BUEATY TIPS :
ತಕ್ಷಣ ಮುಖದ ಕಾಂತಿ ಪಡೆಯಬೇಕೆಂದ್ರೆ ಈ 5 ಮನೆಮದ್ದುಗಳನ್ನು ಉಪಯೋಗಿಸಿ
1. ತುಪ್ಪ + ನಿಂಬೆರಸ
- 1 ಚಮಚ ತುಪ್ಪ + ನಿಂಬೆರಸ ಸೇರಿಸಿ.
- ಮುಖಕ್ಕೆ ಹಚ್ಚಿ, 5 ನಿಮಿಷ ಬಿಟ್ಟು ತಣ್ಣಗಿನ ನೀರಿನಿಂದ ತೊಳೆಯಿರಿ.
- ಇದು ಚರ್ಮವನ್ನು ಗ್ಲೋಯಿಂಗ್ ಕೊಡುತ್ತದೆ.
2. ಬಾಳೆಹಣ್ಣು + ಹಾಲು
- ಪಕ್ವವಾದ ಬಾಳೆ ಹಣ್ಣಿನ ಜೊತೆಗೆ ಒಂದು ಚಮಚ ಹಾಲು ಸೇರಿಸಿ ರುಬ್ಬಿ
- ಮುಖಕ್ಕೆ ಹಚ್ಚಿ, 10 ನಿಮಿಷ ಬಿಟ್ಟು ತೊಳೆಯಿರಿ.
- ಇದು ಮೃದುತ್ವ ಮತ್ತು ಕಾಂತಿಯನ್ನು ಕೊಡುತ್ತದೆ.
3. ಕಡಲೆ ಹಿಟ್ಟು + ಹಾಲು ಅಥವಾ ಮೊಸರು
- 1 ಚಮಚ ಕಡಲೆ ಹಿಟ್ಟು + ಸ್ವಲ್ಪ ಹಾಲು ಅಥವಾ ಮೊಸರು ಸೇರಿಸಿ ಪೇಸ್ಟ್ ಮಾಡಿ.
- ಮುಖಕ್ಕೆ ಹಚ್ಚಿ, 5–10 ನಿಮಿಷದವರೆಗೆ ಇಡೀ, ಪೇಸ್ಟ್ ಒಣಗಿದ ಮೇಲೆ ತೊಳೆಯಿರಿ.
- ಇದು ನಿಮ್ಮ ಡೆಡ್ ಸ್ಕಿನ್ ತೆಗೆದು,ಹಾಕಲು ಸಹಾಯ ಮಾಡುತ್ತದೆ.
4. ಅರಿಶಿನ (Turmeric) + ಹಾಲು
- ಒಂದು ಚಿಟಿಕೆ ಅರಿಶಿನ + 1 ಚಮಚ ಹಾಲು ಮಿಕ್ಸ್ ಮಾಡಿ.
- ಮುಖಕ್ಕೆ ಹಚ್ಚಿ, 5 ನಿಮಿಷ ಬಿಡಿ, ನಂತರ ತೊಳೆಯಿರಿ.
- ಇದು ಚರ್ಮದ ಬಣ್ಣವನ್ನು ಕಾಂತಿಗೊಳಿಸುತ್ತದೆ.
5. ಮುಖದ ಮಸಾಜ್ (Massage)
- ತಣ್ಣನೆಯ ಎಣ್ಣೆ (ಕೋಬ್ಬರಿ/ಅಲ್ಮಂಡ್) ಅಥವಾ ಅಲೋವೆರಾ ಜೆಲ್ ಬಳಸಿಕೊಂಡು ಮುಖಕ್ಕೆ 2–3 ನಿಮಿಷ ಮಸಾಜ್ ಮಾಡಿ.
- ರಕ್ತಸಂಚಾರ ಉತ್ತಮವಾಗಿ ತಕ್ಷಣ ಗ್ಲೋ ಕಾಣಿಸುತ್ತದೆ.