ಬೆಂಗಳೂರು : ಗಂಡನ ನಿರ್ಲಕ್ಷ್ಯಕ್ಕೆ ಪತ್ನಿ ನೇಣಿಗೆ ಶರಣು

ಬೆಂಗಳೂರು: ನಗರದ ಹೆಚ್‌ಬಿಆರ್ ಲೇಔಟ್‌ನಲ್ಲಿ ನಡೆದ ದುರ್ಭಾಗ್ಯಕರ ಘಟನೆ ಒಂದು ಕುಟುಂಬವನ್ನು ಆಘಾತಕ್ಕೆ ನೂಕಿದೆ. ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾಗರಾಜ್ ಪತ್ನಿ ಶಾಲಿನಿ ಅವರು ನೆನ್ನೆ ರಾತ್ರಿ ತಮ್ಮ ನಿವಾಸದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಮಹಿಳೆ ಶಾಲಿನಿ, ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದವರು. ಅವರು ತಮ್ಮ ಮೊದಲ ಪತಿಗೆ ವಿಚ್ಛೇದನ ನೀಡಿ ನಂತರ ನಾಗರಾಜ್ ಅವರನ್ನು ಮದುವೆಯಾಗಿದ್ದರು. ಶಾಲಿನಿ ಹಾಗೂ ನಾಗರಾಜ್ ಹೈಸ್ಕೂಲ್ ಟ್ಯೂಷನ್ ಕಾಲದಲ್ಲಿ ಪರಿಚಿತರಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿತ್ತು. ಶಾಲಿನಿ MSc ಮತ್ತು ನಾಗರಾಜ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಬೆಂಗಳೂರು ಬಂದ ನಂತರ, ನಾಗರಾಜ್ ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಶಾಲಿನಿ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಆರ್ಥಿಕ ಸಹಾಯ ಮಾಡುತ್ತಿದ್ದರು.

ನಾಗರಾಜ್ 2020ರಲ್ಲಿ ಪಿಎಸ್‌ಐ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ, ಅವರ ವರ್ತನೆಲ್ಲಿ ಬದಲಾವಣೆ ಕಂಡುಬಂದಿತ್ತು ಎನ್ನಲಾಗಿದೆ. ಶಾಲಿನಿಯ ಪ್ರಕಾರ, ಅವರು ಮದುವೆಯಾಗದೆ ಮೋಸ ಮಾಡುತ್ತಿದ್ದಾರೆಂದು ಕೋಣನಕುಂಟೆ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಲಾಖಾ ತನಿಖೆಯೂ ನಡೆದಿತ್ತು. ಕುಟುಂಬದ ವಿರೋಧದ ನಡುವೆಯೂ 2024ರ ಆಗಸ್ಟ್‌ನಲ್ಲಿ ಇಬ್ಬರ ಮದುವೆ ನಡೆದಿತ್ತು.

ವಿವಾಹ ನಂತರ ಕೆಲಕಾಲ ದಾಂಪತ್ಯ ಸುಂದರವಾಗಿದ್ದರೂ, ಇತ್ತೀಚೆಗೆ ಅವರ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ಕಳೆದ ಎರಡು ತಿಂಗಳಿನಿಂದ ನಾಗರಾಜ್ ಪ್ರತ್ಯೇಕವಾಗಿದ್ದು, ಶಾಲಿನಿಗೆ ತೀವ್ರ ಮಾನಸಿಕ ಒತ್ತಡವಿತ್ತು.  ಆದರೆ ಕಳೆದೆರಡು ತಿಂಗಳಿನಿಂದ ಶಾಲಿನಿ ನಾಗರಾಜ್ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಬೇಸತ್ತು ನಾಗರಾಜ್ ಬೇರೆಡೆ ವಾಸವಿದ್ದ. ಪತಿ ಮನೆಗೆ ಬರುತ್ತಿಲ್ಲವೆಂದು ಕೋಪಗೊಂಡ ಶಾಲಿನಿ ನಿನ್ನೆ‌ ರಾತ್ರಿ ಕರೆ ಮಾಡಿ ರೈಲಿಗೆ ಸಿಕ್ಕಿ ಸಾಯುತ್ತೇನೆಂದು ಹೇಳಿ ಮನೆಯಿಂದ ಹೊರಟ್ಟಿದ್ದರು. ಈ ವೇಳೆ ಹೊಯ್ಸಳ ಸಿಬ್ಬಂದಿ ರಕ್ಷಿಸಿ ಮನೆಗೆ ಬಿಟ್ಟು ತೆರಳಿದ್ರು. ಹೊಯ್ಸಳ ಸಿಬ್ಬಂದಿ ಮನೆಗೆ ಬಿಟ್ಟು ತೆರಳುತ್ತಿದ್ದಂತೆ ಶಾಲಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ನಾಗರಾಜ್ ಅವರ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಶಾಲಿನಿಯ ಕುಟುಂಬಸ್ಥರು ನೀಡಿದ ದೂರಿನಂತೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

 

Author:

...
Keerthana J

Copy Editor

prajashakthi tv

share
No Reviews