಅಕ್ರಮ ಸಂಬಂಧದವೊಂದಿದ್ದ ವಿಧವೆಯೊಬ್ಬರು ತನ್ನ ಪ್ರಿಯಕರನಿಂದಲೇ ಕೊಲೆಯಾದ ಘಟನೆ ಹಾವೇರಿಯ ರಾಣೇಬೆನ್ನೂರು ಪಟ್ಟಣದಲ್ಲಿ ನಡೆದಿದೆ. 42 ವರ್ಷದ ಲಲಿತಾ ಬ್ಯಾಡಗಿ ಎಂಬ ಮಹಿಳೆಯನ್ನು ಆಕೆಯ ಜೊತೆ ಸಂಬಂಧ ಹೊಂದಿದ್ದ ಚಂದ್ರಪ್ಪ ಎಂಬಾತ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ.
3 ವರ್ಷಗಳ ಅನೈತಿಕ ಸಂಬಂಧ – ಅನುಮಾನದಿಂದ ದಾರುಣ ಅಂತ್ಯ
10 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡ ಲಲಿತಾ, ಬದುಕು ಸಾಗಿಸಲು ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಅವಿವಾಹಿತ ಚಂದ್ರಪ್ಪನ ಜೊತೆ ಪರಿಚಯ ಬೆಳೆದು ನಂತರ ಸಂಬಂಧಕ್ಕೆ ತಿರುಗಿತ್ತು. ಇನ್ನು ಸುಮಾರು 3 ವರ್ಷಗಳಿಂದ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು.
ಇತ್ತೀಚೆಗೆ ಲಲಿತಾ, ಚಂದ್ರಪ್ಪನಿಂದ ದೂರವಾಗಲು ಪ್ರಾರಂಭಿಸಿದಂತಳಂತೆ. ಚಂದ್ರಪ್ಪ ಮಾಡಿದ ಕರೆಗಳಿಗೆ ಪ್ರತಿಕ್ರಿಯಿಸದ ಮಹಿಳೆ, 15 ದಿನಗಳಿಂದ ಆತನ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಪದೇ ಪದೇ ಕಾಲ್ ಮಾಡಿದಾಗ “ಫೋನ್ ಬ್ಯುಸಿ ಬರುತ್ತಿದೆ” ಎಂಬ ಕಾರಣದಿಂದ ಚಂದ್ರಪ್ಪ ಅನುಮಾನಕ್ಕೊಳಗಾಗಿದ್ದ.

ಇದನ್ನೂ ಓದಿ : ಅಕ್ರಮ ಸಂಬಂಧಕ್ಕೆ ಅಡ್ಡಿ – ಮಲಗಿದ್ದ ಗಂಡನ ಮರ್ಮಾಂಗಕ್ಕೆ ಹೊಡೆದು ಕೊಂದ ಪತ್ನಿ!
ಮನೆಯಲ್ಲೇ ವಾಗ್ವಾದ – ಕೋಪದ ಹೊಡೆತದಲ್ಲಿ ಹತ್ಯೆ
ಡಿಸೆಂಬರ್ 07ರಂದು ಲಲಿತಾಳ ಮನೆಗೆ ತೆರಳಿದ್ದ ಚಂದ್ರಪ್ಪ, ಅನುಮಾನದ ಆಧಾರದ ಮೇಲೆ ಜಗಳವಾಡಿದ್ದಾನೆ. ಈ ವೇಳೆ ವಾಗ್ವಾದ ನಡೆದು ಕೈಯಲ್ಲಿದ್ದ ಚಾಕುವಿನಿಂದ ಆಕೆಯ ಕತ್ತು ಕೊಯ್ದು ಸ್ಥಳದಲ್ಲೇ ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಪೊಲೀಸರು ಆರೋಪಿ ಚಂದ್ರಪ್ಪನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
MUST WATCH : ತೋಟದ ಮನೆಯಲ್ಲಿದ್ದ ಮಹಿಳೆಯ ಭೀಕರ ಕೊಲೆ- ಇಟ್ಟುಕೊಂಡವನಿಂದಲೇ ಬಲಿಯಾದ್ಳಾ..?




