ಕಲಬುರಗಿ:
ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ನೇಣಿಗೆ ಶರಣಾಗಿರುವ ಘಟನೆ ಕಲಬುರಗಿಯ ಮಹಾದೇವ ನಗರದಲ್ಲಿ ನಡೆದಿದೆರಾಕೇಶ್ ಎಂಬಾತ ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ 4 ತಿಂಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ರಾಕೇಶ್ ಮತ್ತು ಮೇಘ ಮದವೆಯಾಗಿದ್ದರು. ಮದುವೆ ನಂತರ ಮನೆ ಕೆಲಸ ಸೇರಿ ಇತರೆ ವಿಷಯಗಳಿಗೆ ರಾಕೇಶ್‌ಗೆ ಪತ್ನಿ ಮೇಘ ನಿತ್ಯ ಕಿರುಕುಳ ಕೊಡುತ್ತಿದ್ದಳು ಎಂದು ಆರೋಪಿಸಲಾಗಿದೆ.
ಪತಿಗೆ ಪತ್ನಿ ಮಾತುಕೇಳದೆ ಇದ್ದರೆ ಪೋಲೀಸರಿಗೆ ಕಂಪ್ಲೆಂಟ್ ಕೊಡುತ್ತೇನೆ ಎಂದು ಪ್ರತಿನಿತ್ಯ ಬೆದರಿಸುತ್ತಿದ್ದಳು. ಇದೇ ಕಾರಣಕ್ಕೆ ಪತಿ ರಾಕೇಶ್ ಮನನೊಂದು ನೇಣಿಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ. ರಾಕೇಶ್ ಪತ್ನಿ ಮೇಘ ಮತ್ತು ಸಂಬಂಧಿಕರ ವಿರುದ್ಧ ರಾಕೇಶ್ ಕುಟುಂಬದವರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.