ಮಂಗಳೂರು : ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಯುವತಿ ನಿಗೂಢ ಸಾವಿಗೆ ಟ್ವಿಸ್ಟ್

ಮಂಗಳೂರು : ಧರ್ಮಸ್ಥಳ  ಮೂಲದ ಏರೋಸ್ಪೆಸ್ ಎಂಜಿನಿಯರ್ ಪಂಜಾಬ್ ಕಾಲೇಜಿನಲ್ಲಿ ಸಾವು  ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಧರ್ಮಸ್ಥಳದ ಬೊಳಿಯೂರು ಗ್ರಾಮದ ನಿವಾಸಿ ಆಕಾಂಕ್ಷ, ಕಳೆದ 6 ತಿಂಗಳಿಂದ ದೆಹಲಿಯ ಸ್ಪೈಸ್ ಜೆಟ್ ಏರೋಸ್ಪೇಸ್ನಲ್ಲಿ ಉದ್ಯೋಗದಲ್ಲಿದ್ದಳು. ಹೆಚ್ಚಿನ ತರಬೇತಿಯ ಸಲುವಾಗಿ ಜರ್ಮನಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಆಕಾಂಕ್ಷ, ಶೈಕ್ಷಣಿಕ ದಾಖಲೆಗಳನ್ನು ಪಡೆದುಕೊಳ್ಳಲು ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಗೆ ಹಾಜರಾಗಿದ್ದಳು.

ಆದರೆ, ಅಚಾನಕ್ ಆಕಾಂಕ್ಷ ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಎಲ್ಲರನ್ನೂ ಚಕಿತರಗೊಳಿಸಿತ್ತು. ಆಕಾಂಕ್ಷಳ ಪೋಷಕರು, ಇದು ಆತ್ಮಹತ್ಯೆಯಲ್ಲ; ಅವರ ಮಗಳಿಗೆ ಕಾಲೇಜಿನವರೇ ಏನಾದರೂ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಆಕಾಂಕ್ಷ ಯೂನಿವರ್ಸಿಟಿಯ ಪ್ರೊಫೆಸರ್ ಬಿಜಿಲ್ ಮ್ಯಾಥ್ಯೂ ಎಂಬವರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಕೇರಳದ ಕೊಟ್ಟಾಯಂನ ಮೂಲದ ಮ್ಯಾಥ್ಯೂ, ಈಗಾಗಲೇ ಎರಡು ಮಕ್ಕಳ ತಂದೆ. ಆಕಾಂಕ್ಷ ಈ ಸಂಬಂಧವನ್ನು ಮದುವೆಯ ಮಟ್ಟಕ್ಕೆ ತಲುಪಿಸಲು ಒತ್ತಾಯಿಸಿದ ಹಿನ್ನೆಲೆಯಲ್ಲಿ, ಮ್ಯಾಥ್ಯೂ ಅವರ ಮನೆಯಲ್ಲಿ ಜಗಳ ನಡೆದಿತ್ತು. ಕಾಲೇಜಿನಲ್ಲಿಯೂ ಜಗಳ ಮುಂದುವರಿದಿದ್ದು, ಬಳಿಕ ಕಾಲೇಜಿನಲ್ಲೂ ಜಗಳ ಮಾಡಿ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಇನ್ನು  ಈ ಘಟನೆಗೆ ಸಂಬಂಧಪಟ್ಟಂತೆ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರೊಫೆಸರ್ ಬಿಜಿಲ್ ಮ್ಯಾಥ್ಯೂ ವಿರುದ್ಧ ಪ್ರಕರಣ ದಾಖಲಾಗಿದೆ.

ಇಂದು ಬೆಳಿಗ್ಗೆ ಶವಪರೀಕ್ಷೆಯ ಬಳಿಕ ಆಕಾಂಕ್ಷಳ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು. ಇಂದು ಸಂಜೆ ಧರ್ಮಸ್ಥಳದ ಬೊಳಿಯೂರುನಲ್ಲಿ ಆಕಾಂಕ್ಷಳ ಅಂತ್ಯಸಂಸ್ಕಾರ ನೆರವೇರಲಿದೆ.

 

Author:

...
Keerthana J

Copy Editor

prajashakthi tv

share
No Reviews