MYSURU: ಚಿನ್ನಕ್ಕಾಗಿ ಸ್ನೇಹಿತೆಯನ್ನು ಕೊಂದ ಮಹಿಳೆ

ಮೃತ ಮಹಿಳೆ
ಮೃತ ಮಹಿಳೆ
ಮೈಸೂರು

ಮೈಸೂರು:

ಚಿನ್ನದ ಸರಕ್ಕಾಗಿ ಸ್ನೇಹಿತೆಯನ್ನು ಕೊಂದಿರುವ ಘಟನೆ ಮೈಸೂರಿನ ಕೆ.ಸಿ ಬಡಾವಣೆಯಲ್ಲಿ ನಡೆದಿದೆ. ಕೆಸಿ ಬಡವಾಣೆಯ ನಿವಾಸಿ ಶಕುಂತಲಾ (42)  ಸುಲೋಚನಾ (62) ಎಂಬ ಮಹಿಳೆಯನ್ನು ಕೊಲೆ ಮಾಡಿದ್ದಾಳೆ. ಕೊಲೆಯಾದ ಸುಲೋಚನಾ ಪೊಲೀಸ್ ಇಲಾಖೆ ನಿವೃತ್ತ ನೌಕರ ಗಂಗಣ್ಣರ ಪತ್ನಿ. ಮಾರ್ಚ್‌ 5 ರಂದು ಮನೆಗೆ ಬಂದ ಸುಲೋಚನಾಳನ್ನು ಉಸಿರುಗಟ್ಟಿಸಿ ಶಕುಂತಲಾ ಕೊಲೆ ಮಾಡಿ ಮೃತದೇಹದ ಮೇಲಿದ್ದ ಚಿನ್ನದ ಸರ ಕಳಚಿ ಕೊಂಡಿದ್ದಳು. ನಂತರ ಪ್ರಜ್ಞೆ ತಪ್ಪಿ ಬಿದ್ದುಹೋದರೆಂದು ಮನೆಯವರನ್ನು ಶಕುಂತಲಾ ನಂಬಿಸಿದ್ದಳು.

ನಂತರ ಅನುಮಾನಗೊಂಡು ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಶಕುಂತಲಾ ಸಾಲ ತೀರಿಸಲು ಇಂತಹ ಕೃತ್ಯವೆಸಗಿದ್ದಾಳೆ. ಸುಲೋಚನಾ ಸರ ಕದ್ದು 1.5 ಲಕ್ಷಕ್ಕೆ ಶಕುಂತಲಾ ಗಿರವಿ ಇಟ್ಟಿದ್ದಳು. ಇನ್ನು ಈ ಪ್ರಕರಣ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಶಾಂಕುತಲಾಳನ್ನು ನಜರಾಬಾದ್ ಪೊಲೀಸರು ಬಂಧಿಸಿದ್ದಾರೆ.

 

Author:

...
Sub Editor

ManyaSoft Admin

share
No Reviews