WPL 2025:
ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಿದೆ. ಈ ಮೂಲಕ wpl ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ಮೊತ್ತ ಚೇಸ್ ಮಾಡಿ ದಾಖಲೆ ಬರೆದಿದೆ.
Wpl ಇತಿಹಾಸದಲ್ಲಿ ಯಾವುದೇ ತಂಡ 200 ರನ್ಗಳನ್ನು ಚೇಸ್ ಮಾಡಿ ಗೆದ್ದಿರಲಿಲ್ಲ. ಆದರೆ ಈ ಬಾರಿಯ WPLನ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತಿಹಾಸ ನಿರ್ಮಿಸಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ಪಡೆ ಶುಭಾರಂಭ ಮಾಡಿದೆ. ಆದರೆ ಈ ಬಾರಿ ಆರ್ ಸಿಬಿ ಅಭಿಮಾನಿಗಳು ಸ್ಟಾರ್ ಆಟಗಾರ್ತಿ ಶ್ರೇಯಾಂಕ್ ಪಾಟೀಲ್ ಅನ್ನು ಮಿಸ್ ಮಾಡಿಕೊಂಡಿದ್ದಾರೆ. ವಡೋದರಾದ ಕೋಟಂಬಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಗುಜರಾತ್ 201 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಆರ್ಸಿಬಿ 6 ವಿಕೆಟ್ಗಳಿಂದ ಗೆದ್ದಿದೆ. ಸ್ಟಾರ್ ಪ್ಲೇಯರ್ ರಿಚಾ ಘೋಷ್ ಸ್ಫೋಟಕ ಅರ್ಧಶತಕ ಸಿಡಿಸಿ ಗೆಲುವಿಗೆ ಕಾರಣರಾಗಿದ್ದಾರೆ.
203 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ ತಂಡದ ಪರ ರಿಚಾ ಘೋಷ್ (64) ಹಾಗೂ ಪೆರಿ (57) ಅಬ್ಬರದ ಬ್ಯಾಟಿಂಗ್ ಗೆ ಗುಜರಾತ್ ಬೌಲರ್ ಗಳು ತತ್ತರಿಸಿದರು. ಒಟ್ಟಿನಲ್ಲಿ ಆರ್ ಸಿಬಿ 6 ವಿಕೆಟ್ ಗಳೊಂದಿಗೆ ಮೊದಲ ಗೆಲುವನ್ನು ಸಾಧಿಸಿದೆ.