ತುಮಕೂರು ಮಹಾನಗರ ಪಾಲಿಕೆತುಮಕೂರು
ತುಮಕೂರು :
ತುಮಕೂರು ಪಾಲಿಕೆ ಈ ಹಿಂದೆ ನಗರ ಸಭೆ ಆಗಿದ್ದು ಇದೀಗ ಮಹಾನಗರ ಪಾಲಿಕೆಯಾಗಿ ಬೆಳೆದಿದೆ. ಪಾಲಿಕೆಗೆ ಕೋಟ್ಯಾಂತರ ರೂಪಾಯಿ ತೆರಿಗೆ ಕೂಡ ಬರುತ್ತಿದೆ. ಹೀಗಿದ್ದರು ಕೂಡ ಪಾಲಿಕೆಯಲ್ಲಿ ಜನರಿಗೆ ಆಗಬೇಕಾದ ಕೆಲಸದಲ್ಲಿ ವಿಳಂಬವಾಗ್ತಿದ್ದು, ಜನರು ನಿತ್ಯ ಪಾಲಿಕೆಯಲ್ಲಿ ಅಲೆದಾಡುವಂತಾಗಿದೆ, ಅಲ್ಲಿಗೆ ಹೋದರೆ ಇಲ್ಲಿಗೆ ಹೋಗಿ ಅಂತಾರೆ, ಆ ಡಾಕ್ಯುಮೆಂಟ್ ಇಲ್ಲ, ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತಾ ಜನರನ್ನು ಗೋಳಾಡಿಸುತ್ತಿದ್ದಾರೆ.
ಹೌದು ಪಾಲಿಕೆ ಆಸ್ತಿ ವ್ಯವಹಾರಗಳಲ್ಲಿನ ಮೋಸ ತಡೆಗಟ್ಟಲು, ಇ-ಖಾತೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಗ್ರಾಮೀಣ ಭಾಗದಲ್ಲಿ ಇ- ಸ್ವತ್ತು ಹಾಗೂ ನಗರ ಪ್ರದೇಶದಲ್ಲಿ ಇ-ಆಸ್ತಿ ಕೇಂದ್ರೀಕೃತ ತಂತ್ರಾಂಶ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ ತುಮಕೂರಿನಲ್ಲಿ ಇ- ಅಸ್ತಿ ಮಾಡಿಸಿಕೊಳ್ಳಲು ದೊಡ್ಡ ದೊಡ್ಡ ಡೆವಲಪರ್ಸ್ ಗಳೇ ಪಾರುದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇದು ಪ್ರಜಾಶಕ್ತಿ ಮಾಧ್ಯಮದ ರಿಯಾಲಿಟಿ ಚೆಕ್ನಲ್ಲಿ ಬಯಲಾಗಿದೆ.
ನಗರದ ಸ್ಪೂರ್ತಿ ಡೆವೆಲಪರ್ಸ್ ಚಿದಾನಂದ ಅವರು ಇಂದು ಮಹಾನಗರ ಪಾಲಿಕೆಯ ಅಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಚಿದಾನಂದ ಅವರು ಪಾಲಿಕೆ ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದಿರೋ ದೃಶ್ಯಗಳು ಪ್ರಜಾಶಕ್ತಿ ಕ್ಯಾಮೆರಾಗೆ ಸಿಕ್ಕಿದ್ದು, ಯಾಕೆ ಅಂತಾ ವರದಿಗಾರರು ಅವರ ಬಳಿ ಹೋಗಿ ವಿಚಾರಿಸಿದಾಗ ಪಾಲಿಕೆಯ ಅವ್ಯವಸ್ಥೆ ಬಗ್ಗೆ ಪ್ರಜಾಶಕ್ತಿ ಕ್ಯಾಮೆರಾ ಮುಂದೆ ಬಯಲು ಮಾಡಿದರು. ಇ-ಖಾತೆ ಸರ್ಕಾರ ಜಾರಿಗೆ ತಂದಿರೋದು ಸ್ವಾಗತ, ಆದರೆ ತುಮಕೂರು ಮಹಾನಗರ ಪಾಲಿಕೆ ವಿಳಂಬ ನೀತಿಯನ್ನು ಅನಿಸುತ್ತದೆ. ಇ-ಖಾತೆ ಅನ್ನೋದು ಕಣ್ಣಲ್ಲಿ ನೀರ್ ಬರುತ್ತಾ ಇಲ್ಲ , ಕಣ್ಣಲ್ಲಿ ರಕ್ತ ಬರಿಸುವಂತಹ ವ್ಯವಸ್ಥೆ ಆಗ್ತಾ ಇದೆ. ನನ್ನಂತಹ ಡೆವಲಪರ್ಸ್ ಗೆ ಈ ರೀತಿ ಆದರೆ ಸಾರ್ವಜನಿಕರ ಗತಿ ಏನು ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದು ಒಬ್ಬ ಡೆವಲಪರ್ಸ್ ಕಥೆ ಆದರೆ ಮತ್ತೊಬ್ಬ ಸಾರ್ವಜನಿಕರು ಪಾಲಿಕೆಯಲ್ಲಿ ಇ- ಖಾತೆಗೆ ಅಲೆದಾಡುತ್ತಿದ್ದು, ಪಾಲಿಕೆಯ ಅವ್ಯವಸ್ಥೆ ಬಗ್ಗೆ ಪ್ರಜಾಶಕ್ತಿ ಕ್ಯಾಮೆರಾ ಮುಂದೆ ತಿಳಿಸಿದರು. ರೆವೆನ್ಯೂ ಮಿನಿಸ್ಟರ್ ಹೇಳ್ತಾರೆ ಏಳು ದಿನದಲ್ಲಿ ಖಾತೆ ಮಾಡಬೇಕೆಂದು, ಆದರೆ ತಿಂಗಳುಗಟ್ಟಲೆ ಅಲೆದಾಡಿಸುತ್ತಾರೆ. 2.30 ವರೆಗೂ ಸಾರ್ವಜನಿಕರಿಗೆ ಅವಕಾಶ ಇಲ್ಲ ಅಂತಾರೆ ಆನಂತರ ಬಂದರೆ ಅಧಿಕಾರಿಗಳು ಇರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಈ ಹಿಂದೆ ಪಾಲಿಕೆ ಆಯುಕ್ತೆ ಅಶ್ಚಿಜಾ ಇನ್ನು ಮುಂದೆ ಇ- ಆಸ್ತಿ ಪ್ರಾಬ್ಲಂ ಆಗಲ್ಲ ಅಂತಾ ಭರವಸೆ ಕೊಟ್ಟಿದ್ದರು. ಆದರೆ ಅವರ ಭರವಸೆ ಹುಸಿಯಾಗಿದೆ. ಇವತ್ತು ಪಾಲಿಕೆ ಮುಂದೆ ದೊಡ್ಡ ದೊಡ್ಡ ಡೆವಲಪರ್ಸ್ಗಳೇ ಇ- ಖಾತೆ ಮಾಡಿಸಿಕೊಳ್ಳಲು ಹೆಣಗಾಡುವಂತೆ ಮಾಡಿದ್ದು, ಪಾಲಿಕೆ ಎಷ್ಟು ನಿರ್ಲಕ್ಷ್ಯ ವಹಿಸಿದೆ ಎಂಬುವುದು ಇದರಿಂದ ಬಟಾ ಬಯಲಾಗಿದೆ.