ಅತಿಹೆಚ್ಚು ಅವಧಿಗೆ ಸತತವಾಗಿ ಆಯ್ಕೆಯಾದ ಪ್ರಧಾನಿಯಾಗಿ ಐತಿಹಾಸಿಕ ದಾಖಲೆ ಬರೆದ ನರೇಂದ್ರ Modi ಗೆ ಸ್ಯಾಂಡಲ್ವುಡ್ ನಟರಾದ ಕಿಚ್ಚ ಸುದೀಪ್ ಮತ್ತು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ Modi ಅವರು ಭಾರತದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ಅತಿದೀರ್ಘ ಅವಧಿಗೆ ಸತತವಾಗಿ ಆಯ್ಕೆಯಾದ ಪ್ರಧಾನಿಯಾಗಿ ಹೊಸ ದಾಖಲೆ ಬರೆದಿದ್ದಾರೆ.
ಈ ಸಾಧನೆಯ ಹಿನ್ನೆಲೆಯಲ್ಲಿ ದೇಶದ ವಿವಿಧ ಗಣ್ಯರ ಜೊತೆಗೆ ಸ್ಯಾಂಡಲ್ವುಡ್ ತಾರೆಯರಾದ ಕಿಚ್ಚ ಸುದೀಪ್ ಮತ್ತು ರಿಷಬ್ ಶೆಟ್ಟಿ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಕಿಚ್ಚ ಸುದೀಪ್ ಅವರು ಪ್ರಧಾನಿ ಮೋದಿಯವರ ಸಾಧನೆಯನ್ನು ಶ್ಲಾಘಿಸಿ, “ಈ ಸಾಧನೆಯನ್ನು ನಾವು ಹೆಮ್ಮೆಯಿಂದ ಸ್ವೀಕರಿಸಬೇಕು. 12 ವರ್ಷಗಳ ಕಾಲ ಅದೇ ಉತ್ಸಾಹ, ಅದೇ ಶಕ್ತಿ ಮತ್ತು ನಿರಂತರ ಕಾರ್ಯಶೈಲಿಯೊಂದಿಗೆ ದೇಶವನ್ನು ಮುನ್ನಡೆಸಿರುವುದು ಗಮನಾರ್ಹ.
ನಿಮ್ಮ ಸಮರ್ಪಣೆ ಮತ್ತು ಸಾಧನೆಗೆ ಹೃದಯಪೂರ್ವಕ ನಮನಗಳು. ಇದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ಮುಂದಿನ ದಿನಗಳಲ್ಲೂ ನಿಮ್ಮ ಸೇವೆ ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದ್ದಾರೆ.
MUST READ : Gold & Silver Rate : ಇಂದು ಕರ್ನಾಟಕ ಸೇರಿ ದೇಶಾದ್ಯಂತ ಚಿನ್ನ, ಬೆಳ್ಳಿ ಬೆಲೆ ಎಷ್ಟು…?
ಇನ್ನೊಂದೆಡೆ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಕೂಡ ಪ್ರಧಾನಿ ಮೋದಿಯವರ ಸಾಧನೆಯನ್ನು ಕೊಂಡಾಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, “ಐತಿಹಾಸಿಕ ನಾಯಕನಿಗೆ ಇದು ಮತ್ತೊಂದು ಮಹತ್ವದ ಮೈಲಿಗಲ್ಲು.
ಭಾರತದ ಅತಿದೀರ್ಘ ಅವಧಿಗೆ ಸತತವಾಗಿ ಆಯ್ಕೆಯಾದ ಪ್ರಧಾನಿಯಾಗಿ ಹೊಸ ಹೆಗ್ಗಳಿಕೆ ನಿಮ್ಮದಾಗಿದೆ. ವಿಕಸಿತ ಭಾರತದ ಕನಸಿಗಾಗಿ ನಿಮ್ಮ ಅವಿರತ ಸೇವೆ, ದೂರದೃಷ್ಟಿ ಮತ್ತು ಸಮರ್ಪಣೆ ಶ್ಲಾಘನೀಯ.
ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿ” ಎಂದು ಶುಭಾಶಯ ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರ ಈ ಸಾಧನೆ ರಾಜಕೀಯ ವಲಯದ ಜೊತೆಗೆ ಸಿನಿಮಾ ಕ್ಷೇತ್ರದ ಗಣ್ಯರಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ದೇಶದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯವಾಗಿ ಗುರುತಿಸಲ್ಪಡುತ್ತಿದೆ.
MUST WATCH : ರಸ್ತೆಗಾಗಿ ಚರಂಡಿ ಮುಚ್ಚಿ ಅವಾಂತರ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ.




