ಕೇಂದ್ರ ಬಜೆಟ್‌ 2025 : 8 ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್..!

 ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ದೇಶ

ನವದೆಹಲಿ:

ಮೋದಿ 3.0 ಸರ್ಕಾರದಲ್ಲಿ ಮಹಿಳಾ ಹಣಕಾಸು ಸಚಿವೆಯಾಗಿರೋ ನಿರ್ಮಲಾ ಸೀತಾರಾಮನ್‌ 8ನೇ ಬಾರಿ ದಾಖಲೆಯ ಬಜೆಟ್‌ ಮಂಡನೆ ಮಂಡಿಸಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ 10 ಬಾರಿ ಬಜೆಟ್‌ ಮಂಡಿಸಿದ್ದು, ಸೀತಾರಾಮನ್‌ ಇವರ ದಾಖಲೆಯನ್ನು ಸರಿಗಟ್ಟುವ ಹಾದಿಯಲ್ಲಿದ್ದಾರೆ. ಇನ್ನು 2019ರಲ್ಲಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದಾಗ  ನಿರ್ಮಲಾ ಸೀತಾರಾಮನ್‌ ಭಾರತದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಸಚಿವರಾದರು. ಇನ್ನು ಮೋದಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದಾಗಲು ನಿರ್ಮಲಾ ಅವರಿಗೆ ಹಣಕಾಸು ಖಾತೆ ನೀಡಲಾಗಿದ್ದು, ಇದೀಗ ಸತತ 8ನೇ ಬಾರಿಗೆ ಬಜೆಟ್‌ ಮಂಡಿಸಿ ದಾಖಲೆ ಬರೆದಿದ್ದಾರೆ.

