TUMAKURU: ರಾಧಾಕೃಷ್ಣ ರಸ್ತೆಯಲ್ಲಿ ಯುಜಿಡಿ ಓಪನ್

ತುಮಕೂರು: 

ತುಮಕೂರನ್ನು ಎರಡನೇ ಬೆಂಗಳೂರು ಎಂದು ಕರೆಯುತ್ತಾರೆ. ಆದರೆ ಇಲ್ಲಿ ಸಮಸ್ಯೆಗಳ ಸರಮಾಲೆ ಹಾಸುಹೊಕ್ಕಾಗಿವೆ. ತುಮಕೂರಿನ ನಗರಾದ್ಯಂತ ಹಲವೆಡೆ ರಸ್ತೆ, ಪಾದಚಾರಿ ಮಾರ್ಗ, ಕಸದ ಸಮಸ್ಯೆಯಿಂದ ಇನ್ನು ಮುಕ್ತಿ ಸಿಕ್ಕಿಲ್ಲ. ಉಪ್ಪಾರಹಳ್ಳಿ ಬ್ರಿಡ್ಜ್‌ ಕೆಳಭಾಗದಲ್ಲಿ ಯುಜಿಡಿ ಓಪನ್‌ ಆಗಿದ್ದು, ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು, ತುಮಕೂರು ಸ್ಮಾರ್ಟ್‌ ಸಿಟಿ ಎಂದು ಬಿರುದು ಗಳಿಸಿದ್ದು, ಇಡೀ ರಾಜ್ಯವೇ ತುಮಕೂರನ್ನ ಒಮ್ಮೆ ತಿರುಗಿ ನೋಡುವಂತೆ ಮಾಡಿದೆ. ಆದ್ರೆ ಇಲ್ಲಿನ ಸಮಸ್ಯೆಗಳು ಮಾತ್ರ ಇನ್ನು ಜೀವಂತವಾಗಿವೆ. ತುಮಕೂರಿನ ಉಪ್ಪಾರಹಳ್ಳಿಗೆ ಹೋಗುವ ರಾಧಾಕೃಷ್ಣ ರಸ್ತೆ ಬ್ರಿಡ್ಜ್‌ ಪಕ್ಕದಲ್ಲಿ ಯುಜಿಡಿ ಓಪನ್‌ ಆಗಿದ್ದು, ಬೆಳಗ್ಗಿನಿಂದಲೂ ಸಾರ್ವಜನಿಕರೂ, ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಇದುವರೆವಿಗೂ ಯಾವೊಬ್ಬ ಪಾಲಿಕೆಯ ಅಧಿಕಾರಿಯು ಇತ್ತ ಗಮನಹರಿಸಿಲ್ಲ.

ಪ್ರಜಾಶಕ್ತಿ ಟಿವಿಯು ನಗರದ ಸಮಸ್ಯೆಗಳ ಕುರಿತು ವರದಿಯನ್ನು ಬಿತ್ತರಿಸುತ್ತ ಬಂದಿದ್ದು, ಪಾಲಿಕೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತವನ್ನು ಎಚ್ಚರಿಸುತ್ತಾ ಬಂದಿದೆ. ಆದ್ರೂ ಕೂಡ ಇಂದಿಗೂ ನಿರ್ಲಕ್ಷ್ಯತನವನ್ನು ತೋರಿಸುತ್ತಿರುವುದು ವಿಷಾದನೀಯ ಸಂಗತಿ. ಇನ್ನು ಮುಂದೆಯಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಕೊಡಬೇಕಿದೆ.

 

Author:

...
Kusuma V

Chief Executive Officer

prajashakthi tv

share
No Reviews