ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ Venkataramanappa ನಿಧನರಾಗಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಹಲವು ದಶಕಗಳ ಕಾಲ ಜನಸೇವೆ ಮಾಡಿ ತಮ್ಮದೆ ಆದ ಛಾಪು ಮೂಡಿಸಿದ್ದ ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಸಚಿವ ವೆಂಕಟರಮಣಪ್ಪ ಇಂದು ಹೃದಯಾಘಾತದಿಂದ ಬೆಂಗಳೂರಿನ ಪೊರ್ಟೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವೆಂಕಟರಮಣಪ್ಪ ನಿಧನದಿಂದ ಪಾವಗಡ ಕ್ಷೇತ್ರದಲ್ಲಿ ಶೋಕ ಮಡುಗಟ್ಟಿದೆ.

ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ
ತುಮಕೂರು ಜಿಲ್ಲೆ ಪಾವಗಡ ಕ್ಷೇತ್ರದ ಕಾಂಗ್ರೆಸ್ ನ ನಾಯಕರಾಗಿದ್ದ ವೆಂಕಟರಮಣಪ್ಪಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ವೆಂಕಟರಮಣ್ಣ ಅವರು ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟರಮಣಪ್ಪಗೆ ಇಂದು ಬೆಳಗ್ಗೆ ಹೃದಯಾಘಾತ ಸಂಭವಿಸಿದ್ದು, ಕೊನೆಯುಸಿರೆಳೆದಿದ್ದಾರೆ.
ಇದನ್ನು ಓದಿ : ಸಚಿವ ಡಿ. ಸುಧಾಕರ್ ನಿಧನ – ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಣೆ

ಪಾವಗಡ ಮಾಜಿ ಸಚಿವ ವೆಂಕಟರಮಣಪ್ಪ ನಿಧನ
ಇನ್ನು ಪಾವಗಡ ಕ್ಷೇತ್ರದ ರಾಜಕೀಯ ವಲಯದಲ್ಲಿ ವೆಂಕಟರಮಣಪ್ಪ ಪ್ರಮುಖ ನಾಯಕರಾಗಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಎರಡು ಬಾರಿ ಸಚಿವರಾಗಿ ಸೇವೆ ಮಾಡಿದ್ದಾರೆ. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ, ಗ್ರಾಮೀಣ ಭಾಗದ ಅಭಿವೃದ್ದಿಗೆ ಒತ್ತು ನೀಡುವ ನಾಯಕನಾಗಿ ವೆಂಕಟರಮಣಪ್ಪ ಹೆಸರುವಾಸಿಯಾಗಿದ್ದರು. ತಮ್ಮ ರಾಜಕೀಯ ಬದುಕಿನ ಅವಧಿಯಲ್ಲಿ ಅವರು ಪಾವಗಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ, ನೀರು, ವಿದ್ಯುತ್, ಶಿಕ್ಷಣ ಮುಂತಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಶ್ರಮಿಸಿದ್ದರು. ಈ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದು, ಇಂದು ವೆಂಕಟರಮಣಪ್ಪ ನಿಧನಕ್ಕೆ ಸಾವಿರಾರು ಮಂದಿ ಅಭಿಮಾನಿಗಳು, ಬೆಂಬಲಿಗರು, ಗಣ್ಯರು ಕಂಬನಿ ಮಿಡಿದಿದ್ದಾರೆ.

ಜಿಲ್ಲೆಯ ನಾಯಕರು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಸಂತಾಪ
ಇನ್ನು ಹಿರಿಯ ಮುಖಂಡನ ಅಗಲಿಕೆಗೆ ಮಾಜಿ ಸಚಿವ ರಾಜಣ್ಣ, ಶಾಸಕ ಜ್ಯೋತಿ ಗಣೇಶ್ ಸೇರಿ ಜಿಲ್ಲೆಯ ನಾಯಕರು ಹಾಗೂ ಗಣ್ಯಾತಿಗಣ್ಯರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಪೋರ್ಟಿಸ್ ಆಸ್ಪತ್ರೆ ಪರಮೇಶ್ವರ್, ಶಿವರಾಜ್ ತಂಗಡಗಿ ಸೇರಿ ಹಲವರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ರು. ಒಟ್ನಲ್ಲಿ ಹಿರಿಯ ನಾಯಕನ ಅಗಲಿಕೆಗೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತ ಎದುರಾಗಿದೆ.
ಇದನ್ನು ನೋಡಿ : ಪಕ್ಷೇತರ ಅಭ್ಯರ್ಥಿಯಿಂದ ಹಿಡಿದು ಸಿಎಂ ಸ್ಥಾನದವರೆಗೂ ಸಿದ್ದು ನಡೆದ ಬಂದ MOST INTERESTING ಕಹಾನಿ





