ಸಿದ್ದರಾಮಯ್ಯ ಕೆಟ್ಟುಹೋಗಿರುವ ಗಾಡಿಯನ್ನು ಡಿ.ಕೆ ಶಿವಕುಮಾರ್ಗೆ ಹಸ್ತಾಂತರಿಸಿದ್ದಾರೆ: ಕಾಂಗ್ರೆಸ್ ವಿರುದ್ಧ R. Ashok ವಾಗ್ದಾಳಿ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಕಾಂಗ್ರೆಸ್ನಲ್ಲಿ ಡ್ರೈವರ್ ಮಾತ್ರ ಬದಲಾಗಿದೆ, ಆದರೆ ಬಸ್ ಮತ್ತು ಎಂಜಿನ್ ಈಗಾಗಲೇ ಕೆಟ್ಟು ಹೋಗಿದೆ” ಎಂದು ವ್ಯಂಗ್ಯವಾಡಿದ್ದಾರೆ.
ಕೆಟ್ಟುಹೋದ ಸರ್ಕಾರವನ್ನೇ ಡಿಕೆಶಿಗೆ ಹಸ್ತಾಂತರಿಸಿದ್ದಾರೆ
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಕೇವಲ ಚಾಲಕ ಮಾತ್ರ ಬದಲಾಗಿದೆ. ಆದರೆ ಬಸ್ ಮತ್ತು ಎಂಜಿನ್ ಈಗಾಗಲೇ ಕೆಟ್ಟು ಹೋಗಿದೆ. ಚಾಲಕ ಬದಲಾದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಹಾಳಾಗಿರುವ ಬಸ್ ಓಡುವುದಿಲ್ಲ. ಸಿದ್ದರಾಮಯ್ಯ ಅವರು ಕೆಟ್ಟುಹೋದ ಸರ್ಕಾರವನ್ನೇ ಡಿಕೆಶಿಗೆ ಹಸ್ತಾಂತರಿಸಿದ್ದಾರೆ. ಸಾಲ ಮಾಡಿ ಡೀಸೆಲ್ ಹಾಕಿಸಿಕೊಂಡು ಸಾಗುತ್ತಿರುವ ಬಸ್ನ್ನು ಡಿಕೆಶಿಗೆ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ನನ್ನನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸಿರುವ ವಿಚಾರವನ್ನು ಉಲ್ಲೇಖಿಸಿದ R. Ahsok “ನಾನು ಅಹಿಂದ ನಾಯಕ, ನನ್ನನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು.
ಆದರೆ ಈಗ ಅವರು ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಹೈಕಮಾಂಡ್ನ ನಿರ್ಧಾರವೇ ಕಾರಣ” ಎಂದು ಆರೋಪಿಸಿದರು.
ಇದನ್ನು ಓದಿ : ಅನ್ನಭಾಗ್ಯದ ಅಕ್ಕಿ ಕದ್ದಿರುವ ಸಿದ್ದರಾಮಯ್ಯ ಓರ್ವ ಕನ್ನರಾಮಯ್ಯ – ಆರ್.ಅಶೋಕ್ ಟೀಕೆ

ಕಾಂಗ್ರೆಸ್ನಲ್ಲಿ ನಾಯಕರನ್ನು ಸ್ಥಾನದಿಂದ ಕೆಳಗಿಳಿಸುವ ಸಂಸ್ಕೃತಿ ಹೊಸದಲ್ಲ – R. Ashok
ಕಾಂಗ್ರೆಸ್ನ ಹಿಂದಿನ ಇತಿಹಾಸವನ್ನು ಪ್ರಸ್ತಾಪಿಸಿದ ಅಶೋಕ್, “ ರಾಜೀವ್ ಗಾಂಧಿ ಅವರು ವೀರೆಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು. ಹಾಗೆಯೇ ಇಂದಿರಾ ಗಾಂಧಿ ಅವರು ದೇವರಾಜು ಅರಸ್ ಹಾಗೂ ಬಂಗಾರಪ್ಪ ಅವರನ್ನು ಅಧಿಕಾರದಿಂದ ದೂರ ಮಾಡಿದ್ದರು. ಕಾಂಗ್ರೆಸ್ನಲ್ಲಿ ನಾಯಕರನ್ನು ಸ್ಥಾನದಿಂದ ಕೆಳಗಿಳಿಸುವ ಸಂಸ್ಕೃತಿ ಹೊಸದಲ್ಲ” ಎಂದು ಹೇಳಿದರು.
R. Ashok – ಹಿಂದುಳಿದ ವರ್ಗಗಳ ನಾಯಕರಿಗೆ ಕಾಂಗ್ರೆಸ್ ನ್ಯಾಯ ಒದಗಿಸಿಲ್ಲ
ಹಿಂದುಳಿದ ವರ್ಗಗಳ ನಾಯಕರಿಗೆ ಕಾಂಗ್ರೆಸ್ ನ್ಯಾಯ ಒದಗಿಸಿಲ್ಲ ಎಂದು ಆರೋಪಿಸಿದ ಅವರು, “ದೇವರಾಜ ಅರಸ್, ಬಂಗಾರಪ್ಪ ಹಾಗೂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ನಾಯಕರಾಗಿದ್ದರು.
ಇಂತಹ ನಾಯಕರನ್ನೇ ಕಾಂಗ್ರೆಸ್ ಕಡೆಗಣಿಸಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ಪರವಲ್ಲ, ಅವರ ವಿರುದ್ಧವೇ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಅಶೋಕ್ ಟೀಕಿಸಿದರು.

ಇದನ್ನು ನೋಡಿ : ಸಚಿವ ಸ್ಥಾನಕ್ಕಾಗಿ ಹೆಚ್ಚಿದ ಒತ್ತಡ – ಅರಸೀಕೆರೆಯಲ್ಲಿ ಭುಗಿಲೆದ್ದ ಆಕ್ರೋಶ..!




