ಗುಬ್ಬಿಯಲ್ಲಿ ಧಗಧಗನೇ ಹೊತ್ತಿ ಉರಿದ Car.

ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಬರುವ ಗುಬ್ಬಿ ತಾಲೂಕಿನ ಶಿವಸಂದ್ರ ಗೇಟ್ ಬಳಿಯಲ್ಲಿ ರಸ್ತೆ ಬದಿಯ ಡಿವೈಡರ್ ಗೆ Car ಡಿಕ್ಕಿ ಹೊಡೆದ ಪರಿಣಾಮ ಕ್ಷಣಾರ್ಧದಲ್ಲಿ ಧಗಧಗನೇ ಹೊತ್ತಿ ಹುರಿದ ಘಟನೆ ನಡೆದಿದೆ.
ಶಿವಸಂದ್ರ ಗೇಟ್ ಬಳಿ ಘಟನೆ
ಗುಬ್ಬಿ ಪಟ್ಟಣದಲ್ಲಿ ಹಾದು ಹೋಗುವ ಬೆಂಗಳೂರು ಮತ್ತು ತಿಪಟೂರು ಮಾರ್ಗ ಮಧ್ಯದಲ್ಲಿ ಬರುವ HAL ಘಟಕದ ಹತ್ತಿರದ ಶಿವಸಂದ್ರ ಗೇಟ್ ಬಳಿಯಲ್ಲಿ ಈ ದುರ್ಘಟನೆ ನಡೆದಿದೆ.
ಇದನ್ನು ಓದಿ : Shift Car ಗೆ Bolero ಡಿಕ್ಕಿ – ಇಬ್ಬರು ಯುವಕರು ದುರ್ಮರಣ

ಧಗಧಗನೇ ಹೊತ್ತಿ ಉರಿದಕಾರು
ಹಾಸನ ಮೂಲದ ಹೊಳೆನರಸೀಪುರದ ಮಂಜುನಾಥ ಎಂಬುವರಿಗೆ ಸೇರಿದ ಕಾರು ಇದಾಗಿದ್ದು, ಇವರು ಬೆಂಗಳೂರು ಕಡೆಯಿಂದ ತಿಪಟೂರು ಮಾರ್ಗವಾಗಿ ಹುಂಡೈ ಕಂಪನಿಯ i10 ಕಾರಿನಲ್ಲಿ ಬರುತ್ತಿದ್ದ ವೇಳೆ ಆಯತಪ್ಪಿ, ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ಷಣಾರ್ಧದಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗನೇ ಹೊತ್ತಿ ಉರಿದಿದೆ.
ಪೊಲೀಸರಿಂದ ಪರಿಶೀಲನೆ
ಇನ್ನು ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸುವ ಕೆಲಸ ಮಾಡಲಾಗಿದ್ದು, ಧಗಧಗನೇ ಹೊತ್ತಿ ಉರಿ ಧಗಧಗನೇ ಹೊತ್ತಿ ಉರಿ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನು ನೋಡಿ : ಬುಲೆಟ್ ಪತ್ತೆ ಹಚ್ಚಲು ಜನಾರ್ದನರೆಡ್ಡಿ ಮನೆಗೆ ಬಾಂಬ್ ಸ್ಕ್ವಾಡ್ ಎಂಟ್ರಿ




