Viral Post : ತನ್ನ ಮದುವೆಗೆ ತಾನೇ ಪುರೋಹಿತನಾದ ವರ

ಹರಿದ್ವಾರದಲ್ಲೊಂದು ವಿಶಿಷ್ಟ ಮದುವೆ
ಹರಿದ್ವಾರದಲ್ಲೊಂದು ವಿಶಿಷ್ಟ ಮದುವೆ
ದೇಶ

Viral Marriage Video:

ಮದುವೆ ಅಂದರೆ ಗಟ್ಟಿ ಮೇಳ, ಪುರೋಹಿತರ ಮಂತ್ರಘೋಷ ಇರಲೇ ಬೇಕು. ಪುರೋಹಿತರಿಲ್ಲದೇ ಯಾವುದೇ ಮದುವೆ ಆಗುವುದಿಲ್ಲ.  ಮಂತ್ರ ಮಾಂಗಲ್ಯ, ಸ್ವಯಂ ಮದುವೆಗಳಂತವನ್ನೂ ಕೂಡ ನಾವು ನೋಡಿದ್ದೇವೆ. ‌ಆದರೆ ಇಲ್ಲೊಂದು ನಡೆದಿರೋ ಮದುವೆ ಬಗ್ಗೆ ಕೇಳಿದರೆ ಶಾಕ್ ಆಗ್ತಿರಾ. ಹೌದು ಇಲ್ಲೊಂದು ಮದುವೆಯಲ್ಲಿ ವರನೇ ಪುರೊಹಿತನಾಗಿರೋ ಅಪರೂಪದ ಪ್ರಸಂಗ ಬೆಳಕಿಗೆ ಬಂದಿದೆ. ಹಾಗಂದ ಮಾತ್ರಕ್ಕೆ ಪುರೊಹಿತರು ಯಾರು ಸಿಗದೇ ಕೊನೆಗೆ ವರನೇ ಹೀಗೆ ಮಾಡಿದ್ನಾ ಅಂತಾ ಭಾವಿಸಬೇಡಿ. ಈತನಿಗೆ ಪುರೋಹಿತದಲ್ಲಿ ತುಂಬಾ ಆಸಕ್ತಿ ಇರೋದರಿಂದ ಹೀಗೆ ಮಾಡಿದ್ದಾನೆ ಎನ್ನಲಾಗಿದೆ.

ಈ ಅಪರೂಪದ, ವಿಚಿತ್ರ ಘಟನೆ ನಡೆದಿರೊದು‌ ಹರಿದ್ವಾರದ ಕುಂಜಾಬಹದ್ದೂರ್ ಪುರದಲ್ಲಿ ಈ ವಿಶಿಷ್ಟ ಘಟನೆ ನಡೆದಿದೆ. ವಿವೇಕ್ ಎಂಬ ಯುವಕ ಮಂತ್ರ ಪಠಿಸುತ್ತಲೇ ಮಾಂಗಲ್ಯ ಕಟ್ಟಿದ್ದಾನೆ. ವಿವೇಕ್ ಗೆ ಮೊದಲಿನಿಂದಲೂ ಪೂಜಾ, ಪುನಸ್ಕಾರದಲ್ಲಿ ವಿಶೇಷ ಆಸಕ್ತಿ ಇದ್ದಂತೆ. ಹೀಗಾಗಿ ತಾನೇ ಪೌರೋಹಿತ್ಯ ವಹಿಸಿದ್ದು. ಹಸೆಮಣೆ ಏರಿ ಮಂತ್ರ ಪಠಿಸುತ್ತಲೇ ಮಾಂಗಲ್ಯ ಧಾರಣೆ ಮಾಡಿದ್ದಾನೆ. ವಿವೇಕ್ ಮದುವೆಗೂ ಮುನ್ನ ಈ ಬಗ್ಗೆ ತನ್ನ ಮನೆಯವರು ಹಾಗೂ ಹುಡುಗಿಯ ಮನೆಯವರಿಂದ ಒಪ್ಪಿಗೆ ಪಡೆದಿದ್ದು ವಿಶಿಷ್ಟ ಮದುವೆಗೆ ಸಾಕ್ಷಿಯಾಗಿದೆ.

ಇನ್ನು ಮದುವೆ ಅಂದರೆ ಅಚಾರ, ವಿಚಾರ,ಶಾಸ್ತ್ರ ಸಂಪ್ರದಾಯ ಇದ್ದೇ ಇರುತ್ತೆ. ಹಿಂದೂ ಧರ್ಮದಲ್ಲೂ ಕೂಡ ಹಲವು ಶಾಸ್ತ್ರಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲಾಗುತ್ತೆ. ಅದರೆ ಇಲ್ಲೊಂದು ವಿಶಿಷ್ಟ ಮದುವೆ ನಡೆದಿದ್ದು, ವರನೇ ಮಂತ್ರ ಪಠಿಸುತ್ತಾ ಮದುವೆ ಶಾಸ್ತ್ರ ಮುಗಿಸಿ ತಾಳಿ ಕಟ್ಟಿದ್ದಾನೆ. ಈ ಮದುವೆ ಪ್ರಸಂಗದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪುಲ್ ವೈರಲ್ ಆಗ್ತಿದ್ದು ನೆಟ್ಟಿಗರು ಆಶ್ಚರ್ಯ ಪಡ್ತಿದ್ದಾರೆ.

Author:

share
No Reviews