ಶಿರಾ ನಗರದ KSRTC ಬಸ್ ನಿಲ್ದಾಣದ ಹಿಂಭಾಗದಲ್ಲಿ ನಗರಸಭೆ ಅವರು ತರಕಾರಿ ಮಾರುಕಟ್ಟೆಗಾಗಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದ್ರೆ ಈದೀಗ ಮಳಿಗೆಗಳನ್ನು ಕೆಡವಿದ್ದು ಈ ಜಾಗ ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ಉದ್ಭವಿಸಿದೆ. ಹೌದು ಇಷ್ಟು ದಿನ ನಗರ ಸಭೆಯ ಜಾಗವಾಗಿದ್ದ ಈ ಮಾರ್ಕೆಟ್ನಲ್ಲಿ ಮಳಿಗೆಗಳನ್ನು ಕೆಡವಲಾಗಿದ್ದು, ಈಗ ಖಾಸಗಿಯವರು ಕಲ್ಲುಗಳನ್ನು ಹಾಕಿರೋದ್ರಿಂದ ಈ ಜಾಗ ಯಾರಿಗೆ ಸೇರಿದೆ ಅನ್ನೋ ಪ್ರಶ್ನೆ ಏಳಲು ಕಾರಣವಾಗಿದೆ.
IDSMT ಯೋಜನೆಯಲ್ಲಿ 2004ರಲ್ಲಿ 87 ತರಕಾರಿ ಅಂಗಡಿಗಳನ್ನು ನಿರ್ಮಾಣ ಮಾಡಲಾಗಿತ್ತು. ಆದ್ರೆ ಈ ಮಳಿಗೆಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿತ್ತಂತೆ. ಇದ್ರಿಂದ ವ್ಯಾಪಾರಿಗಳಿಗೆ ಹಾಗೂ ವ್ಯಾಪಾರಿಗಳಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿತ್ತು. ಹೀಗಾಗಿ ಇಲ್ಲಿ ವ್ಯಾಪಾರಕ್ಕೆ ಹೋಗಲು ಹಿಂದೇಟು ಹಾಕ್ತಿದ್ರಂತೆ.
ಜೊತೆಗೆ ನಗರಸಭೆಯ ನಿರ್ಲಕ್ಷ್ಯದಿಂದಾಗಿ ಅಂಗಡಿಗಳನ್ನು ಹರಾಜಿನಲ್ಲಿ ಕೂಗಿ ಪಡೆದವರು ಸಹ ಅಲ್ಲಿಗೆ ಹೋಗದ ಕಾರಣ ಇದು ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿತ್ತು. ಕೆಲ ಕಿಡಿಗೇಡಿಗಳು ಅಂಗಡಿಗಳಿಗೆ ಹಾಕಿದ್ದ ರೋಲಿಂಗ್ ಶೆಲ್ಟರ್ಗಳನ್ನು ಕಿತ್ತುಕೊಂಡು ಹೋಗುತ್ತಿದ್ದು ಯಾರು ಕೇಳುವವರು ಇಲ್ಲದಂತಾಗಿದೆ.
ಇದಿಷ್ಟು ಅಲ್ಲದೇ ಕಳೆದ 20 ವರ್ಷದಿಂದ ಈ ಮಳಿಗೆಗಳಿಂದ ನಗರಸಭೆಗೆ ಆದಾಯ ಬರದ ಕಾರಣ ಇಲ್ಲಿನ ಮಳಿಗೆಗಳನ್ನು ಕೆಡವಲಾಯ್ತು. ಅಲ್ದೇ ಇದೇ ಜಾಗದಲ್ಲಿ ವೈಜ್ಞಾನಿಕ ರೀತಿಯಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಲು ಮುಂದಾಗಿತ್ತು. ಇಷ್ಟು ದಿನ ಈ ಜಾಗಕ್ಕೆ ಯಾವುದೇ ವಿವಾದ ಇರಲಿಲ್ಲ ಆದ್ರೆ ಇದೀಗ ಈ ಜಾಗಕ್ಕೆ ಯಾರೋ ಕಲ್ಲುಗಳನ್ನು ಸುರಿದಿರೋದು ಈ ಜಾಗ ಯಾರಿಗೆ ಸೇರಿದೆ ಅನ್ನೋ ಅನುಮಾನ ಶುರುವಾಗಿದೆ.