Bengaluru : ರಿಯಲ್ ಎಸ್ಟೇಟ್ ಉದ್ಯಮಿಗೆ ಜೀವ ಬೆದರಿಕೆ – ಕಚೇರಿಗೆ ನುಗ್ಗಿ ಜೀವ ಬೆದರಿಕೆ ಹಾಕಿದ ಗ್ಯಾಂಗ್

ಸಿಲಿಕಾನ್ ಸಿಟಿ Bengaluru ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಮಹಿಳಾ ಸಂಘದ ಮುಖ್ಯಸ್ಥೆ ಎಂದು ಹೇಳಿಕೊಂಡು ಕಚೇರಿಗೆ ನುಗ್ಗಿದ ಮಹಿಳೆ, ಸುಮಾರು 10 ಲಕ್ಷ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.
ಇಬ್ಬರು ಪುರುಷರೊಂದಿಗೆ ಕಚೇರಿಗೆ ನುಗ್ಗಿ ಧಮ್ಕಿ
ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ತನೂರು ಬಳಿಯ ಸಂಜಯ್ ನಗರದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಾಜು, ಅವರ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಸಂಗೀತ ರಾಮ್ ಎನ್ನುವ ಮಹಿಳೆ ಇಬ್ಬರು ಪುರುಷರ ಜೊತೆ ಕಚೇರಿಗೆ ನುಗ್ಗಿ ಧಮ್ಕಿ ಹಾಕಿದ್ದಾಳೆ ಎಂದು ಆರೋಪಿಸಲಾಗಿದೆ. ಇನ್ನು ಮಹಿಳೆಯು ನಾನು ಕರ್ನಾಟಕ ಯುವಸೇನೆ ಹಾಗೂ ಮಹಿಳಾ ಸಂಘದ ಮುಖ್ಯಸ್ಥೆ ಎಂದು ಹೇಳಿಕೊಂಡು ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.
READ THIS : ಜೈಲಿನ ಒಳಭೇಟಿಗೆ ಅವಕಾಶ ಕೋರಿ ಕಾರಾಗೃಹ SP ಗೆ ಪತ್ರ ಬರೆದ ದಾಸ

ಕೊಲೆ ಮಾಡೋದಾಗಿ ಮಹಿಳೆಯಿಂದ ಜೀವ ಬೆದರಿಕೆ
ಇನ್ನು ಶಿವಾಜಿನಗರದಲ್ಲಿರುವ ಸೈಟ್ ಒಂದರ ಅಗ್ರಿಮೆಂಟ್ ವಿಚಾರಕ್ಕೆ ಈ ಗಲಾಟೆ ನಡೆದಿದ್ದು, ಆ ಜಾಗದ ಕಡೆ ಹೋಗಬೇಡ, ನಮ್ಮ ತಂಟೆಗೆ ಬರಬಾರದೆಂದರೆ 10 ಲಕ್ಷ ರೂಪಾಯಿ ಕೊಡು ಎಂದು ಬೆದರಿಕೆ ಹಾಕಲಾಗಿದೆ ಎಂದು ಉದ್ಯಮಿ ವೆಂಕಟರಾಜು ಆರೋಪಿಸಿದ್ದಾರೆ. ಅಲ್ದೇ ಪೊಲೀಸರಿಗೆ ದೂರು ನೀಡಿದ್ರೆ 15 ಜನರನ್ನ ಸೇರಿಸಿಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
Bengaluru – ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸದ್ಯ ಘಟನೆ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ವಿರುದ್ದ ತನಿಖೆ ಆರಂಭಿಸಿದ್ದಾರೆ. ಸದ್ಯ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.

MUST WATCH : TUMAKURU DC, SP TRANSFERಗೆ ದೇವರ ಮೊರೆ – KRS ಪಕ್ಷದಿಂದ ಡಿಫರೆಂಟ್ PROTEST ಹೇಗಿತ್ತು?




