ಕೊಪ್ಪಳ :
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದ ಕಾಲುವೆ ಬಳಿ ಇಬ್ಬರು ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಹಾಗೂ ಹಲ್ಲೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಇಂದು ಗಂಗಾವತಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಸಾಯಿನಗರದ ಗೌಂಡಿ ಕೆಲಸ ಮಾಡುವ ಮಲ್ಲೇಶ್ ಅಲಿಯಾಸ್ ಹಂದಿ ಮಲ್ಲೇಶ್ ಅಯ್ಯಪ್ಪ (22) ಹಾಗೂ ಮಿಷನ್ ಕೆಲಸ ಮಾಡುವ ಚೇತನ್ ಸಾಯಿ (21) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಆರೋಪಿ ಪತ್ತೆಗಾಗಿ ಐಜಿ ಲೋಕೇಶ್ ಸೂಚನೆ ಮೇರೆಗೆ ಗಂಗಾವತಿ ಡಿವೈಎಸ್ಪಿ ನೇತೃತ್ವದಲ್ಲಿ ಒಟ್ಟು ಆರು ತಂಡಗಳನ್ನು ರಚಿಸಲಾಗಿದೆ.
ನಾಲೆಗೆ ಬಿದ್ದ ಮೂರು ಪುರುಷರ ಪೈಕಿ ಇಬ್ಬರು ಈಜಿ ಜೀವ ಉಳಿಸಿಕೊಂಡಿದ್ದು, ಓರ್ವ ಒಡಿಶಾದ ಮತ್ತೊಬ್ಬ ಪ್ರವಾಸಿ ಬಿಬಾಸ್ ಈಜಲು ಬಾರದೇ ಸಾವನ್ನಪ್ಪಿದ್ದಾರೆ. ಈತನ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ.