ʻಬಿಗ್ ಬಾಸ್ʼ ಮನೆಯೊಳಗೆ ಕಾಲಿಟ್ಟ Gilli ನಟನ ಪೋಷಕರು; ಮುದ್ದಿನ ತರಲೆ ಮಗನಿಗೆ ಎಣ್ಣೆ ಸ್ನಾನ ಮಾಡಿಸಿದ ತಾಯಿ.

ಬಿಗ್ಬಾಸ್ ಕನ್ನಡ ಸೀಸನ್ 12 ರಲ್ಲಿ ಸದ್ಯ ಫ್ಯಾಮಿಲಿ ವೀಕ್ ನಡೆಯುತ್ತಿದೆ. ನ್ಯೂ ಇಯರ್ ಹಬ್ಬದ ಹಿನ್ನಲೆಯಲ್ಲಿ ಮನೆಯೊಳಗೆ ಸ್ಪರ್ಧಿಗಳ ಕುಟುಂಬದವರು ಆಗಮಿಸಿ, ತಮ್ಮ ಮುದ್ದಿನ ಮಕ್ಕಳ ಜೊತೆ ಮಾತನಾಡುತ್ತಿದ್ದಾರೆ. ಈ ನಡುವೆ ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ, ಸೂರಜ್ ಸಿಂಗ್, ಧನುಷ್, ರಕ್ಷಿತಾ ಶೆಟ್ಟಿ ಅವರ ಕುಟುಂಬ ಸದಸ್ಯರು ಮನೆಗೆ ಆಗಮಿಸಿದ್ದು, ಸ್ಪರ್ಧಿಗಳ ಜೊತೆಗೆ ಕಾಲ ಕಳೆದಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಗಿಲ್ಲಿ ಕುಟುಂಬ
ಇದೀಗ ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದ ಗಿಲ್ಲಿ ನಟ ಅವರ ಕುಟುಂಬಸ್ಥರು ಆಗಮಿಸಿದ್ದಾರೆ. ತಮ್ಮ ಮುದ್ದಿನ ತರಲೆ ಮಗನನ್ನು ಕಂಡು ಖುಷಿಯಿಂದ ಮಾತನಾಡಿದ್ದಾರೆ. ಗಿಲ್ಲಿಯ ತಾಯಿಯು ಮಗನಿಗೆ ಎಣ್ಣೆ ಸ್ನಾನ ಮಾಡಿಸುತ್ತ, ರಾಜಕುಮಾರನಂತೆ ತಯಾರಿಸಿದ್ದಾರೆ. ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ Viral ಆಗುತ್ತಿದೆ.
ಇದನ್ನು ಓದಿ : ನೆಲಮಂಗಲದಲ್ಲಿ ನಿಗೂಢವಾಗಿ ನವ ವಿವಾಹಿತೆ ಸಾವು

ಒಬ್ಬರಿಗೊಬ್ಬರು ಮನಸ್ತಾಪ ಮಾಡಿಕೊಳ್ಳಬೇಡಿ
ಇದಕ್ಕೂ ಮುನ್ನ ಅಶ್ವಿನಿ ಗೌಡ ಅವರ ತಾಯಿ ಬಿಗ್ ಬಾಸ್ ಮನೆಯೊಳಗೆ ಬಂದಿದ್ದರು. ತಮ್ಮ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಅವರಿಗೆ, “ಅತ್ತೆ” ಎಂದು ಕರೆದಿದ್ದಾರೆ ಗಿಲ್ಲಿ ನಟ. “ಒಬ್ಬರಿಗೊಬ್ಬರು ಮನಸ್ತಾಪ ಮಾಡಿಕೊಳ್ಳಬೇಡಿ, ಚೆನ್ನಾಗಿರಿ” ಎಂದು ಗಿಲ್ಲಿಗೆ ಅಶ್ವಿನಿ ತಾಯಿ ಹೇಳಿದರು.
“ಅತ್ತೆ ಮಗಳಿಗೆ ಇಷ್ಟೂ ಹೇಳದಿದ್ರೆ ಹೇಗೆ”
ಆಗ ಅಶ್ವಿನಿ, “ವಿಗ್ ಹಾಕಿಕೊಳ್ಳುತ್ತೀರಿ, ಹಲ್ಲು ಸೆಟ್.. ಅಂತೆಲ್ಲ ರೆಗಿಸ್ತಾನೆ” ಎಂದು ಅಮ್ಮನ ಬಳಿ ಗಿಲ್ಲಿ ಬಗ್ಗೆ ದೂರು ಹೇಳಿದ್ದಾರೆ. ಆಗ Gilli, “ಅತ್ತೆ ಮಗಳಿಗೆ ಇಷ್ಟೂ ಹೇಳದಿದ್ರೆ ಹೇಗೆ” ಎಂದು ಕೌಂಟರ್ ಕೊಟ್ಟಿದ್ದಾರೆ. ಕೊನೆಗೆ ಅಶ್ವಿನಿ ಗೌಡ ಅವರ ತಾಯಿಗೆ “ಅತ್ತೆ.. ಅತ್ತೆ..” ಎಂದು ಕರೆದಿದ್ದಾರೆ ಗಿಲ್ಲಿ ನಟ.
ಇದನ್ನು ನೋಡಿ : ರಾಜ್ಯದಲ್ಲಿ ದಿಢೀರನೆ ಮೊಟ್ಟೆ ಬೆಲೆ ಏರಿಕೆ – ಶಾಲಾ ಶಿಕ್ಷಕರ ಸಂಬಳಕ್ಕೆ ಬಿತ್ತು ಕುತ್ತು..!





