HEALTH TIPS: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇಯಿಸಿದ ಮೊಟ್ಟೆ ತಿನ್ನುವುದರಿಂದ ಆಗುವ ಲಾಭಗಳೇನು?

HEALTH TIPS: 

ಇತ್ತೀಚಿನ ಯುವ ಜನತೆ ಬಾಡಿ ಫಿಟ್ನೆಸ್ ಗೆ ಹೆಚ್ಚು ಮಹತ್ವ ಕೊಡುತ್ತಾರೆ. ಇದಕ್ಕೆ ತಕ್ಕಂತಹ ಆಹಾರಗಳನ್ನು ಪ್ರತಿದಿನ ಸೇವಿಸುವ ಅಭ್ಯಾಸ ಇಟ್ಟುಕೊಳ್ಳುತ್ತಾರೆ. ಆರೋಗ್ಯ ಸಂಶೋಧನೆ ಹೇಳುವ ಹಾಗೆ ಬೆಳಗ್ಗೆ ತಿಂಡಿ ತಿನ್ನುವ ಸಮಯದಲ್ಲಿ ಎರಡು ಕೋಳಿ ಮೊಟ್ಟೆಗಳನ್ನು ಬೇಯಿಸಿ ಜೊತೆಯಲ್ಲಿ ತಿನ್ನುವುದು ಫಿಟ್ನೆಸ್ ನಿರ್ವಹಣೆಗೆ ಸಹಕಾರಿ.

*ಕೋಳಿ ಮೊಟ್ಟೆಯಲ್ಲಿ ವಿಟಮಿನ್ ಡಿ ಪ್ರಮಾಣ ಹೆಚ್ಚಾಗಿರುವುದರಿಂದ ಇದು ನಮ್ಮ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ನಮ್ಮ ಮಾಂಸ ಖಂಡಗಳನ್ನು ಬಲಪಡಿಸುತ್ತದೆ ಮತ್ತು ಆರೋಗ್ಯಕರವಾಗಿ ಕಾಪಾಡುತ್ತದೆ.

*ಕೋಳಿ ಮೊಟ್ಟೆಯಲ್ಲಿ ಜಿಂಕ್ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ. ಇದು ಶೀತ, ನೆಗಡಿ, ಕೆಮ್ಮು ಇನ್ನಿತರ ಸಮಸ್ಯೆಗಳ ವಿರುದ್ಧ ಹೋರಾಡುವಲ್ಲಿ ನೆರವಾಗುತ್ತದೆ. ಇದರಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ 12 ಪ್ರಮಾಣ ಹೆಚ್ಚಾಗಿರಲಿದ್ದು, ನಮ್ಮ ರೋಗ ನಿರೋಧಕ ಶಕ್ತಿಯನ್ನು ಕಾಪಾಡಲು ನೆರವಾಗುತ್ತದೆ.

*ವಿಟಮಿನ್ ಎ ಸೇರಿದಂತೆ ಇನ್ನಿತರ ಅನುಕೂಲಕರವಾದ ಆಂಟಿ ಆಕ್ಸಿಡೆಂಟ್ ಅಂಶಗಳು ಕೋಳಿ ಮೊಟ್ಟೆಯಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಇದು ನಮ್ಮ ಕಣ್ಣುಗಳ ದೃಷ್ಟಿಯನ್ನು, ತಲೆ ಕೂದಲಿನ ಆರೋಗ್ಯವನ್ನು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.

*ತೂಕ ಇಳಿಕೆಯ ಪ್ರಯತ್ನದಲ್ಲಿರುವ ದೈನಂದಿನ ಆಹಾರಪದ್ಧತಿ ಯಲ್ಲಿ ನಿತ್ಯವೂ ಒಂದು ಮೊಟ್ಟೆ ಇರುವಂತೆ ನೋಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಯಾಕೆಂದ್ರೆ ಮೊಟ್ಟೆ ಸೇವನೆಯಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡುತ್ತದೆ, ಜೊತೆಗೆ ಇನ್ನಿತರ ಕ್ಯಾಲೋರಿ ಅಂಶಗಳು ಹೆಚ್ಚಿರುವ ಆಹಾರಗಳ ಸೇವನೆಯನ್ನು ನಿಯಂತ್ರಿಸುತ್ತದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಉಪಹಾರದ ಸಮಯದಲ್ಲಿ ಬೇಯಿಸಿದ ಕೋಳಿ ಮೊಟ್ಟೆಗಳನ್ನು ಸೇವನೆ ಮಾಡುವುದರಿಂದ ಹೊಟ್ಟೆ ತುಂಬಿದ ಅನುಭವ ಉಂಟುಮಾಡುತ್ತದೆ.

 

Author:

...
Keerthana J

Copy Editor

prajashakthi tv

share
No Reviews