ತುಮಕೂರು:
ತುಮಕೂರಿನ ತಾಲ್ಲೂಕಿನ ದುರ್ಗದಳ್ಳಿ, ತಿಮ್ಮನಾಯಕನಹಳ್ಳಿ, ಹಳೆಕೋಟೆ ಗ್ರಾಮಗಳಲ್ಲಿ ಬಹುತೇಕವಾಗಿ ವಾಸಿಸುತ್ತಿರೋರು ದಲಿತರೇ. ಈ ಗ್ರಾಮಗಳು ಅರೆಗುಜ್ಜನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುತ್ತವೆ. ಈ 3 ಈ ಟ್ಯಾಂಕ್ ನಿಂದಲೇ ಮೂರು ಗ್ರಾಮಗಳಿಗೂ ನೀರು ಹೋಗುತ್ತೆ. ಆದ್ರೆ 6 ತಿಂಗಳಿಂದ ಓವರ್ ಹೆಡ್ ಟ್ಯಾಂಕ್ ಕ್ಲೀನ್ ಮಾಡದೆ ಇರೋದ್ರಿಂದ ಕುಡಿಯುವ ನೀರಿನಲ್ಲಿ ಹುಳುಗಳು ತೇಲುತ್ತಿವೆ.
ಇನ್ನು ತಿಮ್ಮನಾಯಕನಹಳ್ಳಿಯಲ್ಲಿಯೇ ಈ ಓವರ್ ಹೆಡ್ ಟ್ಯಾಂಕ್ ಇರೋದು. ನೀವು ದೃಶ್ಯಗಳಲ್ಲಿ ನೋಡಿದ ಹಾಗೇ ಕುಡಿಯುವ ನೀರಿನಲ್ಲಿ ಹುಳುಗಳು ಪತ್ತೆಯಾಗಿರೋದು ಈ ಗ್ರಾಮದಲ್ಲೇ. ಈ ಪರಿಸ್ಥಿತಿಯ ಬಗ್ಗೆ ಗ್ರಾಮಸ್ಥರಲ್ಲಿ ಕೇಳಿದ್ರೆ ಆ ಗ್ರಾಮದ ಮಂಜುನಾಥ್ ಹೇಳೋದು ಈಗೇ.. ದುರ್ಗದಳ್ಳಿ, ತಿಮ್ಮನಾಯಕನಹಳ್ಳಿ, ಹಳೆಕೋಟೆ ಗ್ರಾಮಗಳಿಗೆ ಕುಡಿಯೋಕೆ ನೀರು ಒದಗಿಸಲು ನಮ್ಮ ಗ್ರಾಮ ತಿಮ್ಮನಾಯಕನಹಳ್ಳಿಯಲ್ಲಿಯೇ ಒಂದು ಓವರ್ ಹೆಡ್ ಟ್ಯಾಂಕ್ ಇರೋದು. ಈ ಮೂರು ಗ್ರಾಮಗಳನ್ನು ಸೇರಿ ಸುಮಾರು 300 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡ್ತಿದ್ದಾವೆ. ಈ ಕುಟುಂಬಗಳಿಗೆ ಕುಡಿಯವ ನೀರು ಒದಗಿಸಲು ಇರೋದು ಇದೊಂದೆ. ಇಂತಹ ಟ್ಯಾಂಕ್‌ನಿಂದ ನಿನ್ನೆ ತಾನೇ ಕುಡಿಯಲು ನೀರು ತಂದಿದ್ದಿವಿ. ಇವತ್ತು ಕುಡಿಯುವ ನೀರಿನಲ್ಲಿ ಹುಳುಗಳು ಬರ್ತಿವಿ. ಓವರ್ ಹೆಡ್ ಟ್ಯಾಂಕ್ ಸಂಬಂಧವಾಗಿ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಮನವಿ ಮಾಡಿದ್ರು ಅವ್ರು ಕ್ಯಾರೆ ಅನ್ನುತ್ತಿಲ್ಲ ಅಂತಾರೆ ತಮ್ಮ ಅಳಲನ್ನು ತೋಡಿಕೊಂಡರು.
ಮೂರು ಗ್ರಾಮಗಳಿಗೆ ಇರೋದು ಒಂದೇ ಓವರ್ ಹೆಡ್ ಟ್ಯಾಂಕ್. ಈ ಟ್ಯಾಂಕ್ ಕ್ಲೀನ್ ಮಾಡಿಸದೆ ಇರೋದ್ರಿಂದ ಗ್ರಾಮಸ್ಥರು ಹುಳುಗಳು ತುಂಬಿ ತುಳುಕುವ ನೀರನ್ನೇ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಇತ್ತ ಗಮನಹರಿಸಿ, ಗ್ರಾಮಸ್ಥರ ಸಮಸ್ಯೆಯನ್ನು ಬಗೆಹರಿಸಬೇಕಿದೆ.