ಉತ್ತರಾಖಂಡ : ಹೆಲಿಕಾಪ್ಟರ್ ಅಪಘಾತ ಐವರ ಸಾವು | ರಕ್ಷಣ ತಂಡದಿಂದ ಶೋಧ

ಉತ್ತರಾಖಂಡ :

ಖಾಸಗಿ ಹೆಲಿಕಾಪ್ಟರ್​ವೊಂದು ಅಪಘಾತಕ್ಕೀಡಾಗಿ ಐವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಾಖಂಡದ ಗಡಿ ಜಿಲ್ಲೆ ಉತ್ತರಕಾಶಿಯ ಬಳಿ ನಡೆದಿದೆ.

ಉತ್ತರಾಖಂಡದಲ್ಲಿ ಚಾರ್‌ಧಾಮ್ ಯಾತ್ರೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಇದು ಯಾತ್ರಿಕರ ಹೆಲಿಕಾಪ್ಟರ್ ಆಗಿದೆಯೋ ಅಥವಾ ಬೇರೆ ಯಾರದ್ದು ಎಂಬುದು ಇನ್ನೂ ಖಚಿತವಾಗಿಲ್ಲ ಎನ್ನಲಾಗ್ತಿದೆ. ಹೆಲಿಕಾಪ್ಟರ್ ಅಪಘಾತ ತಿಳಿದ ತಕ್ಷಣ, ಆಡಳಿತ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಘಟನಾ ಸ್ಥಳ ತಲುಪಿದ ತಂಡಗಳು ರಕ್ಷಣಾ ಕಾರ್ಯ ಕೈಗೊಂಡಿವೆ. ಇದು ಖಾಸಗಿ ಕಂಪನಿಯ  ಏರೋ ಟ್ಯಾಂಕ್‌ ಹೆಲಿಕಾಪ್ಟರ್‌ ಎಂದು ಹೇಳಲಾಗ್ತಿದೆ. ಪೊಲೀಸ್, ಸೇನಾ ಪಡೆ, ವಿಪತ್ತು ನಿರ್ವಹಣಾ QRT, ಆಂಬ್ಯುಲೆನ್ಸ್ ಅಪಘಾತದ ಸ್ಥಳದಲ್ಲಿ ಬೀಟು ಬಿಟ್ಟಿದ್ದಯ ರಕ್ಷಣಾ ಕಾರ್ಯ ನಡೆಸುತ್ತಿವೆ.

ಇನ್ನು ಹೆಲಿಕಾಪ್ಟರ್​ ಅಪಘಾತಗೊಂಡ ಸ್ಥಳವು ಕಾಡಿನ ಗುಡ್ಡಗಾಡು ಪ್ರದೇಶವಾಗಿದ್ದು, ರಕ್ಷಣಾ ತಂಡಗಳು ಅಲ್ಲಿಗೆ ತಲುಪಲು ಹೆಚ್ಚಿನ ಸಮಯ ಹಿಡಿದಿದೆ ಎನ್ನಲಾಗಿದೆ.

 

Author:

...
Sushmitha N

Copy Editor

prajashakthi tv

share
No Reviews