CRICKET :
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾಕ ದಾಳಿಯನ್ನು ಕ್ರಿಕೆಟಿಗರು ತೀವ್ರವಾಗಿ ಖಂಡಿಸಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ರನ್ ಮಷಿನ್ ವಿರಾಟ್ ಕೊಹ್ಲಿ, ಕನ್ನಡಿಗ ಕೆ.ಎಲ್.ರಾಹುಲ್ ಸೇರಿದಂತೆ ಅನೇಕ ಸ್ಟಾರ್ ಕ್ರಿಕೆಟಿಗರು ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸಂದೇಶ ಬರೆದಿದ್ದಾರೆ. "ಪಹಲ್ಗಾಮ್ನ ದಾಳಿಯಿಂದ ತುಂಬಾ ದುಃಖವಾಗಿದೆ. ಸಾವನ್ನಪ್ಪಿದವರ ಕುಟುಂಬಕ್ಕೆ ಸಂತಾಪ. ಅವರಿಗೆ ಶಾಂತಿ ಮತ್ತು ಶಕ್ತಿ ಸಿಗಲಿ. ಈ ಕೃತ್ಯಕ್ಕೆ ನ್ಯಾಯ ದೊರಕಲಿ," ಎಂದು ಅವರು ಬರೆದಿದ್ದಾರೆ. ಕೊಹ್ಲಿಯ ಈ ಸಂದೇಶ ದಾಳಿಯ ಗಂಭೀರತೆಯನ್ನು ಒತ್ತಿಹೇಳುತ್ತದೆ.
ವಿರಾಟ್ ಈ ದಾಳಿಯನ್ನು ಕ್ರೂರ ಕೃತ್ಯ ಎಂದು ಕರೆದು, ದಾಳಿಕೋರರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಅವರ ಪೋಸ್ಟ್ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದ್ದು, ಅನೇಕ ಕ್ರಿಕೆಟ್ ಅಭಿಮಾನಿಗಳು ಮತ್ತು ಸಾಮಾನ್ಯ ಜನರು ಕೊಹ್ಲಿಯ ಸಂದೇಶವನ್ನು ಮೆಚ್ಚಿದ್ದಾರೆ.