ಬಜೆಟ್‌ ಆರಂಭಕ್ಕೂ ಮುನ್ನ ನಿರ್ಮಲಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮೊಸರು- ಸಕ್ಕರೆ ತಿನ್ನಿಸುವ ಮೂಲಕ ಶುಭಕೋರಿದರು. ನಿರ್ಮಲಾ ಬಜೆಟ್‌ನಲ್ಲಿ ತೆರಿಗೆದಾರರಿಗೆ ಭರ್ಜರಿ ಗಿಫ್ಟ್‌ ನೀಡಿದ್ದಾರೆ. ಮಧ್ಯಮ ವರ್ಗಕ್ಕೆ ಬಂಫರ್‌ ಘೋಷಿಸಿದ್ದಾರೆ. ಹೌದು ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಏರಿಕೆ ಮಾಡಿದ್ದು, 12 ಲಕ್ಷ ರೂಪಾಯಿವರೆಗೆ ಆದಾಯ ತೆರಿಗೆ ಇಲ್ಲ ಎಂದು ಬಜೆಟ್‌ನಲ್ಲಿ ಮಂಡಿಸಿದ್ದಾರೆ. 4 ಲಕ್ಷದಿಂದ 8 ಲಕ್ಷದವರೆಗೆ ಶೇಕಡಾ 5ರಷ್ಟು ತೆರಿಗೆ, 8 ಲಕ್ಷದಿಂದ 11 ಲಕ್ಷದವರೆಗೆ ಶೇಕಡಾ 10ರಷ್ಟು ತೆರಿಗೆ, 12 ರಿಂದ 15 ಲಕ್ಷದವರೆಗೆ ಶೇಕಡಾ 15ರಷ್ಟು ತೆರಿಗೆ, 15 ಲಕ್ಷದಿಂದ 20 ಲಕ್ಷದವರೆಗೆ ಶೇಕಡಾ 20ರಷ್ಟು, 20 ರಿಂದ 24 ಲಕ್ಷದವರೆಗೆ ಶೇಕಡಾ 25 ರಷ್ಟು ತೆರಿಗೆ, 24 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇಕಾಡ 30ರಷ್ಟು ತೆರಿಗೆ ಕಟ್ಟಬೇಕು ಅಂತಾ ಹೇಳಿದ್ದಾರೆ. 12 ಲಕ್ಷದವರೆಗೆ ತೆರಿಗೆ ತೆರಿಗೆ ವಿನಾಯ್ತಿ ಇದೆ ಅಂತಾ ಹೇಳಿದರು ಕೂಡ ತೆರಿಗೆ ಕಟ್ಟಬೇಕಾ ಅಂತಾ ಕೆಲವರ ಪ್ರಶ್ನೆ ಆಗುತ್ತೆ. ಹೌದು ನೀವು ವಾರ್ಷಿಕ 12 ಲಕ್ಷದವರೆಗೆ ಆದಾಯ ಗಳಿಸುವವರಾಗಿದ್ದರೆ ರಿಬೇಟ್‌ ಇರುವುದರಿಂದ ನೀವು ಯಾವುದೇ ಟ್ಯಾಕ್ಟ್‌ ಕಟ್ಟುವ ಅವಶ್ಯಕತೆ ಇಲ್ಲ ಅಂತಾ ನಿರ್ಮಲಾ ಸೀತಾರಾಮನ್‌ ತಮ್ಮ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಇನ್ನು ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂಪಾಯಿಯನ್ನು ಮೀಸಲಿಟ್ಟಿರೋದಾಗಿ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಇದರ ಜೊತೆಗೆ ಹಿರಿಯ ನಾಗರೀಕರಿಗೆ ತೆರಿಗೆ ವಿನಾಯ್ತಿ ಮಿತಿಯಲ್ಲಿ ದ್ವಿಗುಣಗೊಳಿಸುವುದಾಗಿ ನಿರ್ಮಲಾ ಘೋಷಣೆ ಮಾಡಿದ್ದಾರೆ. ಬಜೆಟ್‌ ಮಂಡನೆ ವೇಳೆ ಅನೇಕ ವಸ್ತುಗಳ ಮೇಲಿನ ಕಸ್ಟಮ್‌ ಸುಂಕವನ್ನು ಕಡಿತಗೊಳಿಸುವುದಾಗಿ ನಿರ್ಮಲಾ ಘೋಷಿಸಿದ್ದು. ಅನೇಕ ವಸ್ತುಗಳ ಬೆಲೆಯನ್ನು ಕಡಿಯಾಗುವ ನಿರೀಕ್ಷೆ ಇದೆ. ಎಲೆಕ್ಟ್ರಾನಿಕ್‌, ಕೆಲ ಆಯ್ದ ಔಷಧಿಗಳು, ಮೊಬೈಲ್‌ ಫೋನ್‌, ಎಲೆಕ್ಟ್ರಿಕ್‌ ಕಾರು, ಬ್ಯಾಟರಿ, ಚರ್ಮದಿಂದ ಮಾಡಿರೋ ವಸ್ತುಗಳು, ಎಲ್‌ಇಡಿ ಟಿವಿಗಳು, ಸ್ವದೇಶಿ ಬಟ್ಟೆಗಳು ಸೇರಿ ಅನೇಕ ವಸ್ತುಗಳ ಬೆಲೆ ಇಳಿಕೆಯಾಗಲಿವೆ. ಇನ್ನು ಮೊಬೈಲ್‌ ರಿಚಾರ್ಜ್‌ ಯೋಜನೆಗಳು, ಇಂಟರ್‌ನೆಟ್‌ ಸೇವೆಗಳು, ವಿಮಾನ ಟಿಕೆಟ್‌ ದರ, ಚಿನ್ನ ಮತ್ತು ಬೆಳ್ಳಿ, ಆಮದು ಕಾರು, ತಂಬಾಕು ಮತ್ತು ಸಿಗರೇಟ್‌ ಬೆಲೆಗಳು ಏರಿಕೆಯಾಗಲಿವೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಇದರ ಜೊತೆಗೆ ಬಜೆಟ್‌ನಲ್ಲಿ ವಿಶೇಷ ಕೊಡುಗೆಯನ್ನು ನೀಡಲಾಗಿದ್ದು, ರೈತರಿಗೆ ಮತ್ತಷ್ಟು ಸಾಲವನ್ನು ನೀಡುವ ದೃಷ್ಟಿಯಿಂದ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ನ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದಿಷ್ಟು ಅಲ್ಲದೇ ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬಜೆಟ್‌ನಲ್ಲಿ ಮಂಡಿಸಿರೋ ಕೊಡುಗೆಗಳು ಮಾರ್ಚ್‌ನಿಂದ ಅನ್ವಯವಾಗಲಿದ್ದು, ಯಾವೆಲ್ಲಾ ಇಳಿಕೆಯಾಗಲಿವೆ, ಯಾವೆಲ್ಲಾ ಬೆಲೆಗಳು ಏರಿಕೆಯಾಗಲಿವೆ ಅನ್ನೋದನ್ನು ಕಾದುನೋಡಬೇಕಿದೆ.

Author:

...
Editor

ManyaSoft Admin

Ads in Post
share
No Reviews