VIRAT KHOLI INSTAGRAM POST : ನೆನ್ನೆ ರಾತ್ರಿ ಕ್ರಿಕೆಟ್ ಪ್ರೇಮಿಗಳಿಗೆ, ವಿಶೇಷವಾಗಿ RCB ಅಭಿಮಾನಿಗಳಿಗೆ ಮರೆಯಲಾಗದ ಕ್ಷಣ. 17 ವರ್ಷಗಳ ನಿರೀಕ್ಷೆಯ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು [RCB] ಇಂಡಿಯನ್ ಪ್ರೀಮಿಯರ್ ಲೀಗ್ [IPL] ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ಬಹುವರ್ಷಗಳ ಕನಸನ್ನು ನನಸಾಗಿಸಿಕೊಂಡಿದೆ.
ಈ ಐತಿಹಾಸಿಕ ಕ್ಷಣದಲ್ಲಿ, ತಂಡದ ಹೃದಯವಾದ VIRAT KHOLI ಭಾವುಕರಾಗಿಯೇ ಕಂಡುಬಂದರು. ಪಂದ್ಯ ಮುಗಿಯುವ ಮುನ್ನವೇ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಮೊದಲ ಸೀಸನ್ನಿಂದಲೇ RCB ಗೆ ನಿಷ್ಠೆಯಿಂದ ಆಟವಾಡಿದ ಕೊಹ್ಲಿಗೆ ಇದು ಜೀವಮಾನವನ್ನು ಮೀರಿದ ಸಾಧನೆಯಾಗಿದೆ.
ಇನ್ನು ಪಂದ್ಯ ನಂತರ, ವಿರಾಟ್ ಕೊಹ್ಲಿ ತಮ್ಮ INSTAGRAM ನಲ್ಲಿ ನಾಲ್ಕು ಭಾವುಕ ಫೋಟೋಗಳನ್ನು ಹಂಚಿಕೊಂಡು ತಮ್ಮ ಹೃದಯ ಸ್ಪರ್ಶಿಸುವ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. "ಈ ಕನಸನ್ನು ನನಸಾಗಿಸಿದ ತಂಡ ಇದು. ಈ ಋತುವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಳೆದ ಎರಡೂವರೆ ತಿಂಗಳುಗಳಿಂದ ನಾವು ಹೃದಯದಿಂದ ಆಡಿದ್ದೇವೆ. ಈ ಗೆಲುವು ಪ್ರತಿಯೊಂದು ಕಷ್ಟದ ವೇಳೆಯಲ್ಲೂ ನಮ್ಮೊಂದಿಗೆ ನಿಂತ ಅಭಿಮಾನಿಗಳಿಗೆ ಸಮರ್ಪಿತ." ಎಂದು VIRAT KHOLI ಬರೆದುಕೊಂಡಿದ್ದಾರೆ.
ಇದು ಕೇವಲ ಒಂದು TROPHY ಅಲ್ಲ. ಇದು ವರ್ಷಗಳ ತಾಳ್ಮೆ, ಶ್ರಮ, ಮತ್ತು ಭರವಸೆಯ ಫಲ. ಕೊಹ್ಲಿಯ ಶ್ರದ್ಧೆ ಮತ್ತು RCB ಯ ನಂಬಿಕೆಗೆ ಇದು ಉತ್ತರವಾಗಿದೆ. ಈ ಗೆಲುವು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. RCB ಅಭಿಮಾನಿಗಳಿಗೆ ಇದು ನಿಜಕ್ಕೂ ಜಯದ ಸಂಭ್ರಮದ ಋತುವಾಗಿದೆ.