Vijay ಕೊನೆ ಸಿನಿಮಾಗೆ ಮತ್ತೆ ಶಾಕ್! ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದಂಥ ತೀರ್ಪು ಕೊಟ್ಟ ಕೊರ್ಟ್!

ದಳಪತಿ Vijay ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಹಿನ್ನಡೆಯನ್ನು ಎದುರಿಸುತ್ತಿದೆ. ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರೀಮೇಕ್ ಆಗಿರುವ ಈ ಸಿನಿಮಾ ಜನವರಿ 10ರಂದು ಬಿಡುಗಡೆಯಾಗಬೇಕಾಗಿತ್ತು. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಪ್ರಮಾಣಪತ್ರ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಗೊಂದಲಕ್ಕೆ ಸಿಲುಕಿದೆ.
ಮದ್ರಾಸ್ ಹೈಕೋರ್ಟ್ ಹೊಸ ಆದೇಶ
CBFC ಯ ನಿರ್ಧಾರವನ್ನು ಪ್ರಶ್ನಿಸಿ ಸಿನಿಮಾ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ಹೈಕೋರ್ಟ್ ಸಿಬಿಎಫ್ಸಿಗೆ ಪ್ರಮಾಣಪತ್ರ ನೀಡುವಂತೆ ಆದೇಶಿಸಿದ್ದರೂ, ಬಳಿಕ ತನ್ನದೇ ಆದೇಶಕ್ಕೆ ತಡೆ ನೀಡಿತ್ತು. ಇದೀಗ ಈ ಪ್ರಕರಣದ ಕುರಿತಂತೆ ಮದ್ರಾಸ್ ಹೈಕೋರ್ಟ್ ಮತ್ತೆ ಹೊಸ ಆದೇಶ ಹೊರಡಿಸಿದೆ.

ಇದನ್ನು ಓದಿ : ಮದುವೆಯಾದ ಎರಡೇ ತಿಂಗಳಿಗೆ ನೇಣಿಗೆ ಕೊರಳೊಡ್ಡಿದ ಪತಿ..!
ಏಕ ನ್ಯಾಯಾಧೀಶರಿಗೆ ಸೂಚನೆ
ಇಂದು ಆದೇಶ ಪ್ರಕಟಿಸಿರುವ ಹೈಕೋರ್ಟ್, ಪ್ರಕರಣವನ್ನು ಮತ್ತೆ ಏಕಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಿದೆ. ಸಿಬಿಎಫ್ಸಿ ಹಾಗೂ ಸಿನಿಮಾ ನಿರ್ಮಾಪಕರು – ಎರಡೂ ಪಕ್ಷಗಳಿಗೂ ವಾದ ಮಂಡಿಸಲು ಸಮರ್ಪಕ ಅವಕಾಶ ನೀಡಿದ ನಂತರ ವಿಷಯವನ್ನು ತ್ವರಿತವಾಗಿ ನಿರ್ಧರಿಸುವಂತೆ ಏಕ ನ್ಯಾಯಾಧೀಶರಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಸಿಬಿಎಫ್ಸಿ ಚೇರ್ಮನ್ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಿ ನಿರ್ಮಾಪಕರು ಮತ್ತೊಂದು ಅರ್ಜಿ ಸಲ್ಲಿಸಬಹುದೆಂದು ಸಹ ನ್ಯಾಯಾಲಯ ಹೇಳಿದೆ.
ಏಕಸದಸ್ಯ ಪೀಠದಲ್ಲಿ ವಿಚಾರಣೆ
ಇದಲ್ಲದೆ, ಈ ಹಿಂದೆ ಸಿಂಗಲ್ ಜಡ್ಜ್ ಬೆಂಚ್ ನೀಡಿದ್ದ ಆದೇಶವನ್ನು ನಿರ್ಲಕ್ಷ್ಯ ಮಾಡಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಆ ಸಂದರ್ಭದಲ್ಲಿ ಸಿಬಿಎಫ್ಸಿಗೆ ಸಮರ್ಪಕವಾಗಿ ವಾದ ಮಂಡಿಸಲು ಅವಕಾಶ ಸಿಗಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದರಿಂದಾಗಿ ಇದೀಗ ಪ್ರಕರಣ ಮತ್ತೆ ಮೊದಲಿನಿಂದಲೇ ಏಕಸದಸ್ಯ ಪೀಠದಲ್ಲಿ ವಿಚಾರಣೆಗೆ ಬರಲಿದೆ.

ಬಿಡುಗಡೆಗೆ ಮತ್ತಷ್ಟು ವಿಳಂಬ
‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್ಸಿ ಸುಮಾರು 13 ಕಟ್ಗಳನ್ನು ಸೂಚಿಸಿದ್ದು, ಅದಕ್ಕೆ ನಿರ್ಮಾಪಕರು ಒಪ್ಪಿಗೆ ನೀಡಿದ್ದರು. ಆದರೂ ಸಹ ಸಿಬಿಎಫ್ಸಿ ಚೇರ್ಮನ್ ಏಕಪಕ್ಷೀಯ ವಾಗಿ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳುಹಿಸುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಸಿನಿಮಾ ಬಿಡುಗಡೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದ್ದು, ಅದನ್ನು ತಪ್ಪಿಸಲು ನಿರ್ಮಾಪಕರು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲಿಯೂ ನ್ಯಾಯ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಎಚ್. ವಿನೋದ್ ನಿರ್ದೇಶನ
‘ಜನ ನಾಯಗನ್’ ಸಿನಿಮಾವನ್ನು ಎಚ್. ವಿನೋದ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಮಮಿತಾ ಬಿಜು ಹಾಗೂ ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಲನ್ ಪಾತ್ರದಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನು ನೋಡಿ : ಅಬಕಾರಿ ಇಲಾಖೆಯಲ್ಲಿ ಕೋಟ್ಯಾಂತರ ರೂ. ಹಗರಣ ಆರೋಪ : ನಾನು ರಾಜೀನಾಮೆ ಕೊಡಲ್ಲ ಎಂದ ಸಚಿವ ತಿಮ್ಮಾಪುರ್




