IPL 2025 : 18ನೇ ಆವೃತ್ತಿಯ ಐಪಿಎಲ್ ಟೂರ್ನಿ ಹಿಂದೆಂದಿಗಿಂತಲೂ ಸಖತ್ ಡಿಫರೆಂಟ್ ಆಗಿದೆ. ಲೀಗ್ ಸ್ಟೇಜ್ ಅಂತ್ಯಕ್ಕೆ ಕೇವಲ ಎರಡೇ ಪಂದ್ಯಗಳು ಬಾಕಿ ಉಳಿದಿದ್ರೂ ಟಾಪ್ 2 ಸ್ಥಾನಕ್ಕಾಗಿ 4 ತಂಡಗಳ ನಡುವೆ ಟಫ್ ಫೈಟ್ ನಡೀತಿದೆ. ನಿಜ ಅಂದ್ರೆ ಮಿಲಿಯನ್ ಡಾಲರ್ ಟೂರ್ನಿಯ ಅಸಲಿ ಕಿಕ್ ಈಗ ಶುರುವಾಗಿದೆ. ಅದರಲ್ಲಿಯೂ ಇವತ್ತು ಮತ್ತು ನಾಳೆ ನಡೆಯುವ ಪಂದ್ಯಗಳ ಮೇಲೆ ಇಡೀ ಕ್ರಿಕೆಟ್ ಲೋಕದ ಕುತೂಹಲ ಕೆರಳಿಸಿದೆ.
ದುಡ್ಡಿನ ಹೊಳೆಯನ್ನೇ ಹರಿಸೋ ಐಪಿಎಲ್ ಟೂರ್ನಿಗೆ ತೆರೆ ಬೀಳೋದಕ್ಕೆ ಕೌಂಟ್ಡೌನ್ ಶುರುವಾಗಿದ್ರೂ ಕೂಡ ಅಭಿಮಾನಿಗಳ ಕುತೂಹಲ ಮಾತ್ರ ಕಡಿಮೆಯಾಗ್ತಿಲ್ಲ. ಇಂದು ಮತ್ತು ನಾಳಿನ ಪಂದ್ಯಗಳ ಮೇಲೆ ಕ್ರಿಕೆಟ್ ಲೋಕದ ಕಣ್ಣಿದೆ. ಈ ಎರಡು ಪಂದ್ಯಗಳಲ್ಲಿ ಟಾಪ್-2 ಸ್ಥಾನಿ ಯಾರಾಗ್ತಾರೆ? ಕ್ವಾಲಿಫೈಯರ್ ಟಿಕೆಟ್ ಯಾರಿಗೆ ಸಿಗುತ್ತೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿದೆ.
ಕಳೆದ 4 ದಿನಗಳಿಂದ ನಡೆದ 4 ಪಂದ್ಯಗಳು ಈ ಬಾರಿಯ ಐಪಿಎಲ್ ಟೂರ್ನಿಗೆ ಸಖತ್ ಟ್ವಿಸ್ಟ್ ಕೊಟ್ಟಿವೆ. ಈ ನಾಲ್ಕೂ ಪಂದ್ಯಗಳಲ್ಲಿ ಎಲಿಮಿನೇಟ್ ಆಗಿ ಟೂರ್ನಿಯಿಂದಲೇ ಹೊರಬಿದ್ದಿರೋ ತಂಡಗಳು ಪಾಯಿಂಟ್ಸ್ ಟೇಬಲ್ನ ಟಾಪ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ತಂಡಗಳಿಗೆ ಸೋಲಿನ ರುಚಿ ತೋರಿಸಿವೆ. ಹೀಗಾಗಿ ಪಾಯಿಂಟ್ಸ್ ಟೇಬಲ್ನಲ್ಲಿ ಇನ್ನೂ ಕೂಡ ಹಾವು-ಏಣಿ ಆಟ ಮುಂದುವರೆದಿದೆ. ಟಾಪ್ 2 ತಂಡವಾಗಿ ಪ್ಲೇ ಆಫ್ ಪ್ರವೇಶಿಸೋಕೆ ನಾಲ್ಕೂ ತಂಡಗಳಿಗೂ ಡೋರ್ ಈಗಲೂ ಫುಲ್ ಓಪನ್ ಆಗಿದೆ.
ಇವತ್ತು ಪಿಂಕ್ ಸಿಟಿ ಜೈಪುರದಲ್ಲಿಂದು ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಫೈಟ್ ನಡೆಯಲಿದೆ. ಪ್ಲೇ ಆಫ್ಗೆ ಕ್ವಾಲಿಫೈ ಆಗಿರೋ ಉಭಯ ತಂಡಗಳಿಗೆ ಇದು ಕೊನೆಯ ಲೀಗ್ ಪಂದ್ಯವಾಗಿದೆ. ಇಂದಿನ ಪಂದ್ಯ ಗೆದ್ದವರು ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್ 1 ಸ್ಥಾನಕ್ಕೇರಲಿದ್ದಾರೆ. ಸೋತವರಿಗೆ ಸಂಕಷ್ಟ ಎದುರಾಗಲಿದ್ದು ಟಾಪ್ 2 ಸ್ಥಾನದ ಕನಸು ನುಚ್ಚು ನೂರಾಗಲಿದೆ. ಹೀಗಾಗಿ ಇವರಿಬ್ಬರ ನಡುವಿನ ಇಂದಿನ ಬ್ಯಾಟಲ್ ಸಾಕಷ್ಟು ಕುತೂಹಲ ಕೆರಳಿಸಿದೆ.
ಇಂದಿನ ಪಂದ್ಯದಲ್ಲಿ ಮುಂಬೈ ಅಥವಾ ಪಂಜಾಬ್ ಯಾರೇ ಗೆದ್ದರೂ ಒಬ್ಬರಿಗೆ ಟಾಪ್ 2ರಲ್ಲಿ ಒಂದು ಸ್ಥಾನ ಕನ್ಫರ್ಮ್. ಇನ್ನೊಂದು ಸ್ಥಾನದ ಭವಿಷ್ಯ ನಾಳೆ ನಡೆಯೋ ಆರ್ಸಿಬಿ ಮತ್ತು ಲಕ್ನೋ ಪಂದ್ಯ ಮೇಲೆ ನಿಂತಿದೆ. ಈ ಪಂದ್ಯದಲ್ಲಿ ಆರ್ಸಿಬಿ ಗೆದ್ರೆ ಸಾಕು ಅಂಕಪಟ್ಟಿಯಲ್ಲಿ 2ನೇ ಸ್ಥಾನ ಫಿಕ್ಸ್ ಆಗಲಿದೆ. ಆರ್ಸಿಬಿ ಸೋತ್ರೆ ಗುಜರಾತ್ 2ನೇ ಸ್ಥಾನಿಯಾಗಿ ಕ್ವಾಲಿಫೈಯರ್ಗೆ ಎಂಟ್ರಿ ಕೊಡಲಿದೆ.
ಒಟ್ಟಿನಲ್ಲಿ ಅಂತಿಮ ಘಟ್ಟ ತಲುಪಿರೋ ಹಂತದಲ್ಲಿ ಐಪಿಎಲ್ ಟೂರ್ನಿಯ ಅಸಲಿ ಕಿಕ್ ಅಭಿಮಾನಿಗಳಿಗೆ ಸಿಗ್ತಿದೆ. ಇಂದು ಹಾಗೂ ನಾಳೆಯ ಕದನದಲ್ಲಿ ಟಾಪ್ 2 ಸ್ಥಾನದ ಮೇಲೆ ಕಣ್ಣಿಟ್ಟಿರೋ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಲಿದ್ದು, ಈ ಹೋರಾಟದಲ್ಲಿ ಗೆಲ್ಲೋದ್ಯಾರು ಅನ್ನೋದನ್ನ ಕಾದುನೋಡ್ಬೇಕಿದೆ.